ಬಿಗ್‌ಬಾಸ್‌ ಮನೆಯಲ್ಲಿ ಎರಡನೇ ವಾರದಿಂದ ಕಾಂಪಿಟೇಷನ್ ಆರಂಭವಾಗಿದೆ. ಮೊದಲ ವಾರ ಟಿಕ್‌ಟಾಕ್‌ ಸ್ಟಾರ್ ಧನುಶ್ರೀ ಹೊರ ಬಂದ ನಂತರ ಎರಡನೇ ವಾರದ ನಾಮಿನೇಷನ್‌ ಆರಂಭವಾಗಿದೆ. ಧನುಶ್ರೀ ಸೇಫ್‌ ಝೋನ್ ಮಾಡಿದ ರಘು ಗೌಡ ಹಾಗೂ ಕ್ಯಾಪ್ಟನ್ ಶಮಂತ್ ನಾಮಿನೇಷನ್‌ನಿಂದ ಪಾರಾಗಿದ್ದಾರೆ. ಆದರೆ ಈ ವಾರ 8 ಮಂದಿ ಬ್ಯಾಗ್ ಪ್ಯಾಕ್ ಮಾಡಬೇಕಿದೆ.

ಬಟ್ಟೆ ಬದಲಾಯಿಸ್ಲಿಕ್ಕೇ ಬಿಗ್‌ಬಾಸ್ ಮನೆಗೆ ಹೋದ್ರಾ ಪ್ರಶಾಂತ್ ಸಂಬರಗಿ? 

ಮಹಿಳಾ ದಿನಾಚರಣೆ ಹೇಗೆ ವಿಶೇಷವಾಗಿ ಆಚರಿಸಬೇಕು ಎಂಬುದರ ಬಗ್ಗೆ ಮಹತ್ವ ಸಾರುವ ಸಲುವಾಗಿ ಸ್ಪರ್ಧಿಗಳು ಮನೋರಂಜನೆ ಕಥೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಾದ-ವಿವಾದಗಳು ನಡೆಯುವ ಸರಿಯಾದ ಸಮಯಕ್ಕೆ ನಾಮಿನೇಟ್ ಮಾಡಲು ಸೂಚಿಸುತ್ತಾರೆ. ಸೀಕ್ರೇಟ್‌ ರೂಂಗೆ ಹೋದವರೇ ಅವರದ್ದೇ ಕಾರಣ ಕೊಟ್ಟು ನಾಮಿನೇಟ್ ಮಾಡಿದ್ದಾರೆ.

ನಿರ್ಮಲಾ ಚೆನ್ನಪ್ಪ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ಗೀತಾ, ನಿಧಿ ಸುಬ್ಬಯ್ಯ, ವಿಶ್ವನಾಥ್, ಚಂದ್ರಕಲಾ ನಾಮಿನೇಟ್ ಆದವರು. ಕ್ಯಾಪ್ಟನ್ ಶಮಂತ್ 'ಶುಭ ಸರಿಯಾಗಿ ಕೆಲಸ ಮಾಡುವುದಿಲ್ಲ. ಟೈಂ ವೇಸ್ಟ್ ಮಾಡುತ್ತಾರೆ. ಬೇರೆ ಏನೂ ಕಾರಣ ಇಲ್ಲ ನನಗೆ,' ಎಂದು ಶುಭ ಪೂಂಜಾ ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತಾರೆ. ಆದರೆ ಬ್ರೋ ಗೌಡ ಕೊಟ್ಟ ಕಾರಣ ಸೂಕ್ತವಾಗಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. 

45 ವರ್ಷದಿಂದ ಸಿಗರೇಟ್‌ ಸೇದುತ್ತಿದ್ದೆ, 2 ವಾರದಿಂದ ಮುಟ್ಟಿಲ್ಲ: ಶಂಕರ್ ಅಶ್ವತ್ಥ್ 

ನಿರ್ಮಲಾ ಈ ವಾರವೂ ಅತಿ ಹೆಚ್ಚು ಓಟು ಪಡೆಯಲು ಒಂದು ಕಾರಣವಿದೆ. ಮೊದಲ ವಾರವೇ ತಮ್ಮನ್ನು ತಾವು ನಾಮಿನೇಟ್‌ ಮಾಡಿಕೊಂಡು, ಇಡೀ ವಾರ ಉಳಿದವರಿಗೆ ಗಿಲ್ಟ್ ಫೀಲ್‌ ಮಾಡುವಂತೆ ವರ್ತಿಸುತ್ತಿದ್ದಾರೆ. ಹಾಗೂ ಹಳೇ ಚಾಳಿ ಮುಂದುವರಿಸುತ್ತಿದ್ದಾರೆ. ಇದರಿಂದ ಮನೆಯಲ್ಲಿ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಇನ್ನೂ ಪ್ರಶಾಂತ್  ಹೆಣ್ಣು ಮಕ್ಕಳನ್ನು ವಿಲನ್ ರೀತಿ ನೋಡುತ್ತಾರೆ,  ಮನೆಯಲ್ಲಿರುವವರಿಗೆ ಹೊಂದಿಕೊಳ್ಳವ ಮಸಸ್ಥಿತಿ ಅವರಿಗಿಲ್ಲ. ಕ್ಯಾಪ್ಟನ್ ಆಗದಿದ್ದರೂ ಲೀಡರ್‌ಶಿಪ್‌ ಮಾಡ್ತಾರೆ,' ಎಂದು ಸ್ಪರ್ಧಿಗಳು ಕಾರಣ ಕೊಟ್ಟಿದ್ದಾರೆ.