Asianet Suvarna News

BB7: Untouchable ಅಂದ ಚೈತ್ರಾ ವಿರುದ್ಧ ಹೋರಾಟಕ್ಕಿಳಿದ ಅಂಬೇಡ್ಕರ್‌ ಸೇನೆ?

ಬಿಗ್ ಬಾಸ್‌ ಮನೆಯಲ್ಲಿ ಅಸ್ಪೃಶ್ಯತೆ ಬಗ್ಗೆ ಮಾತನಾಡಿದ ಚೈತ್ರಾ ಕೋಟೂರು ವಿರುದ್ಧ ಬೀದರ್ ಅಂಬೇಡ್ಕರ್ ಸೇನೆ ಸಮಿತಿ ಹೋರಾಟಕ್ಕಿಳಿದಿದೆ.

colors kannada Bigg boss 7  ambedkar sene strikes against chaitra kottur statement
Author
Bangalore, First Published Nov 8, 2019, 10:20 AM IST
  • Facebook
  • Twitter
  • Whatsapp

ನಾಮಿನೇಟ್‌ ಆದ್ರೆ ಮಾತ್ರ ಮನೆಯಲ್ಲಿ ಆಕ್ಟಿವ್ ಇಲ್ಲವಾದರೆ ಮನೆಯಲ್ಲಿ ಇವರು ಇಲ್ಲವೇನೋ ಅನ್ನೋತರ ವರ್ತಿಸುವ ಚೈತ್ರಾ ಕೋಟೂರು ದಿನೇ ದಿನೇ ಪ್ರೇಕ್ಷಕರ ಕಣ್ಣಿಗೆ ಟಾರ್ಗೆಟ್ ಆಗುತ್ತಿದ್ದಾರೆ.

ಬಿಗ್ ಬಾಸ್ ಮನೆಯಿಂದ ಚೈತ್ರಾ ಕೊಟ್ಟೂರು ಔಟ್? ಶೈನ್ ಶೆಟ್ಟಿ ಒಂಟಿಯಾದ್ರಾ?

ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ ಅನಂತರ ನಟಿಯಾಗಿ ಬಣ್ಣ ಹಚ್ಚಿ ಹೆಸರು ಮಾಡಿರುವ ಚೈತ್ರಾ ಕೆಲ ದಿನಗಳ ಹಿಂದೆ ಹೇಳಿರುವ Untouchble ಮಾತಿನಿಂದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

BB7: ಗೇಮ್ ಅಥವಾ ಇರೋದೆ ಹೀಗಾ? ಬಯಲಾಯ್ತು ಚೈತ್ರಾ ಕೊಟ್ಟೂರ್ ಮಾಸ್ಟರ್ ಪ್ಲಾನ್?

ಹೌದು! ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಮಾತನಾಡಿಕೊಂಡು ತನ್ನದೇ ಲಿಮಿಟೆಡ್‌ ಪ್ರಪಂಚ ಕಾಣುತ್ತಿರುವ ದೀಪಿಕಾ ದಾಸ್‌ಗೆ ಮೊದಲಿನಿಂದಲೂ ಚೈತ್ರಾ ಕೋಟೂರ್‌ ಅಂದ್ರೆ ಅಷ್ಟಕ್ಕಷ್ಟೇ. ಅದಕ್ಕೆ ಚೈತ್ರಾ 'ದೀಪಿಕಾ ದಾಸ್ ಎಲ್ಲರಿಗೂ ತಿನ್ನಿಸುತ್ತಾರೆ. ತಬ್ಬಿಕೊಳ್ಳುತ್ತಾರೆ. ಮುತ್ತು ಕೊಡುತ್ತಾರೆ ಆದರೆ ನನ್ನ ಮಾತ್ರ ಮುಟ್ಟಲ್ಲ. ಏನು untouchable ಆ ನಾವು? ಅಸ್ಪೃಶ್ಯರಾ ನಾವು? ಎಂದು ಹರೀಶ್‌ ರಾಜ್‌ ಬಳಿ ಚರ್ಚಿಸುತ್ತಾ ನಗುತ್ತಾರೆ.

ಅಸ್ಪೃಶ್ಯತೆ ಬಗ್ಗೆ ಕೋಟೂರು ಹೇಳಿದ ಮಾತಿಗೆ ಬೀದರ್ ಜಿಲ್ಲೆಯ ಅಂಬೇಡ್ಕರ್ ಸೇನೆ ಹೋರಾಟಕ್ಕೆ ಕರೆ ನೀಡಿದೆ. ಹಾಗೂ ನವೆಂಬರ್ 9 ರಂದು ಬಿಡದಿಯಲ್ಲಿ ಇರುವ ಬಿಗ್ ಬಾಸ್‌ ಮನೆಯ ಮುಂದೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಚೈತ್ರಾ ಲಕ್ ಬದಲಾಯಿಸ್ತು ಆ್ಯಪಲ್; BB7 ಮನೆಯಲ್ಲಿ ಎಲ್ಲವೂ ತಲೆಕೆಳಗಾಯ್ತು!

ಇದರ ಬಗ್ಗೆ ಅಂಬೇಡ್ಕರ್ ಸೇನಾ ಸಮಿತಿ ರಾಜ್ಯ ಕಾರ್ಯಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.'ಜೈ ಭೀಮ್ . ಇಂದು ಬೀದರ್ ಜಿಲ್ಲೆಯಲ್ಲಿ , ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಚೈತ್ರಾ ಕೋಟೂರ್ ವಿರುದ್ಧ ಅಂಬೇಡ್ಕರ್ ಸೇನೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದೇವೆ. ನಮ್ಮ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ದಿನಾಂಕ 09/11/2019ರಂದು ಬಿಡದಿ ಬಿಗ್ ಬಾಸ್ ರಿಯಾಲಿಟಿ ಶೋ ಮನೆ ಮುಂದೆ , ಹೋರಾಟಕ್ಕೆ ಸಜ್ಜಾಗಿದ್ದೇವೆ. ಅಂಬೇಡ್ಕರ್ ಸೇನೆ ಭೀಮ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿ ಮಾಡಬೇಕೆಂದು ಅಂಬೇಡ್ಕರ್ ಸೇನೆ ಮನವಿ ಮಾಡುತ್ತಿದೆ -ಶಂಕರ್ ರಾಮಲಿಂಗಯ್ಯ ರಾಜ್ಯ ಕಾರ್ಯಾಧ್ಯಕ್ಷರು, 9008496191' ಎಂದು ಬರೆದುಕೊಂಡಿದ್ದಾರೆ.

ಅಂಬೇಡ್ಕರ್ ಸೇನೆ ಭೀಮ ಸೈನಿಕರು ಚೈತ್ರಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios