ಬಿಗ್‌ಬಾಸ್‌ ಸೀಸನ್‌ 8ರಲ್ಲಿ 17 ಮಂದಿ ಪೈಕಿ ಒಬ್ಬಾಕೆ ಮನೆಯಿಂದ ಹೊರ ಬಂದಿದ್ದಾರೆ. ಮನೆಯೊಳಗಿರುವವರನ್ನು ಬೋಳಿಸಿ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದ ಧನುಶ್ರೀ ಬಕರ ಆಗಿ ಮನೆಯಿಂದ ಹೊರ ಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಲು ಎಳೆಯುತ್ತಿದ್ದಾರೆ. ಅನೇಕ ಮೊದಲುಗಳಿಗೆ ಕಾರಣವಾದ ಧನುಶ್ರೀ ವಿಶೇಷ ಅಧಿಕಾರದಲ್ಲಿ ಯಾರನ್ನು ಉಳಿಸಿಕೊಂಡಿದ್ದಾರೆ ಗೊತ್ತಾ?  

ಮೇಕಪ್ ಇಲ್ದೆ ಧನುಶ್ರೀ ಚೆನ್ನಾಗಿ ಕಾಣಿಸಲ್ವಾ.. ಯಾವ್ ನನ್ನ ಮಗ ಹೇಳಿದ್ದು! 

ಮನೆಯಿಂದ ಹೊರ ಬರುವ ಪ್ರತಿಯೊಬ್ಬ ಸ್ಪರ್ಧಿಗೂ ವಿಶೇಷ ಅಧಿಕಾರ ನೀಡಲಾಗುತ್ತದೆ. ಮುಂದಿನ ವಾರದ ಎಲಿಮಿನೇಶನ್‌ನಿಂದ ಧನುಶ್ರೀ ಒಬ್ಬರನ್ನು ಸೇಫ್ ಮಾಡಬಹುದು. ಕೆಲವು ದಿನಗಳಿಂದ ಧನುಶ್ರೀ ಜೊತೆ ಉತ್ತಮ ಸಂಬಂಧ ಹೊಂದಿದ್ದ ರಘು ಗೌಡ ತನ್ನಗಿರುವ ಕನಸಿನ ಬಗ್ಗೆ ಅವರೊಂದಿಗೆ ಹಂಚಿಕೊಂಡಿದ್ದರು, ಮನೆಯಿಂದ ಹೊರ ಬಂದ ನಂತರವೂ ಇಬ್ಬರು ಏನೆಲ್ಲಾ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಧನುಶ್ರೀ ಕನಸು ಒಂದೇ ವಾರದಲ್ಲಿ ಮಗಿದಿದೆ, ರಘು ಆದರೂ ಉಳಿದುಕೊಂಡು ಸಾಧನೆ ಮಾಡಲಿ ಎಂದು ಸೇಫ್‌ ಝೋನ್ ಮಾಡಿದ್ದಾರೆ. 

ರಘು ತಮ್ಮ ಹೆಸರು ಕೇಳಿ ಭಾವುಕರಾಗುತ್ತಾರೆ. ದೂರದಿಂದಲೇ ಧನ್ಯವಾದಗಳನ್ನೂ ತಿಳಿಸಿದ್ದಾರೆ. ರಘು ಪತ್ನಿ ಮೇಕಪ್ ಆರ್ಟಿಸ್ಟ್‌, ಒಂದು ದಿನ ಇಬ್ಬರು ಒಟ್ಟಿಗೇ ಕೆಲಸ ಮಾಡಬೇಕು ಎಂದು ರಘು ಪ್ಲಾನ್ ನೀಡಿದ್ದರು. 

BBK8: ಮೊದಲ ವಾರದ ಬೆಸ್ಟ್‌ ಹಾಗೂ ವರ್ಸ್ಟ್‌ ಸ್ಪರ್ಧಿ, ಜೈಲಲ್ಲಿ ಗಂಜಿನೇ! 

ಬಿಗ್‌ಬಾಸ್‌ ಮನೆ ಪ್ರವೇಶಿಸಿದ ಮೊದಲ ಸ್ಪರ್ಧಿ ಧನುಶ್ರೀ. ಮೊದಲ ವಾರ ಕ್ಯಾಪ್ಟನ್ ಆಗಲು ಅವಕಾಶ ಪಡೆದುಕೊಂಡವರಲ್ಲಿ ಧನುಶ್ರೀ ಕೂಡ ಒಬ್ಬರು. ಮೊದಲ ವಾರವೇ ಕಳಪೆ ಪ್ರದರ್ಶನದಿಂದ ಜೈಲು ಸೇರಿದ ಸ್ಪರ್ಧಿ ಧನುಶ್ರೀ, ಮೊದಲ ವಾರವೇ ಮನೆಯಿಂದ ಹೊರ ಬಂದ ಸ್ಪರ್ಧಿ ಧನುಶ್ರೀ. ವೇದಿಕೆ ಮೇಲೆ ಸುದೀಪ್‌ ಜೊತೆ ನಿಂತು ತಮ್ಮ ಒಂದು ವಾರದ ಜರ್ನಿ ವಿಡಿಯೋ ನೋಡಿ, ಭಾವುಕಾರಾಗಿದ್ದಾರೆ. ಕುಟುಂಬ ಹಾಗೂ ಸಂಬಂಧಗಳ ಬಿಗ್‌ಬಾಸ್‌ ಒಳ್ಳೇ ಪಾಠ ಹೇಳಿ ಕೊಟ್ಟಿರುವ ವಿಚಾರ ನೆನೆದು ಉತ್ತಮ ಜೀವನ ನಡೆಸುವುದಾಗಿ ಭರವಸೆ ನೀಡುತ್ತಾರೆ.