ಸುಮಾರು ಏಳು ವರ್ಷಗಳ ಹಿಂದಿನ ಮಾತು, ಆಗ ಕಲರ್ಸ್ ನಲ್ಲಿ 'ಲಕ್ಷ್ಮೀ ಬಾರಮ್ಮಾ' ಸೀರಿಯಲ್ ಹವಾ ಜೋರಾಗಿತ್ತು. ಇದೇ ಜನಪ್ರಿಯತೆಯನ್ನು ಇಟ್ಟುಕೊಂಡು ಇನ್ನೊಂದು ಸೀರಿಯಲ್ ಮಾಡಲು ಕಲರ್ಸ್ ತಂಡ ರೆಡಿಯಾಯ್ತು. ಅದಕ್ಕೆ ತಕ್ಕ ಹಾಗೆ 'ಲಕ್ಷ್ಮೀ ಬಾರಮ್ಮಾ' ದ ನಾಯಕಿ ಚಿನ್ನುಗೆ ಒಬ್ಬ ಗುಳಿಕೆನ್ನೆಯ ಪ್ರೇಮಿ ಹುಟ್ಟಿಕೊಂಡ. ಅವನು ಚಿನ್ನುವಿಗೆ ತಾಳಿಕಟ್ಟಿದ ಆ ಸೀರಿಯಲ್ ನಾಯಕನ ಗೆಳೆಯನೇ. ನಾಯಕನ ಜೊತೆಗೆ ಚಿನ್ನುಗೆ ರಹಸ್ಯ ಮದುವೆಯಾದದ್ದು ಗೊತ್ತಾಗದೇ ಅವಳ ಹಿಂದೆ ಬಿದ್ದು ಒದ್ದಾಡುತ್ತಿರುವಾಗಲೇ ಆ ಹುಡುಗನಿಗೆ ಮನೆಯವರು ಮದುವೆ ಫಿಕ್ಸ್ ಮಾಡುತ್ತಾರೆ. ಆ ಮದುವೆಯಿಂದಲೇ ಆರಂಭವಾದದ್ದು 'ಅಗ್ನಿಸಾಕ್ಷಿ' ಸೀರಿಯಲ್.

ಅಗ್ನಿಸಾಕ್ಷಿ ಮುಗಿದಿದ್ದಕ್ಕೆ ಮುಗಿಲು ಮುಟ್ಟಿದ ಮಹಿಳೆಯರ ಆಕ್ರಂದನ

ವಿರಹದ ಅಗ್ನಿಕುಂಡದಿಂದ ಆರಂಭವಾದ ಧಾರಾವಾಹಿ ನಿಧಾನಕ್ಕೆ ಹೊಸ ಪ್ರೇಮದ ಚಿಗುರಿಗೆ ಕಾರಣವಾಗುತ್ತೆ. ವಿರುದ್ಧ ಧೃವಗಳು ಪರಸ್ಪರ ಆಕರ್ಷಿಸಿಕೊಳ್ಳುವುದಕ್ಕೆ ಸಾಕ್ಷಿಯಾಗುತ್ತೆ. ಈ ಸೀರಿಯಲ್ ಮುಗಿಯೋ ಮುಂಚೆಯೇ ಹೀರೋ ವಿಜಯ್ ಸೂರ್ಯ ಕಾಂಟ್ರಾಕ್ಟ್ ಅವಧಿ ಮುಗಿಯಿತು ಅಂತ ಅವರು ಸೀರಿಯಲ್ಗೆ ಗುಡ್ ಬೈ  ಬಾಯ್ ಹೇಳಿ 'ಪ್ರೇಮಲೋಕ' ಅನ್ನುವ ಹೊಸ ಸೀರಿಯಲ್ ಸೇರ್ಕೊಂಡರು. ವಿಧಿಯಿಲ್ಲದೇ ಅಗ್ನಿಸಾಕ್ಷಿ ಕತೆಯಲ್ಲಿ ಅವರನ್ನು ಫಾರಿನ್ಗೆ ಕಳಿಸಲಾಯ್ತು. ವಿಲನ್ ಚಂದ್ರಿಕಾ ಅಲಿಯಾಸ್ ಪ್ರಿಯಾಂಕಾ ಬಿಗ್ ಬಾಸ್ ಮನೆಗೆ ಎಂಟ್ರಿಯಾದರು.

