ಬಿಗ್‌‌ಬಾಸ್‌ ಸೀಸನ್‌ 8ರ 7ನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕಳೆದ ವಾರ ಯಾರೂ ಕಲ್ಪನೆ ಮಾಡಿರದ ಅಚ್ಚರಿ ಬಿಬಿ ಮನೆಯಲ್ಲಿ ನಡೆದಿದೆ. ವೈಜಯಂತಿ ಸ್ವಇಚ್ಚೆಯಿಂದ ಹೊರ ನಡೆದಿದ್ದಾರೆ. ಈ ಕಾರಣಕ್ಕೆ ಮನೆಯಿಂದ ಎಲಿಮಿನೇಟ್ ಆದ ಶಮಂತ್, ಈ ವಾರ ಸೇಫ್ ಆಗಿದ್ದು, ಮುಂದಿನ ವಾರ ನೇರವಾಗಿ ನಾಮಿನೇಟ್ ಆಗತ್ತಾರೆ. 

ಬೆಂಗಳೂರಿನಲ್ಲಿರುವ ಈ ಎರಡು ದುಬಾರಿ ಹೋಟೆಲ್‌ಗಳ ಮಾಲಕಿ ಬಿಗ್ ಬಾಸ್‌ ಮನೆಯಲ್ಲಿರುವ ವೈಜಯಂತಿ! 

ಪ್ರಶಾಂತ್ ಸಂಬರಗಿ ಈ ವಾರದ ಕ್ಯಾಪ್ಟನ್ ಆಗಿದ್ದು, ಉತ್ತಮವಾಗಿ ಮನೆ ನಡೆಸುಕೊಂಡು ಹೋಗುತ್ತಿದ್ದಾರೆ ಎಂಬುವುದು ಮನೆ ಸದಸ್ಯರ ಅಭಿಪ್ರಾಯ. ಬಿಬಿ ನೀಡಲಾಗಿದ್ದ ಟಾಸ್ಕ್‌ನಲ್ಲಿ ಯಾವುದೇ ಲೋಪದೋಷವಿಲ್ಲದಂತೆ ಮನೆಯನ್ನು ನಡೆಸಿಕೊಂಡು ಬಂದಿದ್ದಾರೆ. ಹಾಗೆಯೇ ಈ ವಾರದ ನಾಮಿನೇಷನ್‌ ಕೂಡ ನಡೆದಿದೆ...

ಡೈರೆಕ್ಟ್ ನಾಮಿನೇಟ್ ಆಗಿರುವ ಶಮಂತ್ ಜೊತೆ ಅತಿ ಹೆಚ್ಚಿನ ವೋಟ್‌ ಪಡೆದಿರುವ ವಿಶ್ವನಾಥ್, ಮನೆಯಲ್ಲಿ ಗೇಮ್‌ ಪ್ಲಾನ್ ಮಾಡುತ್ತಿರುವ ಚಕ್ರವರ್ತಿ ಚಂದ್ರಚೂಡ್, ಸ್ಟ್ರಾಂಗ್ ಸ್ಪರ್ಧಿ ಎಂದೇ ಪರಿಗಣಿಸಲ್ಪಟ್ಟ ರಾಜೀವ್  ಹಾಗೂ ಅರವಿಂದ್, ಸೈಲೆಂಟ್ ಆಗಿದ್ದಾರೆಂದು ದಿವ್ಯಾ ಸುರೇಶ್ ನಾಮಿನೇಟ್ ಆಗಿದ್ದರು. ಕ್ಯಾಪ್ಟನ್ ಪ್ರಶಾಂತ್ ಒಬ್ಬ ವ್ಯಕ್ತಿಯನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. 'ಬಿಗ್ ಬಾಸ್‌ ಮನೆಯಲ್ಲಿ ಈ ದಿವ್ಯಾ ಉರುಡುಗ ಕೊಡುಗೆ ಕನಿಷ್ಠ. ಟಾಸ್ಕ್‌ನಲ್ಲಿ ಮಾತ್ರ ಉತ್ತೀರ್ಣರಾಗುತ್ತಿದ್ದಾರೆ. ಅರವಿಂದ್ ಹೊರತು ಪಡಿಸಿ, ಬೇರೆಯವರೊಂದಿಗೆ ಬೆರೆಯುತ್ತಿಲ್ಲ' ಎಂಬ ಕಾರಣ ನೀಡಿ, ದಿವ್ಯಾ ಉರುಡುಗರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.

ಕಬ್ಬು ಬೆಳೆಯೋದು ಹೇಗೆಂದು ಹೇಳಿಕೊಟ್ಟ ಸಂಬರಗಿ; ಬಿದ್ದು ಬಿದ್ದು ನಕ್ಕಿದ ಸ್ಪರ್ಧಿಗಳು! 

ಮನೆಯಲ್ಲಿ ಸ್ಪರ್ಧಿಯೇ ಅಲ್ಲ ಎಂಬಂತೆ ಇರುವ ಶಮಂತ್ ವಾರ ವಾರವೂ ಸೇಫ್ ಆಗುತ್ತಿರುವುದನ್ನು ನೋಡಿ ನೆಟ್ಟಿಗರು ಈ ವಾರವೂ ಶಮಂತ್ ಸೇಫ್ ಆದರೆ ಅವರು ಪಕ್ಕಾ ದೇವರ ಮಗ ಎನ್ನುತ್ತಿದ್ದಾರೆ.