ಬಿಗ್‌ಬಾಸ್‌ ಸೀಸನ್‌ 8 ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಕ್ಯಾಪ್ಟನ್ ಅಗಿದ್ದ ಶಮಂತ್ ಎರಡನೇ ವಾರವೂ ಕ್ಯಾಪ್ಟನ್ ಆಗಿಯೇ ಮುಂದುವರಿದಿದ್ದಾರೆ. ಎಲಿಮಿನೇಟ್ ಆದ ಧನುಶ್ರೀ ರಘು ಗೌಡನನ್ನು ಸೇಫ್‌ ಝೋನ್‌ನಲ್ಲಿ ಉಳಿಸಿದ್ದಾರೆ. ಇಡೀ ಮನೆಯ ಟಾರ್ಗೆಟ್ ಆಗಿರುವ ನಿರ್ಮಲಾ ಪದೇ ಪದೆ ಎಲಿಮನೇಟ್ ಆಗಲು ನಾಮಿನೇಟ್ ಆಗುತ್ತಿದ್ದಾರೆ. ಇಷ್ಟೆಲ್ಲಾ ಒಂದೇ ವಾರದಲ್ಲಿ ನಡೆದಿರುವಾಗ ಶಂಕರ್ ಅಶ್ವತ್ಥ್ ಒಂದೊಳ್ಳೆ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ಶೂಟಿಂಗೂ ಇಲ್ಲ, Uber ಬಂದ್: ಕೇಟರಿಂಗ್ ಮಾಡಿ ನಟ ಶಂಕರ್ ಅಶ್ವತ್ಥ್ ಜೀವನ! 

ಚಿತ್ರರಂಗದ ಹಿರಿಯ ನಟ ದಿವಂಗತ  ಅಶ್ವತ್ಥ್ ಪುತ್ರ ಶಂಕರ್‌ ಚಿತ್ರರಂಗದಿಂದ ಕೆಲವು ವರ್ಷಗಳ ಕಾಲ ದೂರವೇ ಉಳಿದಿದ್ದರು. ಕ್ಯಾಬ್ ಚಾಲಕರಾಗಿ, ಕೇಟರಿಂಗ್ ಸರ್ವಿಸ್ ನಡೆಸುತ್ತಾ ಅಲ್ಲೊಂದು, ಇಲ್ಲೊಂದು ಸಿನಿಮಾ ಮಾಡುತ್ತಾ ಜೀವನ ನಡೆಸುತ್ತಿದ್ದರು. ಜೀವನದಲ್ಲಿ ತುಂಬಾನೇ ಏರು ಪೇರುಗಳನ್ನು ಕಂಡಿರುವ ಶಂಕರ್ ಟೆನ್ಷನ್ ಕಡಿಮೆ ಮಾಡಿಕೊಳ್ಳಲು ಸಿಗರೇಟ್ ಸೇದುತ್ತಿದ್ದರು. 45 ವರ್ಷಗಳಿಂದ ಅಭ್ಯಾಸವಿದ್ದು ಬಿಡಲಾಗುತ್ತಿರಲಿಲ್ಲ. ಆದರೀಗ ಬಿಗ್‌ಬಾಸ್‌  ಮನೆಯಲ್ಲಿ ಅದೂ ಸಾಧ್ಯವಾಗಿದೆ.

'ಬಿಗ್‌ಬಾಸ್‌ ಮನೆಗೆ ಹೋವುದರಿಂದ ಏನಾದರೂ ಒಳ್ಳೆಯದ್ದು ಆಗುತ್ತಾ ಅಂತ ಕೇಳಬಹುದು.  ಹಿರಿಯರೊಬ್ಬರು ನನಗೆ ಒಂದು ವಿಚಾರ ಹೇಳಿದರು, ಬಿಗ್‌ಬಾಸ್‌ ಮನೆಗೆ ಹೋದರೂ, ಒಂದೋ ಒಳ್ಳೆಯದನ್ನು ಕಲಿಯುತ್ತೀರಿ, ಇಲ್ಲವೇ ಕೆಟ್ಟದ್ದನ್ನು ಬಿಡುತ್ತೀರಾ ಅಂತ. ನಾನು ಸುಮಾರು 45 ವರ್ಷಗಳಿಂದ ಸಿಗರೇಟ್ ಸೇದುತ್ತಿದ್ದೆ. ಆದರೆ ಇಲ್ಲಿ ಬಂದ ನಂತರ ಎರಡು ವಾರದಿಂದ ನಾನು ಸಿಗರೇಟ್ ಮುಟ್ಟಿಲ್ಲ,' ಎಂದು ಶಂಕರ್ ಮಾತನಾಡಿದ್ದಾರೆ.

ಕರ್ಣನಂತೆ ನಾ ಉದ್ಧಾರ ಆಗಲಿಲ್ಲ, ತಂದೆಯನ್ನು ಸುಖವಾಗಿಡಲಿಲ್ಲ; ಭಾವುಕನಾದ ನಟ! 

ಬಿಬಿ ಮನೆಯ ಎರಡನೇ ವಾರದ ನಾಮಿನೇಶನ್ ಆರಂಭವಾಗುತ್ತಿದೆ. ಯಾರೆಲ್ಲಾ ಯಾರನ್ನು ನಾಮಿನೇಟ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಮನೆ ಕ್ಯಾಪ್ಟನ್ ಶಮಂತ್ ಯಾರನ್ನು ಸೇಫ್ ಮಾಡಲಿದ್ದಾರೆ, ಬಾಸ್‌ ಯಾವ ಟಾಸ್ಕ್‌ಗಳನ್ನು ಲಿಸ್ಟ್‌ ಮಾಡಿಕೊಂಡಿದ್ದಾರೆ ಎಂದು ಈ ವಾರ ತಿಳಿಯುತ್ತದೆ.