ವೈಷ್ಣವಿ ಫ್ರೆಂಡ್ ಅಮೂಲ್ಯ ಜಗದೀಶ್‌ ಅವರನ್ನು ವರಿಸಿ ವರ್ಷಗಳು ಕಳೆದವು. ಅಗ್ನಿಸಾಕ್ಷಿ ಸೀರಿಯಲ್‌ನ ಹೀರೋ ವಿಜಯ್‌ಸೂರ್ಯನೂ ಮದುವೆ ಆಗಿದ್ದಾಯ್ತು. ಈಕೆಯ ಜೊತೆಗೆ ಆಕ್ಟ್‌ ಮಾಡಿದ ಮತ್ತೋರ್ವ ನಟಿ ವರ್ಷಾನೂ ಹಸೆಮಣೆ ತುಳಿದರು. ಆದರೆ ಅಗ್ನಿಸಾಕ್ಷಿ ಹೀರೋಯಿನ್ ವೈಷ್ಣವಿ ಮಾತ್ರ ಮದುವೆ ಮಾತು ಬಂದರೆ ಸುಮ್ಮನೆ ನಗೆಯರಳಿ, ಟೈಮ್ ಬಂದಾಗ ಆಗೇ ಆಗುತ್ತೆ ಅಂತ ಮಾತು ಹಾರಿಸಿ ಸುಮ್ಮನಾಗುತ್ತಾರೆ. ಹಾಗಂತ ಹೊಸ ಪ್ರಾಜೆಕ್ಟ್‌ಗಳಲ್ಲೆಲ್ಲೂ ಅವರು ಕಾಣಿಸಿಕೊಂಡಿಲ್ಲ. ರಿಯಾಲಿಟಿ ಶೋದಲ್ಲಿ ಬರುತ್ತಾರೆ ಅಂತ ಕಾದದ್ದೇ ಬಂತು. ತಾನೊಂದು ಹೊಸ ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದೇನೆ ಅಂತ ವೈಷ್ಣವಿ ಅವರೂ ಹೇಳಿಕೊಂಡಿದ್ದರು. ಆದರೆ ಇನ್ನೂ ತೆರೆಯ ಮೇಲೆ ಅವರನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿಲ್ಲ.

 

 

ಹಾಗಂತ ತನ್ನ ಫ್ಯಾನ್ಸ್‌ ಬಳಗವನ್ನು ಈ ಸನ್ನಿಧಿ ನಿರಾಸೆ ಮಾಡಲ್ಲ. ಅವರು ಸೋಷಲ್‌ ಮೀಡಿಯಾ ಬಹಳ ಸಕ್ರಿಯರಾಗಿದ್ದಾರೆ. ಈ ಲಾಕ್‌ಡೌನ್‌ ಟೈಮ್‌ನಲ್ಲಂತೂ ಇವರ ಇನ್‌ಸ್ಟಾದಲ್ಲಿ ಇಣುಕಿದರೆ ಎರಡು ದಿನಕ್ಕೊಮ್ಮೆ ಅಥವಾ ಕನಿಷ್ಠ ವಾರಕ್ಕೊಮ್ಮೆಯಾದರೂ ಒಂದಿಲ್ಲೊಂದು ಹೊಸ ಪೋಸ್ಟ್‌ ಕಾಣುತ್ತೆ. ವೈಷ್ಣವಿ ಸೀರಿಯಲ್ ಫೀಲ್ಡ್‌ಗೆ ಬರುವ ಮೊದಲು ಮಾಡೆಲಿಂಗ್‌ ಮಾಡುತ್ತಿದ್ದರು. ತಾನೆಷ್ಟು ಟ್ರೈ ಮಾಡಿದ್ರೂ ಸನ್ನಿಧಿ ಪಾತ್ರದಿಂದ ಹೊರಬರಲಾಗುತ್ತಿಲ್ಲ ಅಂದುಕೊಂಡ ನಟಿ ಈಗ ಪ್ರಯತ್ನ ಪಟ್ಟು ಆ ಗುಂಗಿನಿಂದ ಹೊರಬರಲು ಯತ್ನಿಸುವಂತೆ ಕಾಣುತ್ತದೆ. ಏಕೆಂದರೆ ಅವರು ಸನ್ನಿಧಿ ಅವತಾರ್ ನಲ್ಲಿ ಈ ನಡುವೆ ಕಾಣಿಸಿಕೊಂಡಿದ್ದು ಕಡಿಮೆ.

