ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ಲ್ಯಾಗ್ ಮಂಜು ಬಿಗ್‌ಬಾಸ್‌ ಸೀಸನ್‌ 8ರ ಸ್ಪರ್ಧಿ. ಹಳ್ಳಿ ಜೀವ ಸಾಕಪ್ಪ, ಎಷ್ಟು ಕಷ್ಟ ನೋಡಿದ್ದೀನಿ, ಸಿಟಿಯಲ್ಲಿ ದುಡಿದು ಹೆಸರು ಮಾಡಬೇಕು. ಆನಂತರ ಸಿನಿಮಾ ಮಾಡಬೇಕು ಎಂದು ಬಂದವರೇ ಈಗ ಕಾಮಿಡಿ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಲ್ಯಾಗ್‌ ಮಂಜು ಹಾಗೂ ಶುಭಾ ಪೂಂಜಾ ಬಿಬಿ ಮನೆಯಲ್ಲಿ ಒಂದು ರೀತಿ ಎಂಟರ್ಟೇನರ್ಸ್‌. ಯಾಕೆ ಗೊತ್ತಾ?

ನಿರ್ಮಲಾ ಗೋಮುಖವ್ಯಾಘ್ರಿ, ಅಧಿಕ ಪ್ರಸಂಗಿ ಎಂದ ಸಂಬರಗಿ; ಕಾಫಿ ಬೇಡ ಸೂಟ್‌ಕೇಸ್‌ ಓಕೆ! 

ಮೊದಲ ವಾರದ ನಾಮಿನೇಶನ್‌ನಲ್ಲಿ ಪ್ರಶಾಂತ್, ಮಂಜು ಪಾವಗಡ ಅವರನ್ನು ನಾಮಿನೇಟ್ ಮಾಡಿದ್ದರು. 'ಜೋರಾಗಿ ಮಾತನಾಡುವುದು, ಹೇಳಿದ ಮಾತು ಕೇಳಲ್ಲ, ಅತಿ ವಿನಯವಾಗಿ ನಡೆದುಕೊಳ್ಳಲು ಪ್ರಯತ್ನ ಮಾಡುತ್ತಾರೆ,' ಎಂಬ ಕಾರಣ ಕೊಟ್ಟರು. ಆದರೀಗ ಅವರಿಬ್ಬರೂ ಹಾಸ್ಯ ಮಾಡುತ್ತಾ ಕೂತಿರುವುದನ್ನು ನೋಡಿದರೆ ನಾಮಿನೇಶನ್ ನಿಜವೇ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡುತ್ತದೆ.

ಪ್ರಶಾಂತ್ ಈ ರೀತಿ ಕಾರಣ ಕೊಟ್ಟ ದಿನದಿಂದ ಮಂಜು ಬದಲಾಗಿದ್ದಾರೆ, ಜೊತೆ ಪ್ರಶಾಂತ್‌ರನ್ನು ಮಾವ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ. ಬಿಬಿ ಮನೆಯಿಂದ ಹೊರ ಹೋದ ಮೇಲೂ ನನಗೆ ಪ್ರಶಾಂತ್ ಅವರೇ ಮಾವ ಆಗಿರುತ್ತಾರೆ ಎಂದಿದ್ದಾರೆ. 'ಎಲ್ಲೇ ಹೋದರೂ ನನ್ನ ಮಾವನನ್ನು ಕರೆದು ಕೊಂಡು ಹೋಗ್ತೀನಿ, ಯಾರೂ ಏನೂ ಹೇಳಲ್ಲ. ಅವರ ಹೆಸರು ಕೇಳಿದ್ರೆ ಎಲ್ಲರೂ ಭಯ ಬೀಳುತ್ತಾರೆ. ಬಿಗ್‌ ಬಾಸ್‌ ನಂತರವೂ ನನಗೆ ಏನಾದರೂ ಹೇಳಿದರೆ ನನ್ನ ಮಾವ ಸಂಬರಗಿ ಅಂತ ಹೇಳ್ತೀನಿ, ಏನೇ ಹೇಳಿದರೂ ನನ್ನ ಮಾವನ ಹೆಸರು ಹೇಳ್ತಿನಿ, ಸಮಸ್ಯೆ ಆಗೋದಿಲ್ಲ,' ಎಂದು ಮಂಜು ಹಾಸ್ಯ ಮಾಡಿದ್ದಾರೆ. ಲ್ಯಾಗ್‌ ಮಾತುಗಳನ್ನು ಕೇಳಿ ಪಕ್ಕದಲ್ಲೇ ಕುಳಿತಿದ್ದ ಪ್ರಶಾಂತ್‌ ಕೂಡ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ. 

ನಿಧಿ ಸುಬ್ಬಯ್ಯ ಬದಲು ಮನೆಯಿಂದ ಹೊರ ಬರುತ್ತಿದ್ದಾರೆ ಶುಭಾ ಪೂಂಜಾ; ಇದು ಪಕ್ಕಾ ಗೇಮ್! 

ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ವಾರ ಅಂತ್ಯಕ್ಕೆ ಬಂದಿದೆ. ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ನಿರ್ಮಲಾ, ರಘು ಗೌಡ, ಧನುಶ್ರೀ, ಶುಭಾ ಪೂಂಜಾ ಹಾಗೂ ವಿಶ್ವನಾಥ್ ತಮ್ಮ ಬ್ಯಾಗ್‌ಗಳನ್ನು ಸೈಲೆಂಟ್ ಆಗಿ ಪ್ಯಾಕ್ ಮಾಡಿಕೊಳ್ಳುತ್ತಿದ್ದಾರೆ. ಯಾರು ಉಳಿಯಲ್ಲಿದ್ದಾರೆ, ಯಾರು ಹೊರಡಲಿದ್ದಾರೆ ಎಂದು ಕಾದು ನೋಡಬೇಕಿದೆ.