ಕೊರೋನಾ ವೈರಸ್ ಹಂತ 1ನೇ ಲಾಕ್‌ಡೌನ್‌ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾಮಿಡಿ ಟ್ರೆಂಡ್ ಕ್ರಿಯೇಟ್ ಮಾಡಿದ್ದ ರಘು ವೈನ್‌ ಸ್ಟೋರ್‌ನ ರಘು ಗೌಡ ಬಿಗ್ ಬಾಸ್‌ ಮನೆಯಲ್ಲಿ ಯಾಕೆ ಕಾಮಿಡಿ ಮಾಡುತ್ತಿಲ್ಲ? ಮಾಡಿದರೂ ಪ್ರಸಾರ ಮಾಡುತ್ತಿಲ್ಲವೇ ಎಂದು ಅನೇಕರು ಕಾಮೆಂಟ್ ಹಾಗೂ ಟ್ರೋಲ್‌ಗಳ ಮೂಲಕ ವಾಹಿನಿಯ ಮುಖ್ಯಸ್ಥರನ್ನು ಪ್ರಶ್ನಿಸುತ್ತಿದ್ದರು. 

ರಘು ಗೌಡ ಬಿಬಿ ಮನೆಯಲ್ಲಿ ಇರ್ಬೇಕು ವೂಟ್‌ ಮಾಡಿ ಅಂತಿದ್ದಾರೆ ಡ್ರಾವಿಡ್, ಶಿವಣ್ಣ, ಪುನೀತ್? 

ವಿಶ್ವನಾಥ್ 5ನೇ ವಾರದ ಕ್ಯಾಪ್ಟನ್, ಮನೆಯಲ್ಲಿ ಹೊಸ ಬದಲಾವಣೆ ತರಬೇಕೆಂದು ನಿಧಿ ಸುಬ್ಬಯ್ಯ, ವೈಷ್ಣವಿ ಹಾಗೂ ರಘು ಗೌಡ ಅವರ ಅಡುಗೆ ಮನೆ ಡಿಪಾರ್ಟ್‌ಮೆಂಟ್‌ ಕೊಟ್ಟಿದ್ದಾರೆ. ಒಂದು ವಾರಕ್ಕೆ ನೀಡಲಾಗುತ್ತಿರುವ ದಿನಸಿ ಸಾಮಾಗ್ರಿಗಳು ಬೇಗನೇ ಖಾಲಿಯಾಗುತ್ತಿದೆ. ಮುಂದಿನ ವಾರದ Luxury ಬಜೆಟ್ ಬರುವವರೆಗೂ ಉಳಿದಿರುವ ಸಾಮಾಗ್ರಿಗಳಲ್ಲಿ ದಿನ ಸಾಗಿಸಬೇಕು.

ಅಡುಗೆ ಮಾಡುತ್ತಿದ್ದ ರಘು ಗೌಡ 'ಚಿರಳೆ ಎಲ್ಲಿ?' ಎಂದು ನಿಧಿಗೆ ಪ್ರಶ್ನೆ ಮಾಡುತ್ತಾರೆ. ಏನು ಅರ್ಥವಾಗದ ನಿಧಿ ನಿಂತು ಬಿಡುತ್ತಾರೆ. ಅಷ್ಟರಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಬಳಿ ಬಂದು ಮನೆಯಲ್ಲಿ ದಿನಸಿ ಇಲ್ಲ ಅಂದರೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಸಣ್ಣ ಪ್ಲಾನ್ ರಘು ನೀಡುತ್ತಾರೆ. 'ಬಿಗ್ ಬಾಸ್‌ ಮನೆಯಲ್ಲಿ ಲಾಟ್ ಲಾಟ್ನಲ್ಲಿ ಊಟ ಕೊಡೋಲ್ಲ ಅಲ್ವಾ? ಆಗ ಮನೆಯಲ್ಲಿರುವ ಜಿರಳೆ ಹಾಗೂ ಸೊಳ್ಳೆಯನ್ನು ಹೊಡೆದು ತಿನ್ನಬೇಕು. ಈಗ ಅದನ್ನು ನೆನಪಿಸಿಕೊಂಡರೆ ನಗು ಬರುತ್ತೆ. ಆದರೆ ಅದೇ ಆಗ  ಹಾ...ಹಾ...ಅನ್ಸುತ್ತೆ. ಆಮೇಲೆ ಅದೂ ಖಾಲಿ ಆದರೆ ಎಲ್ಲೋ ಇರುವೆ ತೆಗೆದು ಹಾಗೆ ಬಾಯಿಗೆ ಹಾಕೊಳ್ಳೋದು. ವಾ..ವಾ..ಇರುವೆಯಲ್ಲಿ ಪ್ರೋಟಿನ್ ಜಾಸ್ತಿ,' ಎಂದು ರಘು ತಮಾಷೆ ಮಾಡುತ್ತಾರೆ. 

ಬಿಗ್‌ಬಾಸ್‌ನಲ್ಲಿ ವೈನ್‌ ಸ್ಟೋರ್ ಮಾಲೀಕ ರಘು; ಹೊಟೇಲ್‌ನಲ್ಲಿದ್ದ ಪೌಡರ್‌ ಮನೆಗೆ ಪಾರ್ಸಲ್! 

ಪಕ್ಕದಲ್ಲಿ ಕುಳಿತಿದ್ದ ದಿವ್ಯಾ ಆ ದಿನಗಳು ಬಂದರೆ ಹೇಗಿರುತ್ತದೆ, ಎಂದು ನೆನಪಿಸಿಕೊಂಡು ವಾಕರಿಕೆ ಬರುವಂತೆ ವರ್ತಿಸುತ್ತಾರೆ. ಸುಮ್ಮನಿರದ ಅರವಿಂದ್ ಇಲ್ಲ ನೀನು ನೆನಪಿಸಿಕೊಳ್ಳುವುದು ನೋಡಿದೆ. ನಾವು ಅವೆಲ್ಲಾ ತಿಂದರೆ ನಮ್ಮ ದೇಹಕ್ಕೆ ಪ್ರೋಟಿನ್‌ ಎಂದು ಕಾಲು ಎಳೆದು ತಮಾಷೆ ಮಾಡುತ್ತಾರೆ. ಕಲರ್ಸ್‌ ಕನ್ನಡ ಶೇರ್‌ ಮಾಡಿಕೊಂಡಿರುವ Unseen ಎಪಿಸೋಡ್‌ ಇದು.

 

 
 
 
 
 
 
 
 
 
 
 
 
 
 
 

A post shared by Param (@parameshwargundkal)