ಬಿಗ್‌ ಬಾಸ್‌ ಸೀಸನ್‌ 8, 5ನೇ ವಾರದ ನಾಮಿನೇಷನ್‌ಗೆ ಕಾಲಿಟ್ಟಿದೆ. ಈಗಾಗಲೇ ಮನೆಯಿಂದ ಹೊರ ಹೊಗಿರುವ ಸ್ಪರ್ಧಿಗಳು ಮಹಿಳೆಯರೇ ಆಗಿರುವ ಕಾರಣ, ಹೆಣ್ಣು ಮಕ್ಕಳಲ್ಲಿ ಕೊಂಚ ಅಸಮಾಧಾನ ಮನೆ ಮಾಡಿದೆ.  ಕ್ಯಾಪ್ಟನ್ ಆಗುವುದೂ ಪುರುಷ ಸ್ಪರ್ಧಿಗಳು. ಸೇಫ್‌ ಆಗುತ್ತಿರುವುದೂ ಅವರೇ ಎಂಬ ಬೇಸರವನ್ನು ಶುಭ ಪೂಂಜ ಈ ಹಿಂದೆಯೇ ಹಂಚಿಕೊಂಡಿದ್ದರು. ಆದರೆ ಈ ವಾರ ಸುದೀಪ್ ಮತ್ತೊಂದು ಶಾಕಿಂಗ್ ವಿಚಾರದ ಸುಳಿವು ನೀಡಿದ್ದಾರೆ.

ಹುಷಾರು ಕಣ್ರೋ ಚಕ್ರವರ್ತಿ ಚಂದ್ರಚೂಡ್‌ ಸಾಯಿಸೋಕೆ ಬಂದಿರೋದು: ಲ್ಯಾಗ್ ಮಂಜು 

ಹೌದು! 6ನೇ ವಾರದ ಕ್ಯಾಪ್ಟನ್ ಆಯ್ಕೆ ನಡೆಯುವ ವೇಳೆ ಮನೆಗೆ ವೈಲ್ಡ್ ಕಾರ್ಡ್‌ ಎಂಟ್ರಿ ಆಗಿದೆ. ಅವರೇ ಪತ್ರಕರ್ತ, ಚಿತ್ರ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್. ಮನೆಗೆ ಎಂಟರ್ ಆಗುತ್ತಿದ್ದಂತೆ ಎಲ್ಲರ ತಪ್ಪ ಒಪ್ಪುಗಳನ್ನು ಮುಖಕ್ಕೆ ನೇರವಾಗಿ ಹೇಳಿದ್ದಾರೆ. ಚಕ್ರವರ್ತಿ ಆಗಮನದಿಂದ ಮನೆಯಲ್ಲಿ ಕೊಂಚ ಬದಲಾವಣೆ ಕಂಡರೂ, ಸದಸ್ಯರ ಮನಸ್ಸಿನಲ್ಲಿ  ಗೊಂದಲವಿದೆ. ಇಷ್ಟು ದಿನ ನಾವು ಪಟ್ಟ ಕಷ್ಟಕ್ಕೆ ಸಿಕ್ಕ ಪ್ರತಿಫಲ ಇದೇನಾ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. 

'ಹುಡುಗಿಯರು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಮನೆ ತುಂಬಾ ಓಡಾಡಿಕೊಂಡಿರುತ್ತಾರೆ ಚೆಂದ ಇರುತ್ತೆ,'ಎಂದು ಮಂಜು ಹೇಳಿದ್ದಾರೆ. 'ವೈಲ್ಡ್ ಕಾರ್ಡ್‌ ಎಂಟ್ರಿ  ಅಗುವುದರ ಬಗ್ಗೆ ಗೊತ್ತಿತ್ತು. ಚಕ್ರವರ್ತಿ ಬಂದ ಮೇಲೆ ಕಷ್ಟ ಅನಿಸುತ್ತಿದೆ. ಬೇರೊಬ್ಬರು ಬಂದಿದ್ದಾರೆ. ಹೊಂದಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ,' ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. '35 ದಿನಗಳ ಕಾಲ ಆರಂಭದಿಂದ, ಇಲ್ಲೀಯವರೆಗೂ ಬಂದಿದ್ದೀವಿ. ಮಧ್ಯದಲ್ಲಿ ಒಬ್ರು ಬಂದ್ರೆ ಸರಿಯಲ್ಲ,' ಎಂದು ವಿಶ್ವನಾಥ್ ಧ್ವನಿ ಎತ್ತಿದ್ದಾರೆ.

ಅರವಿಂದ್‌ಗೆ ನಾನು ಗರ್ಲ್‌ಫ್ರೆಂಡ್‌, ತಂಗಿ, ಹೆಂಡ್ತಿಯೂ ಆಗಿರ್ಬೋದು; ಪ್ರಶಾಂತ್‌ ಸಂಬರಗಿಗೆ ದಿವ್ಯಾ ವರ್ನಿಂಗ್! 

ಮನೆ ಸದಸ್ಯರ ಅಭಿಪ್ರಾಯ ಪಡೆದ ಸುದೀಪ್‌ 'ಒಬ್ಬರಿಗೆ ಇಷ್ಟೊಂದು ತಲೆ ಕೆಡಿಸಿಕೊಂಡರೆ ಹೇಗೆ? ಇದು ಒಂದು ವೈಲ್ಡ್‌ ಕಾರ್ಡ್ ಎಂಟ್ರಿ ಅಷ್ಟೆ. ಒಂದು ಅಷ್ಟೆ.....' ಎಂದು ಹೇಳುತ್ತಾರೆ. 'ಹಾಗಿದ್ರೆ ಇನ್ನೊಬ್ಬರ ಎಂಟ್ರಿ ಇದೆ ಅಲ್ವಾ ಸರ್?' ಎಂದು ಪ್ರಶ್ನೆ ಮಾಡಿದ್ದಾರೆ. ಸುದೀಪ್ ಮುಗಳ್ನೆಗೆಯೇ ಅವರಿಗೆ ಸಿಕ್ಕ ಉತ್ತರ. 

ಬಿಗ್‌ಬಾಸ್‌ ಸೀಸನ್‌ 8 ಆರಂಭದಿಂದಲೂ ಪ್ರಭಾವಿ ರಾಜಕಾರಣಿ ಮನೆಗೆ ಎಂಟರ್ ಆಗುತ್ತಾರೆ, ಎಂಬುದಾಗಿ ಸ್ವತಃ ಸುದೀಪ್ ಹೇಳಿದ್ದರು. ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿ ರಾಜಕಾರಣಿನೇ ಇರಬಹುದಾ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ.        

ಈ ಹಿಂದೆ ಮಾಜಿ ಸಚಿವ, ಹಾಲಿ ಬಿಜೆಪಿ ಎಂಎಲ್‌ಸಿ 'ಹಳ್ಳಿ ಹಕ್ಕಿ' ಖ್ಯಾತಿಯ ವಿಶ್ವನಾಥ್ ಅವರಿಗೆ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುವ ಬಗ್ಗೆ ಕೇಳಿದಾಗ, ಆಫರ್ ಬಂದಿದ್ದು, ಅನಾರೋಗ್ಯದ ಕಾರಣ ಈ ಹಿಂದೆ ಒಪ್ಪಿಕೊಂಡಿರಲಿಲ್ಲ. ಅವಕಾಶ ಸಿಕ್ಕರೆ ತೆರಳುವ ಸುಳಿವು ನೀಡಿದ್ದರು. ಇದೀಗ ಸುದೀಪ್ ಸಹ ರಾಜಕಾರಣಿ ಪ್ರವೇಶದ ಬಗ್ಗೆ ಕ್ಲೂ ಕೊಟ್ಟಿದ್ದಾರೆ. ವಿಶ್ವನಾಥ್ ಮನೆ ಪ್ರವೇಶಿಸಬಹುದಾ? ಅಥವಾ ಬೇರೆ ರಾಜಕಾರಣಿಯೋ ಎಂಬ ಕುತೂಹಲ ಹೆಚ್ಚಿಸಿದೆ.