ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಚಿತ್ರರಂಗವೇ ಶಾಕ್‌ ಆಗುವಂತ ಹೇಳಿಕೆ ನೀಡಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಬಿಗ್‌ ಬಾಸ್‌ ಸೀಸನ್‌8 ರಲ್ಲಿ ಸ್ಪರ್ಧಿಯಾಗಿ ಬರಲಿದ್ದಾರೆ ಎಂದು ಕೇಳಿದ ತಕ್ಷಣವೇ ಕೆಲವರಿಗೆ ಗಾಬರಿ ಆಗಿದ್ದು ಹೌದು. ಬಿಬಿ ಮನೆಯಲ್ಲಿ ಪ್ರಶಾಂತ್ ಚಿತ್ರರಂಗದ ಬಗ್ಗೆ ಏನೆಲ್ಲಾ ವಿಚಾರಗಳನ್ನು ರಿವೀಲ್ ಮಾಡಬಹುದು ಎಂದು ತುದಿಗಾಲಿನಲ್ಲಿ ನಿಂತಿದ್ದರು ವೀಕ್ಷಕರು. ಆದರೆ ಮನೆಯೊಳಗೆ ಪ್ರಶಾಂತ್ ಪ್ರವೇಶಿಸಿದ ನಂತರ ವ್ಯಕ್ತಿತ್ವವೇ ಬದಲಾಗಿದೆ.

ನಿರ್ಮಲಾ ಗೋಮುಖವ್ಯಾಘ್ರಿ, ಅಧಿಕ ಪ್ರಸಂಗಿ ಎಂದ ಸಂಬರಗಿ; ಕಾಫಿ ಬೇಡ ಸೂಟ್‌ಕೇಸ್‌ ಓಕೆ! 

ಸ್ಪರ್ಧಿಗಳ ಜೊತೆ ಸುದೀಪ್ ಮಾತನಾಡುವಾಗ 26 ರನ್ನು 14ರಿಂದ ಗುಣಿಸಿದರೆ ಎಷ್ಟು ಬರುತ್ತೆ ಎಂಬುದಾಗಿ ಪ್ರಶ್ನೆ ಮಾಡಿದರು.  364 ಎಂದು ಸುದೀಪ್ ಉತ್ತರ ಕೊಟ್ಟರು ಆದರೆ ಏನಿದು  26 ,14 ಅಂತ ಮಾತ್ರ ಯಾರಿಗೂ ಗೊತ್ತಾಗಲಿಲ್ಲ. 14 ಬಿಬಿ ಮನೆಯಲ್ಲಿರುವ ವಾರಗಳ ಸಂಖ್ಯೆ ಆದರೆ 26 ಏನು ಅಣ್ಣ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಸಿಕ್ಕ ಉತ್ತರ ಏನು ಗೊತ್ತಾ?

ಪ್ರಶಾಂತ್ ಸಂಬರಗಿ ನನ್ನ ಮಾವ ಹುಷಾರ್ ಅಂದ್ರೆ ಯಾರೂ ಮಾತನಾಡೋಲ್ಲ: ಮಂಜು ಪಾವಗಡ! 

'26 ಎಂಬುದು ಪ್ರಶಾಂತ್ ಸಂಬರಗಿ ಮನೆಯಲ್ಲಿ ಒಂದು ವಾರದಲ್ಲಿ ಬದಲಾಯಿಸಿರುವ ಬಟ್ಟೆಗಳ ಸಂಖ್ಯೆ,' ಎಂದು ಉತ್ತರ ನೀಡಿದ್ದರು. ಎಲ್ಲರೂ ಶಾಕ್ ಆಗಿ ಪ್ರಶಾಂತ್‌ ಕಡೆ ತಿರುಗಿದರು. 'ಹೊರಗೆ ಇದ್ದಾಗ ನಾನು ಸದಾ ಬಿಳಿ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸುತ್ತಿದ್ದೆ. ಕಲರ್ಸ್‌ ಚಾನೆಲ್‌ನಲ್ಲಿ ಬಿಗ್‌ಬಾಸ್‌ಗೆ ಬಂದ ಕಾರಣ ಬಣ್ಣ ಬಣ್ಣದ ಉಡುಪು ಖರೀದಿಸಿದ್ದೇನೆ,' ಎಂದು ಪ್ರಶಾಂತ್ ಸಮಜಾಯಿಷಿ ಕೊಟ್ಟಿದ್ದಾರೆ.