ಉಳಿದವಳೊಬ್ಬಳೇ, ಅವಳು ಮತ್ಯಾರೂ ಅಲ್ಲ, ಸೀರಿಯಲ್ ಹೀರೋಯಿನ್ ವೈಷ್ಣವಿ. ಅವಳು ಪಕ್ಕಾ ಸನ್ನಿಧಿ ಪಾತ್ರವನ್ನು ಆವಾಹಿಸಿಕೊಂಡವಳಂತೆ ಸೀರಿಯಲ್ ಕೊನೆಯವರೆಗೂ ಇದ್ದು, ಕೊನೆಯಲ್ಲಿ ಫಾರಿನ್ನಲ್ಲಿರುವ ಗಂಡನಿಗೆ ಜೊತೆಯಾಗಲು ಫ್ಲೈಟ್ ಏರಿದಳು. ಅಲ್ಲಿಗೆ ಅಗ್ನಿಸಾಕ್ಷಿ ಹ್ಯಾಪಿ ಎಂಡಿಂಗ್ ಆಯ್ತು.

ಸೀರಿಯಲ್ ಮುಗಿದು ಇಷ್ಟು ದಿನ ಆದಮೇಲೂ ವೈಷ್ಣವಿ ಗೌಡ ಎಲ್ಲಿ ಹೋದ್ಲೋ ಗೊತ್ತಿಲ್ಲ ಅಂತಿದ್ದಾರೆ ಆಕೆಯ ಅಭಿಮಾನಿಗಳು. ಅವರೆಲ್ಲರಲ್ಲೂ ಒಂದು ಸಂಶಯವಿದೆ. ಮತ್ತೇನೂ ಅಲ್ಲ. ಇಷ್ಟು ದಿನ ಆದ್ರೂ ಈಕೆ ಯಾವ ಹೊಸ ಪ್ರಾಜೆಕ್ಟ್ಗೂ ಕೈ ಹಾಕಿಲ್ಲ ಅಂದರೆ ವೈಷ್ಣವಿ ಏನಾದ್ರೂ ಮದುವೆ ಆಗ್ತಿದ್ದಾಳಾ ಅಂತ. ಈ ಅನುಮಾನಕ್ಕೂ ಕಾರಣ ಇದೆ. ವೈಷ್ಣವಿಯ ಗೆಳತಿ ಮತ್ತು ಕ್ಲಾಸ್ ಮೇಟ್ ನಟಿ ಅಮೂಲ್ಯ ಕಳೆದ ವರ್ಷವೇ ಮದುವೆ ಆದ್ರು. ಗೆಳತಿಯ ಮದುವೆಯಲ್ಲಿ ಭರ್ಜರಿಯಾಗಿ ಓಡಾಡಿಕೊಂಡಿದ್ದ ವೈಷ್ಣವಿಯಲ್ಲಿ ಕೆಲವರಾದ್ರೂ ನೀನ್ಯಾವಾಗ ಈ ಥರ ಗುಡ್ ನ್ಯೂಸ್ ಹೇಳ್ತೀಯಾ ಅಂತ ಕೇಳಿಯೇ ಕೇಳಿರುತ್ತಾರೆ. ನೋಡೋಣ ಅಂತ ಈಕೆ ಮುಗುಳ್ನಕ್ಕಿರುತ್ತಾಳೆ. ಹೀರೋಯಿನ್ ಆಗಿದ್ದುಕೊಂಡು ಸೀರಿಯಲ್ ಮುಗಿಯೋ ತನಕ ಮದುವೆ ಆದ್ರೂ ಕಷ್ಟವೇ. ಈಗ ಹೇಗಾದರೂ ಸೀರಿಯಲ್ ಮುಗಿದಿದೆ, ಬೇರೆ ಯಾವ ಕಮಿಟ್ಮೆಂಟ್ಸ್ಗೂ ಸೈನ್ ಮಾಡಿದ ಹಾಗಿಲ್ಲ. ಹಾಗಿದ್ದ ಮೇಲೆ ಮದುವೆ ಆಗಿ ಸೆಟಲ್ ಆಗ್ತಾರಾ ಅನ್ನೋದು ಅಭಿಮಾನಿಗಳ ಕುತೂಹಲ.