 

ಅಭಿಮಾನಿಗಳೆದೆಯಲ್ಲಿ ಚಿಟ್ಟೆ ಹಾರಿಸಿದ ಮನೆಮಗಳು ಸನ್ನಿಧಿಯ ಬೋಲ್ಡ್ ಅವತಾರ!
 

ಲಾಕ್‌ಡೌನ್‌ ಟೈಮ್‌ನಲ್ಲಿ ವೈಷ್ಣವಿ ಯೋಗದ ವಿವಿಧ ಭಂಗಿಗಳನ್ನು ತೋರಿಸಿಕೊಟ್ಟರು. ಇಂಥಾ ಟೈಮ್‌ನಲ್ಲೂ ಮುಂಜಾನೆ ಬೇಗ ಏಳುವ ಶಿಸ್ತಿನ ಹುಡುಗಿ ಈಕೆ. ಎದ್ದ ಮೇಲೆ ಯೋಗ, ಎಕ್ಸರ್‌ಸೈಸ್‌ ಮಾಡಿಯೇ ಮಾಡ್ತಾರೆ. ಬೆಳ್ಳಂಬೆಳಗ್ಗೆ ಸೂರ್ಯನ ಎಳೆಯ ಕಿರಣಗಳು ಭೂಮಿಗೆ ಬೀಳುವ ಹೊತ್ತಲ್ಲಿ ಈಕೆ ಟೆರೇಸ್‌ ಮೇಲೇರಿ ಯೋಗ ಮಾಡುತ್ತಾರೆ. ಆಗಾಗ ಅದರ ಫೋಟೋ ತೆಗೆದು ಸೋಷಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡೋದು ಇವರ ಖುಷಿ.

ಭರತನಾಟ್ಯ ಅಂದರೆ ವೈಷ್ಣವಿಗೆ ಜೀವ. ಈಗ ಅವರ ಹೆಚ್ಚಿನ ಟೈಮ್‌ ಭರತನಾಟ್ಯಕ್ಕೆ ಮೀಸಲಾಗಿದೆ. ದೇವಸ್ಥಾನಕ್ಕೆ ಹೋದರೆ ಅಲ್ಲಿ ಭರತನಾಟ್ಯ ಭಂಗಿಯಲ್ಲಿ ಪೋಸ್‌ ಕೊಡೋದೂ ಇದೆ. ಅಮ್ಮನ್ನ ಬಹಳ ಇಷ್ಟ ಪಡುವ ವೈಷ್ಣವಿ ಎಷ್ಟು ಆಧುನಿಕ ಹೆಣ್ಣೋ ಅಷ್ಟೇ ಸಂಪ್ರದಾಯಸ್ಥೆಯೂ ಹೌದು. ಫಾರಿನ್‌ಗೆ ಹೋಗಿ ಮಾಡ್‌ ಡ್ರೆಸ್‌ನಲ್ಲಿ ಮಿಂಚಿದ ಹಾಗೆ ದೇವಸ್ಥಾನಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಹೋಗಿ ದೇವರಿಗೆ ಕೈ ಮುಗಿಯೋ ದೈವಭಕ್ತೆ.

 

 

'ಅಗ್ನಿಸಾಕ್ಷಿ' ಸನ್ನಿಧಿ ಉರುಫ್ ವೈಷ್ಣವಿ ಮದುವೆ ಆಗ್ತಿದ್ದಾರಾ? 

 

ಇದೀಗ ಮದುವೆ ಹೆಣ್ಣಾಗಿ ಇನ್ ಸ್ಟಾ ಮುಂದೆ ಬಂದಿದ್ದಾರೆ. ರೇಷ್ಮೆ ಸೀರೆಯುಟ್ಟು, ಬಂಗಾರ ತೊಟ್ಟು, ನೆರಿಗೆ ಚಿಮ್ಮಿಸುತ್ತಾ ನಡೆಯುವ ಇವರ ಫೋಟೋವನ್ನು ಲಕ್ಷಾಂತರ ಮಂದಿ ನೋಡಿ ಲೈಕ್ ಮಾಡಿದ್ದಾರೆ. ಹೊಸ ಬ್ರೈಡಲ್ ಅವತಾರ್‌ನ ಸನ್ನಿಧಿ ಮತ್ತೆ ಎಲ್ಲರ ಮನ ಗೆದ್ದಿದ್ದಾರೆ. ಬ್ರೈಡಲ್ ಮೇಕಪ್ ನಲ್ಲಿರುವ ಮೂರು ಫೋಟೋಗಳನ್ನು ಈಕೆ ಇನ್‌ಸ್ಟಾದಲ್ಲಿ ಅಪ್‌ಲೋಡ್‌ ಮಾಡಿದ್ದು ಭರಪೂರ ಪ್ರತಿಕ್ರಿಯೆ ಹರಿದುಬಂದಿದೆ. ವೆಡ್ಡಿಂಗ್ ಫೋಟೋಗ್ರಫಿಗೆ ಫೇಮಸ್ ಆಗಿರೋ ಸ್ಟುಡಿಯೋ ವತಿಯಿಂದ ಈ ಫೋಟೋಶೂಟ್ ನಡೆದಿದೆ. ಇದರ ಜೊತೆಗೆ ಅದ್ಧೂರಿ ಬ್ರೈಡಲ್ ಲೆಹೆಂಗಾದಲ್ಲೂ ವೈಷ್ಣವಿ ಮಿಂಚಿದ್ದಾರೆ. ಮದ್ವೆ ಇಲ್ಲ, ಎಂಥದ್ದೂ ಇಲ್ಲ ಅನ್ನೋ ಈ ಬೆಡಗಿ ವಧುವಿನ ಫೋಟೋಶೂಟ್ ಮಾಡಿಸಿರೋದು ಹುಬ್ಬೇರಿಸೋ ಹಾಗೆ ಮಾಡಿದೆ. 'ನಾನೇನು ಮದ್ವೆನೇ ಆಗಲ್ಲ ಅಂದಿಲ್ವಲ್ಲ. ಮದುವೆ ಆಗೋದು, ಬ್ರೈಡಲ್ ಮೇಕಪ್‌ನಲ್ಲಿ ಮಿಂಚೋದು ನನಗಿಷ್ಟ' ಅನ್ನೋ ವೈಷ್ಣವಿ ಅವರ ಈ ಹಿಂದಿನ ಮಾತನ್ನೇ ಇಲ್ಲಿಗೂ ಅಪ್ಲೈ ಮಾಡಿಕೊಳ್ಳಬಹುದೇನೋ.

 

ಲಾಕ್‌ಡೌನ್‌ ಆದ್ಮೇಲೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ಮದ್ವೆ ಆಗ್ತಾರಾ ಬುಲ್ ಬುಲ್?...

 

ರೀಸೆಂಟಾಗಿ ಪಾಂಡ್ಸ್ ಹಿನ್ನೆಲೆಯಲ್ಲಿ ಪಾಂಡ್ಸ್‌ ಗರ್ಲ್ ಆಗಿ ಮೇಕ್‌ ಓವರ್ ಮಾಡಿಸಿಕೊಂಡ ಫೋಟೋ ಇದೆ. ಇದು ಸುಮ್ನೆ ಕ್ರೇಜ್‌ಗಾಗಿ ಮಾಡಿದ್ದಾ ಅಥವಾ ಪಾಂಡ್ಸ್ ಜಾಹೀರಾತಿನಲ್ಲಿ ಇನ್ಮುಂದೆ ಇವರನ್ನ ನಮ್ಮನೇ ಟಿವಿನಲ್ಲೂ ನೋಡ್ಬಹುದಾ ಅನ್ನೋದು ಇನ್ನಷ್ಟೇ ಗೊತ್ತಾಗ್ಬೇಕಷ್ಟೇ.

 

Insta Link: https://www.instagram.com/vaishnavi.r.b_/?hl=en