ಚಿ ಸೌ ಸಾವಿತ್ರಿ ಸೀರಿಯಲ್‌ ಮೂಲಕ ಪಾಪ್ಯುಲರ್ ಆಗಿದ್ದ ನಟಿ ಗೌತಮಿ ಸೀರಿಯಲ್‌ಗೆ ಕಂ ಬ್ಯಾಕ್ ಮಾಡಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್ ಪಾತ್ರದ ಮೂಲಕ ಇದೀಗ ಹೊಸ ಜರ್ನಿ ಶುರು ಮಾಡಿದ್ದಾರೆ. ಇಷ್ಟು ದಿನ ಎಲ್ಲಿದ್ರು? ಏನ್ ಮಾಡ್ತಿದ್ರು?

ನಟಿ ಗೌತಮಿ ಅಂದ್ರೆ ಪಕ್ಕ ತಮಿಳು ನಟಿ ಗೌತಮಿ ನೆನಪಾಗಬಹುದು. ಆದರೆ ಈ ಹುಡುಗಿ ನಮ್ಮ ಕನ್ನಡದ ಗೌತಮಿ ಗೌಡ. ಹತ್ತು ಹನ್ನೆರಡು ವರ್ಷಗಳ ಕೆಳಗೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸೀರಿಯಲ್ ಚಿ ಸೌ ಸಾವಿತ್ರಿ ಸೀರಿಯಲ್‌ ಇವ್ರಿಗೆ ಸಖತ್ ಪ್ರಸಿದ್ಧಿ ತಂದುಕೊಡ್ತು. ಒಂದು ರೀತಿಯಲ್ಲಿ ಇವರು ಈ ಸೀರಿಯಲ್‌ ಮೂಲಕ ಮನೆಮಾತಾದರು ಅಂತಲೇ ಹೇಳಬಹುದು. ಈ ಸೀರಿಯಲ್‌ ಬಳಿಕ ತಾಯ್ಯವ್ವ, ಚೆಲುವಿ, ಚಲಿಸುವ ಮೋಡಗಳು, ಅಮ್ಮ ನಿನಗಾಗಿ ಸೇರಿದಂತೆ ಒಂದಿಷ್ಟು ಸೀರಿಯಲ್‌ಗಳಲ್ಲಿ ನಟಿಸಿದರು. ಆದರೆ ಚಿ ಸೌ ಸಾವಿತ್ರಿ ಸೀರಿಯಲ್‌ನಷ್ಟು ಮತ್ಯಾವ ಧಾರಾವಾಹಿಯೂ ಹೆಸರು ತಂದುಕೊಡಲಿಲ್ಲ. ಕೇವಲ ಸೀರಿಯಲ್‌ ಮಾತ್ರ ಅಲ್ಲ, ಗೌತಮಿ ಸಿನಿಮಾಗಳಲ್ಲೂ ನಟಿಸಿರುವ ಪ್ರತಿಭಾವಂತೆ. ಗುರು ಸಿನಿಮಾದಲ್ಲಿ ಒಂದೊಳ್ಳೆ ಪಾತ್ರ ಮಾಡಿದರು. ಕೋಟಿಗೊಬ್ಬ 2, ಅಂಬಿ ನಿನಗೆ ವಯಸ್ಸಾಯ್ತು ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು.

ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲೂ ಮಿಂಚಿದರು. ಕುಣಿಯೋಣು ಬಾ, ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸಿಂಗ್ ಸ್ಟಾರ್ ಮೊದಲಾದ ರಿಯಾಲಿಟಿ ಶೋಗಳಲ್ಲಿ ನಟನೆ ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ಬಿಗ್‌ಬಾಸ್‌ ಸೀಸನ್ 3ನಲ್ಲಿ ದೊಡ್ಡ ಮನೆಗೂ ಹೋಗಿ ಬಂದರು. ನಾಲ್ಕು ವರ್ಷಗಳ ಕೆಳಗೆ ಗೌತಮಿ ತಮ್ಮ ಬಹುಕಾಲದ ಗೆಳೆಯ ಮಲೇಷ್ಯಾದಲ್ಲಿರುವ ಜಾರ್ಜ್ ಕ್ರಿಸ್ಟಿ ಅವರನ್ನು ಮದುವೆ ಆಗ್ತಾರೆ. ಅಂಬಿ ನಿನಗೆ ವಯಸ್ಸಾಯ್ತೋ ಸಿನಿಮಾದಲ್ಲಿ ಗೌತಮಿ ಅಂದದ ನಟಿ ಸುಹಾಸಿನಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡರು.

ಇಷ್ಟೆಲ್ಲ ಜರ್ನಿಯ ನಂತರ ಈಗ ಮತ್ತೆ ಕಿರುತೆರೆಗೆ ವಾಪಾಸಾಗಿದ್ದಾರೆ. ಅದೂ ನೆಗೆಟಿವ್ ಪಾತ್ರದ ಮೂಲಕ. ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಶುರುವಾದ ಸೀರಿಯಲ್‌ 'ಭಾಗ್ಯಲಕ್ಷ್ಮೀ'. ಈ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಗೌತಮಿ ನಟಿಸಲಿದ್ದಾರೆ. ಈ ಸೀರಿಯಲ್‌ನಲ್ಲಿ ಸುಷ್ಮಾ ರಾವ್‌, ಭೂಮಿಕಾ, ತಾಂಡವ್ ಮೊದಲಾದವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲೀಗ ಭಾಗ್ಯಗಳ ಸಂಸಾರಕ್ಕೆ ಕೊಳ್ಳಿ ಇಡುವ ಹುಡುಗಿಯಾಗಿ ಗೌತಮಿ ಎಂಟ್ರಿ ಆಗಿದೆ.

