Bigg Boss Season 10: ಕನ್ನಡತಿಯ ಹರ್ಷ-ಭುವಿ ದೊಡ್ಮನೆಯಲ್ಲಿ ಇರ್ತಾರಾ?
ಬಿಗ್ ಬಾಸ್ ಕನ್ನಡ ಸೀಸನ್ 10 ಆದಷ್ಟು ಬೇಗ ಆರಂಭವಾಗಲಿದ್ದು, ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಎರಡು ಪ್ರೋಮೋಗಳನ್ನು ಹಂಚಿಕೊಂಡಿದೆ. ಸದ್ಯ ಬಿಗ್ ಬಾಸ್ ಮನೆಗೆ ಯಾರು ಯಾರು ಬರುತ್ತಾರೆ ಅನ್ನೋ ಕುತೂಹಲವಿದ್ದು, ಧಾರಾವಾಹಿ ಮುಗಿಸಿರುವ ಈ ಕಲಾವಿದರು ಬರ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ.
ಪುಟ್ಟಗೌರಿ ಮದುವೆ, ಕನ್ನಡತಿ ಧಾರಾವಾಹಿಗಳಲ್ಲಿ ರಂಜನಿ ರಾಘವನ್ ನಟಿಸಿದ್ದರು. ಎರಡೂ ಸೀರಿಯಲ್‌ಗಳು ಈಗಾಗಲೇ ಮುಗಿದಿವೆ. ಹಾಗಾದ್ರೆ, ರಂಜನಿ ರಾಘವನ್ ಬಿಗ್ ಬಾಸ್ ಮನೆಗೆ ಬರುತ್ತಾರಾ.
ಕನ್ನಡತಿ ಧಾರಾವಾಹಿಯಲ್ಲಿ ಹರ್ಷ ಆಗಿ ಕಿರಣ್ ರಾಜ್ ನಟಿಸಿದ್ದರು. ಸದ್ಯ ಕಿರಣ್ ರಾಜ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗ, ಬಿಗ್ ಬಾಸ್‌ಗೆ ಕಿರಣ್ ರಾಜ್ ಬರುತ್ತಾರಾ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಗಿಣಿರಾಮ' ಧಾರಾವಾಹಿಯಲ್ಲಿ ರಿತ್ವಿಕ್ ಮಠದ್ ನಟಿಸಿದ್ದು, ಅದು ಸೀರಿಯಲ್ ಮುಕ್ತಾಯವಾಗಿದೆ. ನಟ ರಿತ್ವಿಕ್ ಸದ್ಯ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ಅವರು ಬಿಗ್ ಬಾಸ್ ಮನೆಗೆ ಬರುತ್ತಾರಾ.
ಗಿಣಿರಾಮ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿ ನಯನ ಅಭಿನಯಿಸಿದ್ದರು. ಆ ಸೀರಿಯಲ್ ಮುಕ್ತಾಯಗೊಂಡಿದೆ. ಅಲ್ಲಿಗೆ, ನಟಿ ನಯನ ಬಿಗ್ ಬಾಸ್ ಮನೆಗೆ ಬರಬಹುದಾ.
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ರಾಜೇಶ್ ಧ್ರುವ ನಟಿಸುತ್ತಿದ್ದರು. ಆ ಸೀರಿಯಲ್ ಶುಭಂ ಆಗಿ ತುಂಬಾ ವರ್ಷಗಳೇ ಉರುಳಿವೆ. ‘ಬಿಗ್ ಬಾಸ್’ ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ರಾಜೇಶ್ ಧ್ರುವ ಬಿಜಿಯಾಗುತ್ತಾರಾ ಕಾದು ನೋಡಬೇಕಿದೆ.
ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕನಾಗಿ ಭರತ್ ಬೋಪಣ್ಣ ನಟಿಸುತ್ತಿದ್ದರು. ಆ ಸೀರಿಯಲ್ ಮುಗಿದಿದೆ. ‘ಬಿಗ್ ಬಾಸ್’ ಮೂಲಕ ಕನ್ನಡ ಕಿರುತೆರೆಗೆ ಭರತ್ ಬೋಪಣ್ಣ ವಾಪಸ್ ಆಗುತ್ತಾರಾ ಕಾದು ನೋಡಬೇಕಿದೆ.
ಗೌರಿಪುರದ ಗಯ್ಯಾಳಿಗಳು ಧಾರಾವಾಹಿಯಿಂದ ಲೋಕೇಶ್ ಬಸವಟ್ಟಿ ಹೊರಬಂದಿದ್ದಾರೆ. ನಟ ಲೋಕೇಶ್ ಬಸವಟ್ಟಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸುತ್ತಾರಾ.