ಬಿಗ್‌ ಬಾಸ್‌ ಮನೆಯಲ್ಲಿ ಕೋಪ, ಜಗಳ, ಲವ್, ಕೇರ್‌ ಇವೆಲ್ಲಾ ಮಾಮೂಲಿ. ಅದರಲ್ಲೂ ನಟ-ನಟಿಯರು ಬೇಗ ಗಂಟು ಹಾಕಿಕೊಳ್ಳುತ್ತಾರೆ ಎಂಬುವುದು ವೀಕ್ಷಕರ ಅಭಿಪ್ರಾಯ. ಮೊದಲ ವಾರದಲ್ಲೇ ಅತಿ ಹೆಚ್ಚು ವೋಟ್‌ ಪಡೆದು ನಾಮಿನೇಶನ್‌ ಪಟ್ಟಿಯಲ್ಲಿ ಸೇರಿಕೊಂಡಿರುವ ಸ್ಪರ್ಧಿ ಚೈತ್ರಾ ಕೊಟ್ಟೂರ್‌ ಟಾಸ್ಕ್ ನಡೆದ ನಂತರ ಮಧ್ಯರಾತ್ರಿ 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಶೈನ್‌ ಶೆಟ್ಟಿ ಜೊತೆ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಮನಸ್ಸಲ್ಲಿದ್ದ ಲವ್‌ ವಿಚಾರವನ್ನು ತೆರೆದಿಟ್ಟಿದ್ದಾರೆ.

ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ ಬಳಿಕ ಶೈನ್‌ ಶೆಟ್ಟಿ ಜೊತೆ ಕಾಣಿಸಿಕೊಳ್ಳದ ಚೈತ್ರಾ ಕುಟ್ಟೂರ್ 3 ನೇ ಎಪಿಸೋಡ್‌ನಲ್ಲಿ ಸ್ಮಿಮ್ಮಿಂಗ್‌ ಪೂಲ್‌ ಹತ್ತಿರ ಶೈನ್‌ ಜೊತೆ ತಡರಾತ್ರಿಯಲ್ಲಿ ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಈ ವೇಳೆ ' ನಿಮಗೆ ಲವ್‌ ಅಥವಾ ಕ್ರಶ್‌ ಆಗಿಲ್ವಾ? ಯಾರನ್ನಾದ್ರೂ ಪ್ರೀತಿಸಿದ್ದೀರಾ?' ಎಂದು ಪ್ರಶ್ನಿಸುತ್ತಾರೆ. ಸಿಕ್ಕಾಪಟ್ಟೆ ಕಾಮ್‌ ಆ್ಯಂಡ್ ಕಂಪೋಸ್ ವ್ಯಕ್ತಿತ್ವ ಉಳ್ಳ ಶೈನ್ ಎಕ್ಸ್ಟೆಟ್ ಆಗದೇ ಸಮಾಧಾನವಾಗಿ ಉತ್ತರಿಸಿದ್ದಾರೆ.

ರಾಜು ತಾಳಿಕೋಟೆ ‘ಕೈ-ಚೇಷ್ಟೆಗೆ’ ಬುಸುಗುಟ್ಟಿದ ‘ನಾಗಿಣಿ’

ಶೈನ್ ಉತ್ತರಿಸುತ್ತಿದ್ದಂತೆ 'ನೀವು ಮದುವೆ ಆಗುವ ಯೋಚನೆ ಮಾಡಿದ್ದೀರಾ? ನನ್ನ ಬಗ್ಗೆ ನಿಮಗೆ ಏನು ಅನಿಸುತ್ತದೆ? ನೀವು ಇಷ್ಟ ಪಡುವ ಹುಡುಗಿ ಹೇಗಿರಬೇಕು' ಎಂದು ಚೈತ್ರಾ ಪ್ರಶ್ನಿಸುವ ಮೂಲಕ ಶೈನ್‌ಗೆ ಪರೋಕ್ಷವಾಗಿ ಮದುವೆ ಪ್ರಪೋಸಲ್‌ ಇಟ್ಟಿದ್ದಾರೆ. ಸಾಹಿತ್ಯ, ಸಂಗೀತಾ ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರುವ ಚೈತ್ರಾ ತುಂಬಾ ಟ್ಯಾಲೆಂಟೆಡ್‌ ಎಂದು ಶೈನ್‌ ಹೊಗಳುತ್ತಾರೆ.