ಡೆವಿಲ್ ಭಾರ್ಗವಿಯಾದ ಪ್ರಿಯಾ ಶಠಮರ್ಷಣ್ ರಿಯಲ್‌ ಲೈಫ್‌ ಬಗ್ಗೆ ಗೊತ್ತಾ?

ಭಾಗ್ಯಳ ಸಂಸಾರದಲ್ಲಿ ಹುಳಿ ಹಿಂಡುವ ಪಾತ್ರದಲ್ಲಿ ಗೌತಮಿ ಕಾಣಿಸಿಕೊಳ್ತಿದ್ದಾಳೆ. ಆಕೆ ಇಷ್ಟು ದಿನ ತಾಂಡವ್‌ ಜೊತೆ ಆಫೀಸ್‌(Office)ನಲ್ಲಿ ಜೊತೆಯಾಗಿ ಕೆಲಸ ಮಾಡ್ತಿಸ್ಲು. ಆಫೀಸ್ ಗಲಾಟೆಯಲ್ಲಿ ಆಕೆಗೆ ತಾಂಡವ್ ಜೊತೆಗೆ ಸರಿಯಾಗಿ ಟೈಮ್ ಕಳೆಯಲಿಕ್ಕೆ ಆಗ್ತಾ ಇರಲಿಲ್ಲ. ಇದೀಗ ಇವರಿಬ್ಬರಿಗೂ ಟೈಮ್(Time) ಸಿಕ್ಕಿದೆ. ಈ ಸಮಯ ಅವಳಿಗೆ ಸರ್ಪೈಸ್‌ ಗಿಫ್ಟ್‌ ನೀಡಿ ತಾಂಡವ್ ಆಕೆಯ ಜೊತೆಗೆ ರೊಮ್ಯಾಂಟಿಕ್(Romantic) ಆಗಿ ಬಿಹೇವ್ ಮಾಡ್ತಿದ್ದಾನೆ. ಅವಳಿಗೆ ಏನು ಕೇಳಿದರೂ ಕೊಡೋದಾಗಿ ಆತ ಹೇಳ್ತಿದ್ದಾನೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಆಕೆ ತಾಂಡವ್ ಮತ್ತು ಭಾಗ್ಯ ಹೊಸತಾಗಿ ಕಟ್ಟಿರೋ ಮನೆಯನ್ನೇ ಕೇಳ್ತಿದ್ದಾಳೆ. ತಾಂಡವ್ ಅದಕ್ಕೂ ಒಪ್ಪಿದ್ದಾನೆ. ಆಕೆಗೆ ತನ್ನನ್ನೇ ತಾನು ಸಮರ್ಪಿಸಿರುವಾಗ ಮನೆ ಎಲ್ಲ ಯಾವ ಲೆಕ್ಕ ಅಂತೆಲ್ಲ ಮಾತಾಡಿದ್ದಾನೆ.

View post on Instagram

ಇದೆಲ್ಲ ಭಾಗ್ಯನ ಕಿವಿಗೆ ಬಿದ್ದರೆ ಆಕೆ ಇದನ್ನು ಹೇಗೆ ನಿಭಾಯಿಸುತ್ತಾಳೆ, ಗಂಡನ ಸಿಟ್ಟು(Anger), ಆತನ ಉಡಾಫೆಗಳನ್ನು ಹೇಗೋ ಸಹಿಸಿಕೊಂಡು ಹೋಗುತ್ತಿರುವ ಆಕೆ ಮನಸ್ಸಲ್ಲಿ ತನ್ನ ಗಂಡ(Husband) ತನಗೆ ನಿಷ್ಠೆಯಿಂದ ಇರುವವನು ಅಂದುಕೊಂಡಿದ್ದಾಳೆ. ಇದೀಗ ಹೊಸ ಮನೆ ಗೃಹಪ್ರವೇಶದ ಹೊತ್ತಲ್ಲೇ ತನ್ನ ಮನೆ ಒಡೆದುಹೋಗುತ್ತಿರುವ ಸುದ್ದಿಕೇಳಿ ಈಕೆಯ ರಿಯಾಕ್ಷನ್(Reaction)ಹೇಗಿರಬಹುದು, ಈಕೆ ಇದನ್ನೆಲ್ಲ ಹೇಗೆ ನಿಭಾಯಿಸಬಹುದು, ಈ ಕಷ್ಟಗಳ ನಡುವೆಯೂ ತನ್ನ ತಂಗಿಗೆ ಶ್ರೀರಾಮಚಂದ್ರನಂಥಾ ಹುಡುಗನ ಜೊತೆ ಮದುವೆ(Marriage) ಮಾಡ್ತಾಳ ಅನ್ನೋದನ್ನೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬಹುದು.

ಸೊಂಟದ ವಿಸ್ಯ, ಬೇಡವೋ ಸಿಸ್ಯ ಅಂತಿದ್ದಾರೆ ಸಾರಾ ಅಣ್ಣಯ್ಯ!