ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಕೃಷಿ ಜ್ಞಾನ ಕಂಡು ಬಿಗ್ ಬಾಸ್‌ ಮನೆಯಲ್ಲಿದ್ದ ಸದಸ್ಯರು ಬಿದ್ದು ಬಿದ್ದು ನಕ್ಕಿದ್ದಾರೆ. ಚಕ್ರವರ್ತಿ ಆಗಮನದಿಂದ ಪ್ರಶಾಂತ ಬಾಯಿ ಕಟ್ಟಿದಂತಾಗಿದೆ. 

ಬಿಗ್‌ಬಾಸ್‌ ಮನೆಯಲ್ಲಿ ದೊಡ್ಡ ಬಿರುಗಾಳಿ, ಸುಂಟರಗಾಳಿ ಎಬ್ಬಿಸಲು ಪ್ರಶಾಂತ ಸಂಬರಗಿ ಎಂಟ್ರಿ ಆಗುತ್ತಿದ್ದಾರೆ ಎಂದು ಕೊಂಡ ವೀಕ್ಷಕರಿಗೆ ಶಾಕ್ ಆಗಿದೆ. ಪ್ರಶಾಂತ್ ಅವರ ಇನ್ನೊಂದು ಮುಖ ನೋಡಿ, 'ಇಲ್ಲ ಇರುವ ನ್ಯೂಸ್ ಚಾನೆಲ್‌ನಲ್ಲಿ ಮಾತ್ರ ಹೀಗೆ ಮಾತನಾಡುವುದು. ರಿಯಲ್ ಲೈಫ್‌ನಲ್ಲಿ ಒಳ್ಳೆಯ ಮನುಷ್ಯ,' ಎಂಬ ಭಾವನೆ ಎಲ್ಲರಲ್ಲೂ ಮೂಡಿರುವುದು ಸುಳ್ಳಲ್ಲ.

ಅರವಿಂದ್‌ಗೆ ನಾನು ಗರ್ಲ್‌ಫ್ರೆಂಡ್‌, ತಂಗಿ, ಹೆಂಡ್ತಿಯೂ ಆಗಿರ್ಬೋದು; ಪ್ರಶಾಂತ್‌ ಸಂಬರಗಿಗೆ ದಿವ್ಯಾ ವರ್ನಿಂಗ್! 

ಅಡುಗೆ ಇನ್ನುಳಿದ ವಿಚಾರಗಳ ಬಗ್ಗೆ ಪ್ರಶಾಂತ್‌ ಸಂಬರಗಿಗೆ ಇರುವ ಜ್ಞಾನವನ್ನು ಮೆಚ್ಚಿಕೊಂಡ ಸದಸ್ಯರು, ಕೃಷಿ ವಿಚಾರದ ಬಗ್ಗೆ ಮಾತನಾಡಿದರೆ ಮಾತ್ರ ನಕ್ಕು ನಕ್ಕು ಸುಸ್ತಾಗುತ್ತಾರೆ. 7ನೇ ವಾರದ ಕ್ಯಾಪ್ಟನ್ ಆಗಿ ಪ್ರಶಾಂತ್ ಆಯ್ಕೆಯಾದ ನಂತರ ಬ್ರೋ ಗೌಡ ಅಲಿಯಾಸ್ ಶಮಂತ್‌ಗೆ ಕಬ್ಬು ಬೆಳೆಯುವುದು ಹೇಗೆ ಎಂದ ತಿಳಿಸಿ ಕೊಟ್ಟಿದ್ದಾರೆ. ಪ್ರಶಾಂತ್ ಹೇಳುತ್ತಿದ್ದ ಪ್ರತಿಯೊಂದು ಮಾತಿಗೂ ಚಕ್ರವರ್ತಿ ಪ್ರಶ್ನೆ ಹಾಕಿ ಬಾಯಿ ಕಟ್ಟುತ್ತಿದ್ದರು. ಚಕ್ರವರ್ತಿ ಬೇಕು ಬೇಕಂದೇ ಹೀಗೆ ಮಾಡುತ್ತಿರುವುದು ಎಂದು ಪ್ರಶಾಂತ್ ಸಿಟ್ಟು ಮಾಡಿಕೊಳ್ಳುತ್ತಾರೆ. 

ಚಕ್ರವರ್ತಿ ಬಿಗ್‌ಬಾಸ್‌ಗೆ ಬಂದ ಮೇಲೆ ಪ್ರಶಾಂತ್ ಬಾಯಿಗೆ ಬೀಗ ಹಾಕಿದಂತೆ ಆಗಿದೆ. ಚಕ್ರವರ್ತಿ ತನಗೆ ಕಾಂಪಿಟೇಟರ್‌ ಎಂದು ಪ್ರಶಾಂತ್ ಭಾವಿಸಿದ್ದಾರೆ. ಹೀಗಾಗಿ ಮುಂದೆ ಒಳ್ಳೆಯ ಸ್ನೇಹಿತನಾಗಿದ್ದರೂ, ಹಿಂದೆ ಗೇಮ್ ಪ್ಲಾನ್ ಮಾಡುತ್ತಿದ್ದಾರೆ. ಇನ್ನು ಈ ವಾರ ಪ್ರಶಾಂತ್‌ ಕ್ಯಾಪ್ಟನ್ ಆಗಿರುವುದಕ್ಕೆ ಸ್ಪೆಷಲ್ ಪವರ್ ನೀಡಿದ್ದಾರೆ. ಯಾರನ್ನು ನೇರವಾಗಿ ನಾಮಿನೇಟ್ ಮಾಡುತ್ತಾರೋ, ಯಾರನ್ನು ಈ ವಾರದಿಂದ ಸೇಫ್ ಮಾಡುತ್ತಾರೆಂದು ಕಾದು ನೋಡಬೇಕಿದೆ. 

ಪ್ರಶಾಂತ್ ಸಂಬರಗಿಗೆ ಮನೆಯಲ್ಲಿ ತಬ್ಬಿಕೊಳ್ಳುವ ಮಜಾ: ಕಿಚ್ಚ ಖಡಕ್ ಎಚ್ಚರಿಕೆ 

ಕಲರ್ಸ್‌ ಕನ್ನಡ ಪೇಜ್‌ನಲ್ಲಿ ಅಪ್ಲೋಡ್ ಮಾಡಿರುವ ಕೃಷಿ ಜ್ಞಾನದ ವಿಡಿಯೋ ನೋಡಿ ನೆಟ್ಟಿಗರೂ ನಕ್ಕಿದ್ದಾರೆ. 'ಪ್ರಶಾಂತ್ ಹೇಳಿದ ರೀತಿ ಕೇಳಿ ನಾವು ಮಣ್ಣು ತಿನ್ನಬೇಕು', 'ಪ್ರಶಾಂತ ನೀವು ದಯವಿಟ್ಟು ಕೃಷಿ ಬಗ್ಗೆ ಮಾಡಬೇಡಿ,' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ.