ಲಕ್ಷಣ ಸೀರಿಯಲ್‌ನಲ್ಲಿ ಇದೀಗ ಡೆವಿಲ್ ಭಾರ್ಗವಿಯದ್ದೇ ಮಾತು. ಈ ಪಾತ್ರವನ್ನು ಬಹಳ ಅದ್ದೂರಿಯಾಗಿ ಸೀರಿಯಲ್ ಟೀಮ್ ಇಂಟ್ರಡ್ಯೂಸ್ ಮಾಡಿದೆ. ಆ ಪಾತ್ರಕ್ಕೆ ನ್ಯಾಯ ಸಲ್ಲಿಸೋ ಜೊತೆಗೆ ಪ್ರೇಕ್ಷಕರ ಮನಸ್ಸನ್ನೂ ಗೆದ್ದ ನಟಿ ಪ್ರಿಯಾ ಶಠಮರ್ಷಣ್. ಈಕೆಯ ಫ್ಯಾಮಿಲಿ ಹಿನ್ನೆಲೆ ಏನು? ಇಲ್ಲೀವರೆಗೆ ಎಲ್ಲಿದ್ರು ಅನ್ನೋ ಡೀಟೇಲ್ ಇಲ್ಲಿದೆ.
ಪ್ರಿಯಾ ಶಠಮರ್ಷಣ್! (Priya shatamarhana) ಈಗ ಸೀರಿಯಲ್ ನೋಡುವ ಮಂದಿಗೆ ಇದು ಚಿರಪರಿಚಿತ ಹೆಸರು. ತೀರಾ ಮೊನ್ನೆ ಮೊನ್ನೆವರೆಗೂ ಈ ಹೆಸರು ಹೇಳಿದರೆ ಯಾರಿದು ಅಂತ ಯೋಚ್ನೆ ಮಾಡ್ತಿದ್ದ ಜನ ಇದೀಗ ಪ್ರಿಯಾ ಶಠಮರ್ಷಣ್ ಅನ್ನುತ್ತಿದ್ದ ಹಾಗೆ, 'ಭಾರ್ಗವಿ ಅಲ್ವಾ' ಅಂತ ಮಾತಾಡ್ತಾರೆ. ರಾತ್ರಿ ಕಳೆದು ಬೆಳೆಗಾಗೋದ್ರೊಳಗೆ ಅವರ ಹೆಸರು ಆ ಲೆವೆಲ್‌ಗೆ ಫೇಮಸ್ ಆಗಿದೆ. ಜನ ಈ ಪಾತ್ರವನ್ನು ಸಖತ್ತಾಗಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಪಾತ್ರ ಮಾಡ್ತಿರೋ ನಟಿಯನ್ನೂ ಮನಸಾರೆ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಈಕೆಯ ಎಂಟ್ರಿ ಸೀನ್ ಅನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದವರೇ ಹೆಚ್ಚು. ಆ ಲೆವೆಲ್‌ನಲ್ಲಿತ್ತು ಈ ಸೀನ್. ಒಂದಿಷ್ಟು ದಿನ ಚಂದ್ರಶೇಖರ್ ಕುಟುಂಬವನ್ನೇ ಸರ್ವನಾಶ ಮಾಡಿಬಿಡ್ತೀನಿ ಅಂತ ಹಿನ್ನೆಲೆಯಿಂದಲೇ ಗುಡುಗಿದವಳು ಭಾರ್ಗವಿ. ಈ ಸೀನ್‌ನಲ್ಲಿ ಆಕೆ ವೀಕ್ಷಕರ ಕಣ್ಣೆದುರಿಗೆ ಬಂದಳು. ಹಿನ್ನೆಲೆಯಲ್ಲಿ ಕಾಳಿ ಮಾತೆಯ ಬೃಹತ್ ಪ್ರತಿಕೃತಿ. ಎದುರಿಗೆ ರಾವಣನ ಮೂರ್ತಿ. ನಡುವಿನ ಮಂಟಪದಲ್ಲಿ ಸಾಕ್ಷಾತ್ ಕಾಳಿ ಮಾತೆಯ ಹಾಗೆ ಈ ಭಾರ್ಗವಿ ರಾರಾಜಿಸಿದ್ದಳು.
ಇಂಥದ್ದೊಂದು ಪಾತ್ರಕ್ಕೆ ಬೇಕಾದ ನಟನೆಯನ್ನು ