ಬಿಗ್‌ಬಾಸ್‌ ನಿವಾಸಕ್ಕೆ ಕೊರೋನಾ ಸೋಂಕು ತಗುಲಿದ ಕಾರಣ ಮಾನವರು ಹಾಗೂ ವೈರಸ್ ಎಂದು ಎರಡು ಗುಂಪುಗಳನ್ನು ಮಾಡಲಾಗಿತ್ತು. ಈ ವೇಳೆ ನಿರ್ಮಲಾ ವರ್ತಿಸಿದ ರೀತಿ, ಕೈಗೆ ಪೆಟ್ಟು ಮಾಡಿಕೊಂಡ ವಿಚಾರದ ಬಗ್ಗೆ ಮನೆ ಮಂದಿ ಎಲ್ಲರೂ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ... 

2020ರಲ್ಲಿ ದೊಡ್ಡ ರಂಪ ರಾದ್ಧಾಂತ ಮಾಡಿದ ಕೊರೋನಾ ವೈರಸ್‌ ಹಾವಳಿ ಬಗ್ಗೆ ಬಿಗ್‌‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ನೀಡಿದ್ದರು. ಮಾನವರ ತಂಡಕ್ಕೆ ಲ್ಯಾಗ್ ಮಂಜು ನಾಯಕನಾದರೆ, ವೈರಸ್ ತಂಡಕ್ಕೆ ಪ್ರಶಾಂತ್ ನಾಯಕ. ಅಂದು ಕೊಂಡಂತೆ ಟಾಸ್ಕ್ ನಡೆಯುತ್ತಿದ್ದರೂ ಅಲ್ಲೊಂದು ಇಲ್ಲೊಂದು ಲೋಪಗಳು ಕಾಣಿಸಿದವು. ಮೊದಲ ದಿನದ ಟಾಸ್ಕ್‌ನಲ್ಲಿ ವೈರಸ್‌ ತಂಡ ಜಯಶಾಲಿಯಾದರೆ, ಎರಡನೇ ದಿನ ಮಾನವರ ತಂಡ ವಿಜೇತವಾಯಿತು. ಈ ಟಾಸ್ಕ್‌ ನಡುವೆ ನಿರ್ಮಲಾ ಕಳೆದು ಹೋದರೇ? 

ಎರಡನೇ ವಾರದ ಮೊದಲ ದಿನದ ಟಾಸ್ಕ್‌ ಮೊದಲ ಪಂದ್ಯದಲ್ಲಿ ನಿರ್ಮಲಾ ಕುತ್ತಿಗೆ ಪೆಟ್ಟು ಮಾಡಿಕೊಂಡರು. ಪರಿಸ್ಥಿತಿ ಗಂಭೀರವಾದ ಕಾರಣ ಬಿಗ್ ಬಾಸ್‌ ಸೀಕ್ರೆಟ್‌ ರೂಮ್‌ನಲ್ಲಿ ನಿರ್ಮಲಾಗೆ ಚಿಕಿತ್ಸೆ ನೀಡಲಾಗಿತ್ತು. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕು, ಎಂದು ಸಲಹೆ ನೀಡಿದ ವೈದ್ಯರು ಔಷಧಿಗಳನ್ನು ನೀಡಿದ್ದರು. ಟಾಸ್ಕ್‌ನಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳಲಾಗದ ಕಾರಣ ನಿರ್ಮಲಾ ಅಡುಗೆ ಮನೆ ಕೆಲಸ ನೋಡಿಕೊಂಡರು. ಈ ವೇಳೆ ಮಾಡಿಕೊಂಡ ಎಡವಟ್ಟಿಗೆ ಚಂದ್ರಕಲಾ ಗರಂ ಆದರು....

BBK8: ಎರಡನೇ ವಾರ 7 ಮಂದಿ ನಾಮಿನೇಟ್; ಸಿಲ್ಲಿ ಕಾರಣದಿಂದ ಶುಭ ಪೂಂಜಾ ಔಟ್! 

