ಬೇರೆ ಬೇರೆ ವೃತ್ತಿ, ಬೆಳೆದು ಬಂದ ರೀತಿ ಬೇರೆ ಆದರೂ ಅವರೆಲ್ಲರೂ ಬಿಗ್ ಬಾಸ್‌ ಮನೆಯಲ್ಲಿ ಸಮಾನರೇ. ಕನ್ನಡ ಚಿತ್ರರಂಗದ ಬರಹಗಾರ್ತಿ, ಸಹ ನಿರ್ದೇಶಕಿ ಹಾಗೂ ನಟಿ ಚೈತ್ರಾ ಕೊಟೂರು Untouchable? ಅಸ್ಪೃಶ್ಯತೆ ಬಗ್ಗೆ ಮಾತನಾಡಿರುವುದರಿಂದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

BB7: Untouchable ಅಂದ ಚೈತ್ರಾ ವಿರುದ್ಧ ಹೋರಾಟಕ್ಕಿಳಿದ ಅಂಬೇಡ್ಕರ್‌ ಸೇನೆ?

 

ದೀಪಿಕಾ ದಾಸ್ ಮನೆಯಲ್ಲಿ ಕೆಲವರೊಂದಿಗೆ ಮಾತನಾಡುತ್ತಾರೆ ಇನ್ನು ಕೆಲವರೊಂದಿಗೆ ಬೆರೆಯಲು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಹರೀಶ್‌ ರಾಜ್‌ ಜೊತೆ ಚರ್ಚಿಸುವಾಗ ಚೈತಾ 'ದೀಪಿಕಾ ಎಲ್ಲರಿಗೂ ತಿನ್ನಿಸುತ್ತಾರೆ. ತಬ್ಬಿಕೊಳ್ಳುತ್ತಾರೆ. ಮುತ್ತು ಕೊಡುತ್ತಾರೆ ಆದರೆ ನನ್ನ ಮಾತ್ರ ಮುಟ್ಟಲ್ಲ. ಏನು untouchable ಆ ನಾವು? ಅಸ್ಪೃಶ್ಯರಾ ನಾವು?' ಎಂದು ಹೇಳುತ್ತಾರೆ.

BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ?

 

ಚೈತ್ರಾ ಮಾತುಗಳನ್ನು ಕೇಳಿ ಬೀದರ್ ಜಿಲ್ಲೆಯ ಅಂಬೇಡ್ಕರ್ ಸೇನೆ ಹೋರಾಟಕ್ಕೆ ಕರೆ ನೀಡಿತ್ತು. ಇದರ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯಲು ಬಿಗ್ ಬಾಸ್ ಚೈತಾಳನ್ನು ಕನ್ಫೆಷನ್ ರೂಮ್‌ಗೆ ಕರೆಯುತ್ತಾರೆ.

'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು? .

'ಯಾವುದೇ ಜಾತಿ ಅಥವಾ ಧರ್ಮದ ನೆಲೆಯಲ್ಲಿ ಇದನ್ನು ಬಳಸಿಲ್ಲ. ನನ್ನಿಂದ ನಿಮ್ಮ ಮನಸ್ಸಿಗೆ ಬೇಸರ ಆಗಿದ್ದರೆ ದಯವಿಟ್ಟು ಕ್ಷಮಿಸಿ. ಕುವೆಂವು ಅವರು ಹೇಳಿದ ಹಾಗೆ ನಾನು ವಿಶ್ವಮಾನವಳು ಯಾವುದೇ ಜಾತಿ, ಧರ್ಮ ಅಥವಾ ಮತಕ್ಕೆ ನಾನು ಒಳಗಾಗುವುದಿಲ್ಲ. ಅಸ್ಪೃಶ್ಯತೆ ಅನ್ನೋದು ಇಲ್ಲ. ನಾನು ಮನುಷ್ಯತ್ವಕ್ಕೆ ಬೆಲೆ ಕೋಡುತ್ತೇನೆ. ಈ ಭೂಮಿ ಮೇಲೆ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ನನ್ನ ಮಾತು ಬೇರೆ ರೀತಿಯಲ್ಲಿ ಅರ್ಥವಾಗಿದ್ದರೆ ನನ್ನನು ಕ್ಷಮಿಸಿ' ಎಂದು ಕೈ ಮುಗಿದು ಕ್ಷಮೆಯಾಚಿಸಿದ್ದಾರೆ.

ಬಿಗ್ ಬಾಸ್ ಸ್ಟೈಲ್‌ವಾಲಿ; ರಿಯಲ್ ಲೈಫ್‌ನಲ್ಲಿ ಯಾಕಿಂಗೆ?