ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದ್ಯಾ ಗುಂಪುಗಾರಿಕೆ; ಎಲ್ಲಾ ಕಡೆ ನೀತು ವನಜಾಕ್ಷಿ ರೌಂಡ್ಸ್!

ಕ್ಯಾಮರಾ ಕಣ್ಣಿನಲ್ಲಿ ಹೆಚ್ಚು ಕಾಣಿಸದಿರುವ ಇನ್ನೊಂದು ಗುಂಪು ಅಥವಾ ವ್ಯಕ್ತಿಗಳೂ ಇದ್ದಾರೆ. ಈಶಾನಿ, ಮೈಕೇಲ್ ಅಜಯ್, ಕಾರ್ತಿಕ್ ಮಹೇಶ್ ಮುಂತಾದವರು ಎನ್ನಬಹುದು. ಆದರೆ, ಸ್ವಲ್ಪ ಹೊತ್ತಿನಲ್ಲೇ ಅವರು ವೀಕ್ಷಕರ ಕಣ್ಣಿಗೆ ಕಾಣಿಸಿಕೊಳ್ಳಬಹುದು. 

Groupism in Bbk10 Contestants at Bigg Boss home srb

ಬಿಗ್ ಬಾಸ್ ಕನ್ನಡ ಸೀಸನ್ 10 ಶುರವಾಗಿದ್ದು ಗೊತ್ತೇ ಇದೆ. ನಿನ್ನೆ (8 ಅಕ್ಟೋಬರ್ 2023) ಕ್ಕೆ ಶುರುವಾಗಿರುವ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಗುಂಪುಗಾರಿಕೆ ಪ್ರಾರಂಭವಾಗಿದೆ ಎನ್ನಬಹುದು. ಬಿಗ್‌ ಬಾಸ್ ಮನೆಯಲ್ಲಿರುವ  ಎಲ್ಲಾ ಸ್ಪರ್ಧಿಗಳೂ ಒಂದೇ ಕಡೆ ಕಾಣಿಸುವ ಕ್ಷಣಗಳು ತೀರಾ ಕಡಿಮೆ ಎನ್ನಬಹುದು. ಗುಂಪುಗಾರಿಕೆ ಈ ಹಿಂದಿನ ಬಿಗ್ ಬಾಸ್‌ ಶೋಗಳಲ್ಲಿ ಕೂಡ ಕಂಡುಬರುತ್ತಿತ್ತು. ಈ ಶೋದಲ್ಲಿ ಸಹ ಈಗಾಗಲೇ ಗ್ರುಪಿಸಂ ಶುರುವಾಗಿದೆ ಎನ್ನಬಹುದು. 

ಗೌರೀಶ್ ಅಕ್ಕಿ, ಸಿರಿ, ಭಾಗ್ಯಶ್ರೀ ಮತ್ತು ಸ್ನೇಹಿತ್ ಗೌಡ ಒಂದು ಕಡೆ ಕುಳಿತು ಮಾತನಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಸಂಗೀತಾ ಶೃಂಗೇರಿ ಮತ್ತು ತನಿಶಾ ಕುಪ್ಪಂದ, ಕಾರ್ತಿಕ್ ಮಹೇಶ್, ಸ್ನೇಕ್ ಶ್ಯಾಮ್ ಮುಂತಾದವರದೇ ಒಂದು ಗುಂಪು. ನೀತು ವನಜಾಕ್ಷಿ, ರಕ್ಷಕ್ ಬುಲೆಟ್ ಮುಂತಾದವರು ಎರಡು ಕಡೆ ತಲೆಹಾಕಿದರೂ ಯಾವ ಗುಂಪಿನೊಂದಿಗೆ ಕೂಡ ಗುರುತಿಸಿಕೊಳ್ಳದೇ ಹಾಯಾಗಿ ಹಾರಾಡಿಕೊಂಡಿದ್ದಾರೆ. 

ಏನೋ ಇದೆ ಅಂತಿದಾರೆ 'ಸುರಸುಂದ್ರ' ಅವಿನಾಶ್ ಬಿಗ್ ಬಾಸ್ ಸೀಕ್ರೆಟ್..!

ಆದರೆ, ಕ್ಯಾಮರಾ ಕಣ್ಣಿನಲ್ಲಿ ಹೆಚ್ಚು ಕಾಣಿಸದಿರುವ ಇನ್ನೊಂದು ಗುಂಪು ಅಥವಾ ವ್ಯಕ್ತಿಗಳೂ ಇದ್ದಾರೆ. ಈಶಾನಿ, ಮೈಕೇಲ್ ಅಜಯ್, ಕಾರ್ತಿಕ್ ಮಹೇಶ್ ಮುಂತಾದವರು ಎನ್ನಬಹುದು. ಆದರೆ, ಸ್ವಲ್ಪ ಹೊತ್ತಿನಲ್ಲೇ ಅವರು ವೀಕ್ಷಕರ ಕಣ್ಣಿಗೆ ಕಾಣಿಸಿಕೊಳ್ಳಬಹುದು. ಏಕೆಂದರೆ. ಈ ಶೋದಲ್ಲಿ ಯಾವಾಗ ಏನಾಗುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಇದೊಂದು ಗೇಮ್ ಶೋ!

ಹೆಂಗಸರನ್ನು ನೋಡಿದ್ರೆ ನನ್ನ ಗಂಡನಿಗೆ ತುಂಬಾ ಸಂಕೋಚ: ಗೌರೀಶ್ ಅಕ್ಕಿ ಪತ್ನಿ ಮಾಲತಿ

Latest Videos
Follow Us:
Download App:
  • android
  • ios