ಸಿದ್ದಾರ್ಥ್‌ ‘ಅಗ್ನಿಸಾಕ್ಷಿ’ ಬಿಟ್ಟೋದ ನಂತರ ಬದಲಾದ ಸನ್ನಿಧಿ!...
 

ಹಾಗೆ ನೋಡಿದರೆ 'ಅಗ್ನಿಸಾಕ್ಷಿ' ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಸಿದ್ಧಾರ್ಥ ಸನ್ನಿಧಿಯ ರೊಮ್ಯಾನ್ಸ್ ಹುಡುಗ ಹುಡುಗಿಯರೆದೆಯಲ್ಲಿ ಕಚಗುಳಿ ಇಟ್ಟಾಗ ಎಲ್ಲರೂ ಅಂದ್ಕೊಂಡಿದ್ದು ರಿಯಲ್ ಲೈಫ್ನಲ್ಲೂ ಇವರಿಬ್ಬರು ಮದುವೆ ಆದರೆ ಎಷ್ಟು ಚೆನ್ನಾಗಿರುತ್ತದೆ ಅಂತ. ಆದರೆ ರೀಲ್ಗೂ ರಿಯಲ್ಗೂ ವ್ಯತ್ಯಾಸ ಇದ್ದೇ ಇದೆ. ಸೀರಿಯಲ್ನಲ್ಲಿರೋದು ಕಾಲ್ಪನಿಕ ಜಗತ್ತಷ್ಟೇ ಅಂತ ಸಾಬೀತಾದದ್ದು ವಿಜಯ್ ಸೂರ್ಯ ಮತ್ತೊಬ್ಬ ಗುಳಿಕೆನ್ನೆ ಹುಡುಗಿ ಜೊತೆಗೆ ಸಪ್ತಪದಿ ತುಳಿದಾಗ.

ಸೀರಿಯಲ್ನಲ್ಲಿ ಪಕ್ಕಾ ಸಾಂಪ್ರದಾಯಿಕ ಹೆಣ್ಣಿನ ಲುಕ್‌ನಲ್ಲಿರುವ ವೈಷ್ಣವಿ ರಿಯಲ್ ಲೈಫ್ನಲ್ಲಿ ಸಖತ್‌ ಮಾಡ್‌ ಇದ್ದಾರೆ. ಅನೇಕ ಕಡೆ ಮಾಡೆಲಿಂಗ್ ಮಾಡಿದ್ದಾರೆ. ಆಧುನಿಕ ಚಿಂತನೆಯ ಈ ಮುದ್ದು ಹುಡುಗಿಗೆ ಬಾಯ್ ಫ್ರೆಂಡ್ ಇರಲ್ಲ ಅನ್ನಕ್ಕಾಗಲ್ಲ. ಆದರೆ ಎಂದೂ ಎಲ್ಲೂ ತನ್ನ ಖಾಸಗಿ ಬದುಕಿನ ಗುಟ್ಟು ಬಿಟ್ಟುಕೊಡದ ಈಕೆ ಬಾಯ್ ಫ್ರೆಂಡ್ ವಿಷಯವನ್ನು ಪಬ್ಲಿಕ್ ಆಗಿ ಹೇಳೋದನ್ನು ನಿರೀಕ್ಷಿಸೋದು ಕಷ್ಟ.

ಈ ಎಲ್ಲ ವಿದ್ಯಮಾನಗಳ ನಡುವೆ ಸಂಕ್ರಾಂತಿ ದಿನ ಇನ್ಸ್ಟಾದಲ್ಲಿ ಕಾಣಿಸಿಕೊಂಡಿದ್ದಾರೆ ವೈಷ್ಣವಿ. ಸರಳ ಸುಂದರ ಉಡುಗೆಯಲ್ಲಿ ಸಂಕ್ರಾಂತಿಯ ಶುಭಾಶಯ ಹೇಳಿದ್ದಾರೆ. ಆದಷ್ಟು ಬೇಗ ಮದುವೆಯ ಗುಡ್ ನ್ಯೂಸ್ ಅನ್ನೂ ಹೇಳಲಿ ಅನ್ನೋದು ಅಭಿಮಾನಿಗಳ ಹಾರೈಕೆ.