ಒಂದೇ ಮಾತಿಗೆ ಎದುರಾಳಿಯನ್ನು ಕುಗ್ಗಿಸುವ ಶಕ್ತಿ ಹೊಂದಿರುವ ಪ್ರಶಾಂತ್ ಸಂಬರಗಿ, ಮೊದಲ ಬಾರಿ ಮಾನವೀಯತೆ ದೃಷ್ಟಿಯಿಂದ ಚಿಂತಿಸುತ್ತಿದ್ದಾರೆ. ಹೀಗಂತ ನಾವು ಹೇಳ್ತಿಲ್ಲ, ಟ್ರೋಲ್‌ ಪೇಜ್‌ಗಳಲ್ಲಿ ಹರಿದಾಡುತ್ತಿದೆ. ಯಾಕೆ ಗೊತ್ತಾ?

ಕ್ಯಾಪ್ಟನ್ ಬ್ರೋ ಗೌಡ ಮತ್ತು ಸಂಬರಗಿ ನಡುವೆ ಬಿಗ್ ಫೈಟ್; ಓವರ್ ಆ್ಯಕ್ಟಿಂಗ್ ಯಾರ್ ಗುರು? 

ಬಿಬಿ ಮನೆಯಲ್ಲಿ ನಡೆದ ಮೊದಲ ಟಾಸ್ಕ್‌ನಲ್ಲಿ ವಿನ್ನರ್ ಹಾಗೂ ಲೂಸರ್ ಆಯ್ಕೆ ಮಾಡಲಾಗಿತ್ತು. ವಿನ್ನರ್ ಆಗಿ ಶಮಂತ್ ಮನೆಯ ಕ್ಯಾಪ್ಟನ್‌ ಆದರೆ, ಲೂಸರ್‌ ಆಗಿ ನಿರ್ಮಲಾ ಚೆನ್ನಪ್ಪ ಮನೆಯಿಂದ ಹೊರ ಹೋಗಲೂ ನೇರವಾಗಿ ನಾಮಿನೇಟ್‌ ಕೂಡ ಆಗಿದ್ದಾರೆ. ಈ ಕಾರಣಕ್ಕೆ ಬಿಗ್‌ಬಾಸ್‌ ನಿರ್ಮಲಾ ತಂದಿದ್ದ ಸೂಟ್‌ಕೇಸ್‌ ಅನ್ನು ಹಿಂಪಡೆದು ಕೊಂಡಿದ್ದರು. ಪ್ರತಿ ಸೀಸನ್‌ನಲ್ಲೂ ನಡೆಯುವಂತೆ ಶನಿವಾರ ಸುದೀಪ್‌ ಜೊತೆ ಮಾತುಕತೆ ನಡೆದ ನಂತರವೇ ಮನೆಯಿಂದ ಒಬ್ಬ ಸ್ಪರ್ಧಿ ಹೊರ ಬರುತ್ತಾರೆ. 

ಮನೆಯಲ್ಲಿ ಕಾಫಿ ಪುಡಿ ಖಾಲಿ ಆಗಿದ್ದ ಕಾರಣ ಪ್ರತಿಯೊಬ್ಬ ಸ್ಪರ್ಧಿಯೂ ಕ್ಯಾಮೆರಾ ಎದುರು ನಿಂತುಕೊಂಡು, ಕಾಫಿ ಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದರು. ಕಡಿಮೆ ಅವಧಿಯಲ್ಲಿ ಕಾಫಿ ಅತಿ ಹೆಚ್ಚು ಕುಡಿದು, ಖಾಲಿ ಆಗಲು ಕಾರಣವೇ ಪ್ರಶಾಂತ್ ಸಂಬರಗಿ, ಈ ಕಾರಣ ಕೆಲವು ದಿನಗಳ ಹಿಂದೆ ನಿಧಿ ಹಾಗೂ ರಾಜೀವ್‌ ಕ್ಯಾಮೆರಾ ಎದುರು ಪ್ರಶಾಂತ್‌ನನ್ನು ಜೈಲಿಗೆ ಕಳುಹಿಸಿ, ಕಾಫಿ ಕೊಡಿ ಎಂದು ಮನವಿ ಮಾಡಿಕೊಂಡರು. ಈ ಕಾರಣ ಬಿಗ್ ಬಾಸ್‌ ಪ್ರಶಾಂತ್‌ನನ್ನು ಕನ್ಫೆಷನ್‌ ರೂಮ್‌ಗೆ ಕರೆಯಿಸಿ ಕೊಂಡು, ಎರಡು ಆಯ್ಕೆ  ಮುಂದಿಟ್ಟರು. ಒಂದು ಕಾಫಿ ಮತ್ತೊಂದು ನಿರ್ಮಲಾ ಸೂಟ್‌ಕೇಸ್‌. ಕಾಫಿ ಅಡಿಕ್ಟ್‌ ಆಗಿರುವ ಪ್ರಶಾಂತ್‌ಗೆ ಆಯ್ಕೆ ಮಾಡುವಾಗ ಕೊಂಚ ಆಲೋಚನೆ ಮಾಡಿದ್ದರು. 'ನಿರ್ಮಲಾ ಅಧಿಕ ಪ್ರಸಂಗ ಮಾಡುತ್ತಾಳೆ, ಗೋಮುಖ ವ್ಯಾಘ್ರಿ. ಅದು ನನಗೆ ಇಷ್ಟವಾಗುವುದಿಲ್ಲ. ಆದರೆ ಎಲ್ಲಿಯೋ ಒಂದು ಕಡೆ ಆಕೆಗೆ ಒಳ್ಳೆಯ ಮನಸ್ಸಿದೆ. ಎಲ್ಲರಿಗೂ ಸಹಾಯ ಮಾಡಬೇಕು ಎಂಬ ಮನಸ್ಸಿದೆ. ಹಾಗಾಗಿ ಸೂಟ್‌ಸೇಕ್‌ ಆಯ್ಕೆ ಮಾಡಿಕೊಳ್ಳುತ್ತೀನಿ,' ಎಂದು ಪ್ರಶಾಂತ್ ಹೇಳುತ್ತಾರೆ. 

ಬಿಗ್‌ಬಾಸ್‌ಗೆ ದೊಡ್ಡ ಬೇಡಿಕೆ; ಸಂಬರಗಿ ಜೈಲಿಗೆ ಹಾಕಿ, ಕಾಫಿ ಕಳಿಸಿ!

ಪ್ರಶಾಂತ್ ಕೈಯಲ್ಲಿ ಸೂಟ್‌ಕೇಸ್‌ ನೋಡಿ ನಿರ್ಮಲಾ  ಗಾಬರಿ ಆದರೂ, ಸಂತಸದಿಂದ ಧನ್ಯವಾದಗಳನ್ನು ತಿಳಿಸುತ್ತಾರೆ.