ಬಿಗ್ ಬಾಸ್ ಮನೆಯಲ್ಲಿ ಯಾವ ವಿಚಾರಕ್ಕೆ ಜಗಳ ಆಗುತ್ತೋ ಇಲ್ವೋ ಅಡುಗೆ ಮನೆಯ ವಿಷ್ಯದಲ್ಲಿ ಮಾತ್ರ ತಪ್ಪದೇ ಆಗುತ್ತದೆ. ಅದಿಲ್ಲ ಇದಿಲ್ಲ, ನಮಗೇಕೆ ಸಿಗುತ್ತಿಲ್ಲ ಅಂತೆಲ್ಲಾ ವಾರ್ ಶುರುವಾಗುತ್ತದೆ. ತೀರಾ ಬಾಲಿಶ ಎನಿಸಿದ್ದು ಆ್ಯಪಲ್ ಗಾಗಿ ಚೈತ್ರಾ ಕೊಟ್ಟೂರ್ ಮೇಲೆ ಮನೆ ಮಂದಿಯೆಲ್ಲಾ ಮುಗಿ ಬಿದ್ದದ್ದು!

 

ಹಸಿವು ಎಂದು ಅಡುಗೆ ಮನೆಯಿಂದ ಆ್ಯಪಲ್ ತೆಗೆದುಕೊಂಡು ಚೈತ್ರ ಕೊಟ್ಟೂರ್‌ ತಿನ್ನುತ್ತಾರೆ. ಅಷ್ಟಕ್ಕೇ ಮನೆಮಂದಿಯೆಲ್ಲಾ ಏನೋ ತಪ್ಪು ಮಾಡಿದರು ಅನ್ನೋ ಹಾಗೆ ಜಗಳಕ್ಕೆ ನಿಲ್ಲುತ್ತಾರೆ. ಕಟುವಾಗಿ ಮಾತನಾಡುತ್ತಾರೆ. ಸಿತಾರಾ ಅಲಿಯಾಸ್ ಸುಜಾತಾ ನಡೆದುಕೊಂಡ ರೀತಿಯನ್ನು ಇಡೀ ಕರ್ನಾಟಕ ನೋಡಿದೆ. ಹಿರಿಯ ಕಲಾವಿದೆಯಾಗಿ ತೀರಾ ಬಾಲಿಶವಾಗಿ ನಡೆದುಕೊಂಡು ತಮ್ಮೊಳಗಿನ ಸಣ್ಣತನವನ್ನು ತೋರಿಸಿಯೇ ಬಿಟ್ಟರು.

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!

 

ಬಿಗ್ ಬಾಸ್ ಮನೆ ಮಂದಿಗೆ ಗೊತ್ತಿರಲಿಕ್ಕಿಲ್ಲ! ಈ ಪ್ರಹಸನಗಳನ್ನು ನೋಡಿದ ಹೊರಗಿನ ಪ್ರಪಂಚ ಎಷ್ಟರ ಮಟ್ಟಿಗೆ ಅದನ್ನು ವ್ಯಂಗ್ಯವಾಗಿ ತೆಗೆದುಕೊಂಡಿದೆ ಎಂದು. ಆದರೆ ಆ್ಯಪಲ್ ತಿಂದ ಚೈತ್ರಾಗೆ ಆಗಿದ್ದೆಲ್ಲಾ ಒಳ್ಳೆಯದೇ ಆಗಿದೆ. ಹೇಗೆ ನೋಡಿ.

 

ಎರಡು-ಮೂರು ಪೀಸ್ ಸೇಬು ತಿಂದ ಚೈತ್ರಾಳಿಗೆ ಜಗಳವಾದ ನಂತರ ಏನೂ ತಿನ್ನಲು ಮನಸ್ಸು ಬರುವುದಿಲ್ಲ, ವಾಸುಕಿ ವೈಭವ್ ತನ್ನ ಸೇಬನ್ನು ಕೊಡುತ್ತಾರೆ ಆಕೆಗೆ ಅಲ್ಲಿ ಇನ್ನೊಂದು ಫಲ ಸಿಗುತ್ತದೆ. ಆನಂತರ ಅಡುಗೆ ಮನೆಯ ಬಗ್ಗೆ ಮನಸ್ಸು ನೋವಾಗುವಂತೆ ಮಾತನಾಡಿದ ಸಿತಾರ ಟಾಸ್ಕ್‌ ಪಾಲಿಸುವುದರಲ್ಲಿ ವಿಫಲರಾಗಿ 1000 ಲಕ್ಷ್ಯೂರಿ ಪಾಯಿಂಟ್ಸ್‌ ಕಳೆದುಕೊಳ್ಳುತ್ತಾರೆ ಇದರಿಂದ ಕಳಪೆ ಪ್ರದರ್ಶನ ಬೋರ್ಡ್‌ ಪಡೆದು ಜೈಲು ಸೇರುತ್ತಾರೆ. ಆನಂತರ ರೆಫ್ರಿಜರೇಟರ್ ಚಟುವಟಿಕೆಯಲ್ಲಿ ಚಾಕೋಲೇಟ್‌ ಸಿಗುತ್ತದೆ. ಒಂದಾದ ಮೇಲೊಂದು ಲಕ್ ಚೈತ್ರಾಳನ್ನು ಹುಡುಕಿಕೊಂಡು ಬರುತ್ತಿದೆ.

ಬಿಗ್ ಬಾಸ್ ಸ್ಟೈಲ್‌ವಾಲಿ; ರಿಯಲ್ ಲೈಫ್‌ನಲ್ಲಿ ಯಾಕಿಂಗೆ?

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತಿದ್ದು ಅದನ್ನು ಸಾಧ್ಯವಾದ ರೀತಿಯಲ್ಲಿ ನಿಮ್ಮ ಮುಂದೆ ಬರವಣಿಗೆ ರೂಪದಲ್ಲಿ ತೋರಿಸುವುದೇ ನಮ್ಮ ಪ್ರಯತ್ನ!