ಬಿಗ್ ಬಾಸ್‌ ಮನೆಯಲ್ಲಿ 6ನೇ ವಾರದ ಕ್ಯಾಪ್ಟನ್ಸಿ ಟಾಸ್ಕ್ ಆರಂಭವಾಗಿದೆ. ಕ್ಯಾಪ್ಟನ್ ಹೊರತು ಪಡಿಸಿ, ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿದೆ. ಶುಭಾ ಪೂಂಜಾ ನೇತೃತ್ವದ ತಂಡಕ್ಕೆ 'ಜಾತ್ರೆ ಗ್ಯಾಂಗ್' ಹಾಗೂ ದಿವ್ಯಾ ಉರುಡುಗ ತಂಡಕ್ಕೆ 'ಅನುಬಂಧ' ಎಂದೂ ಹೆಸರಿಸಲಾಗಿದೆ. ಬಿಬಿ ನೀಡುವ ಸವಾಲುಗಳನ್ನು ಸ್ವೀಕರಿಸಿ ಜಯಶಾಲಿ ಆಗುವ ತಂಡಕ್ಕೆ ಗ್ರೀನ್ ಇಟ್ಟಿಗೆ ನೀಡಲಾಗುತ್ತದೆ. ಅಂತ್ಯದಲ್ಲಿ ಅತೀ ಹೆಚ್ಚು ಇಟ್ಟಿಗೆ ಸಂಗ್ರಹಿಸುವ ತಂಡದ ಯಾವುದಾದರೂ ಸದಸ್ಯರು ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ. ಕ್ಯಾಪ್ಟನ್ಸಿ ಪಟ್ಟಕ್ಕಾಗಿ ತಂಡದಲ್ಲಿರುವ ಸ್ಪರ್ಧಿಗಳ ನಡುವೆ ಪೈಪೋಟಿ ಶುರುವಾಗುತ್ತಿದೆ. 

BBK8: ಬಾತ್‌ರೂಮಲ್ಲಿ ಅತಿ ಹೆಚ್ಚು ಸಮಯ ಕಳೆಯುವ ಸದಸ್ಯೆ ಯಾರೆಂದು ರಿವೀಲ್ ಮಾಡಿದ ಅರವಿಂದ್! 

ಈ ವಾರ ಎರಡು ತಂಡಗಳು ಆಕ್ರಮಣಶೀಲತೆಯಿಂದ ಆಟವಾಡಿದ್ದಾರೆ. ಮನೆಯ ಕ್ಯಾಪ್ಟನ್ ವಿಶ್ವನಾಥ್‌ ಮಾತನ್ನು ಮೀರಿ, ತಮ್ಮದೇ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಇಟ್ಟಿಗೆಗಳನ್ನು ಕದಿಯುವ ಅವಸರದಲ್ಲಿ ಮ್ಯಾನ್ ಹ್ಯಾಂಡೆಲಿಂಗ್ ಮಾಡಬಾರದು, ಎಂಬುದಾಗಿ ತಮಗೆ ತಾವೇ ನಿರ್ಣಯ ಮಾಡಿಕೊಂಡರು. ಈ ವೇಳೆ ಪ್ರಶಾಂತ್ ದಿವ್ಯಾ ಉರುಡುಗರನ್ನು ಎಳೆದು, ಇಟ್ಟಿಗೆ ಮುರಿದ ಕಾರಣ ಅರವಿಂದ್ ಕೋಪ ಮಾಡಿಕೊಳ್ಳುತ್ತಾರೆ. ಪ್ರಶಾಂತ್ ಮಾಡುತ್ತಿರುವುದು ಸರಿ ಅಲ್ಲ ಎಂದು ವಾದ ಮಾಡುತ್ತಾರೆ.

ಪ್ರಶಾಂತ್ ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ, ಅರವಿಂದ್‌ ವಿರುದ್ಧ ಮಾತನಾಡುತ್ತಾ 'ನೀವು ತುಂಬಾ ಪಂಟರು ಅಲ್ವಾ? ನಿನ್ ಗರ್ಲ್‌ಫ್ರೆಂಡ್‌ ಕೈ ಹಿಡಿದಿದ್ದಕ್ಕೆ ಬೇಜಾರು ಆಗಿದ್ದು,' ಎಂದು ಮೆಲು ಧ್ವನಿಯಲ್ಲಿ ಹೇಳುತ್ತಾರೆ. ತಕ್ಷಣವೇ ದಿವ್ಯಾ 'ಏ...ನೆಟ್ಟಗೆ ಮಾತಾಡಿದ್ರೆ ಸರಿ,' ಅಂತ ಕೋಪದ ಅವತಾರ ತಾಳುತ್ತಾರೆ. 'ನೀವು ಅದು ಹೇಗೆ ನನ್ನ ಹೆಸರು ಮಧ್ಯ ಎಳೆದಿರಿ? ನೋಡಿ ನಾನು ಅರವಿಂದ್ ಗರ್ಲ್‌ಫ್ರೆಂಡ್ ಆಗಿರಬಹುದು, ತಂಗಿ ಆಗಿರಬಹುದು, ಹೆಂಡ್ತಿ ಆಗಿರಬಹುದು ನೀವು ನನ್ನ ಹೆಸರು ಮಧ್ಯ ತರಂಗಿಲ್ಲ ಬ್ರೋ,' ಎಂದು ದಿವ್ಯಾ ಕಿರುಚುತ್ತಾರೆ. 

ಅಯ್ಯಯ್ಯೋ, ಲ್ಯಾಗ್ ಮಂಜನ ಹಲ್ಲನ್ನೇ ಕಿತ್ತು ಬಿಟ್ರಾ ಕ್ರಿಕೆಟರ್ ರಾಜೀವ್! 

ನೆಟ್ಟಿಗರ ಕಾಮೆಂಟ್:
ಅರವಿಂದ್ ಹಾಗೂ ಪ್ರಶಾಂತ್ ನಡುವೆ ವಾದ ನಡೆಯುವಾಗ ಗರ್ಲ್‌ಫ್ರೆಂಡ್ ಎಂಬ ಪದ ಬಳಸಿದ್ದು ನಿಜ. ಆದರೆ 'ದಿವ್ಯಾ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕೊಳತ್ತಿದ್ದಾರೆ,' ಅದು ನನಗಲ್ಲ ಅಂತ ಸುಮ್ಮನೆ ಇರಬಹುದಿತ್ತು ಅಲ್ವಾ? ಎಂಬುವುದು ಒಬ್ಬರ ಅಭಿಪ್ರಾಯ. ಮತ್ತೊಬ್ಬರು 'ಅಣ್ಣ ತಂಗಿ ಅಂತ ಹೇಳಿ, ಒಂದು ಜೋಡಿ ಆಗಲೇ ಮದುವೆ ಆಗಿದ್ದಾರೆ. ಈಗ ಅದೇ ಲಿಸ್ಟ್‌ಗೆ ನೀವೂ ಸೇರಿಕೊಳ್ಳುತ್ತೀರಾ. ಮನಸ್ಸಿಂದ ತಂಗಿ ಅಂತ ಹೇಳಿದ್ರಾ?' ಎಂದು ಕಾಮೆಂಟ್ ಮಾಡಿ, ದಿವ್ಯಾ ಕಾಲೆಳೆದಿದ್ದಾರೆ ನೆಟ್ಟಿಗರು.