ಒಂದೇ ಕೈ ಬಳಸಿ ನಿರ್ಮಲಾ ಅಡುಗೆ ಮಾಡಬೇಕಿತ್ತು, ಈ ವೇಳೆ ಅಡುಗೆ ಎಣ್ಣೆಯನ್ನು ಹೆಚ್ಚಾಗಿ ಬಳಸಿ ಕೊಂಡಿದ್ದಾರೆ. ಒಂದು ವಾರಕ್ಕೆ ಮಾತ್ರ ನೀಡಲಾಗಿದ್ದ ದಿನಸಿ ಸಾಮಾನುಗಳನ್ನು ಹೆಚ್ಚಾಗಿ ಬಳಸಿಕೊಂಡಿರುವ ಕಾರಣ, ಚಂದ್ರಕಲಾ ಇನ್ನಿತರ ಸದಸ್ಯರ ಜೊತೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 'ಅಡುಗೆ ಮನೆ ಪದಾರ್ಥಗಳನ್ನು ತುಂಬಾ ವೇಸ್ಟ್‌ ಮಾಡ್ತಾ ಇದ್ದಾರೆ. ಹೀಗೆ ಮಾಡಬಾರದು ಅವರು. ನೋಡಿ ಆರು ಬಾಟಲ್‌ಗಳಲ್ಲಿ ಮೂರು ಬಾಟಲಿ ಎಣ್ಣೆ ಆಗಲೇ ಖಾಲಿ ಆಗಿವೆ. ಯಾಕೆ ಹೀಗೆ ಮಾಡಬೇಕು? ಯಾರಪ್ಪನ ಮನೆ ಸ್ವತ್ತು ಇದು ಅಂತ. ಒಂದೊಂದೇ ಪದಾರ್ಥಗಳಲ್ಲೂ ಸಿಕ್ಕಾಪಟ್ಟೆ ಎಣ್ಣೆ ಹಾಕಿರ್ತಾರೆ. ನಾನು ಕೂಡ ಅವರ ಹಾಗೆ ಎಣ್ಣೆ ಸುರಿಯಬಹುದು. ಅಮೇಲೆ 16 ಜನ ಮಣ್ಣು ತಿನ್ನಬೇಕಾಗುತ್ತದೆ. ನಂಗಂತೂ ಅಸಹ್ಯ ಬಂದು ಬಿಡುತ್ತೆ. ಸೆನ್ಸ್ ಇಲ್ಲದೇ ಇರೋರ ತರ ಆಡಬಾರದು. ಅಧಿಕ ಪ್ರಸಂಗ ತೋರಬಾರದು,' ಎಂದು ಗೊಣಗಿದ್ದಾರೆ. 

ಅಲ್ಲದೇ ದೇವರ ಪೂಜೆ ಮಾಡಲು ಬೆಂಕಿ ಕಡ್ಡಿ ಖಾಲಿ ಆಗಿದ್ದ ಕಾರಣ ನಿರ್ಮಲಾ ಕ್ಯಾಮೆರಾ ಎದುರು ಮನವಿ ಮಾಡಿಕೊಂಡರು. ಆದರೆ ಯಾವುದೋ ವಿಚಾರವನ್ನು ಮತ್ಯಾರೋ ಮತ್ತೊಂದು ರೀತಿಯಲ್ಲಿ ಅರ್ಥಮಾಡಿಕೊಂಡು, ಬೈಕರ್ ಅರವಿಂದ್ ನಿರ್ಮಲಾ ವಿರುದ್ಧ ಜಗಳ ಮಾಡಿದ್ದರು. 'ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ನಮಗೂ ಜವಾಬ್ದಾರಿ ಇದೆ. ನಾವು ನಮ್ಮ ಮನೆಗೆ ಬೆಂಕಿ ಇಡುವುದಿಲ್ಲ. ನಿಮ್ದು ನೋಡಿಕೊಳ್ಳಿ. ಯಾಕೆ ಅಧಿಕ ಪ್ರಸಂಗ ಮಾಡ್ತೀರಿ ನೀವು?' ಎಂದು ಅರವಿಂದ್ ರೇಗಾಡಿದ್ದರು.

ಬಟ್ಟೆ ಬದಲಾಯಿಸ್ಲಿಕ್ಕೇ ಬಿಗ್‌ಬಾಸ್ ಮನೆಗೆ ಹೋದ್ರಾ ಪ್ರಶಾಂತ್ ಸಂಬರಗಿ? 

ಈ ವಾರ ಮನೆಯಿಂದ ಹೊರ ಹೋಗಲು ನಿರ್ಮಲಾ, ಪ್ರಶಾಂತ್ ಸಂಬರಗಿ, ಶುಭ ಪೂಂಜಾ, ಚಂದ್ರಕಲಾ, ನಿಧಿ ಸುಬ್ಬಯ್ಯ, ವಿಶ್ವನಾಥ್, ದಿವ್ಯಾ ಸುರೇಶ್ ಹಾಗೂ ಗೀತಾ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್‌ ಶಮಂತ್ ಹಾಗೂ ರಘು ಗೌಡ ಸೇಫ್ ಝೋನಿನಲ್ಲಿದ್ದಾರೆ.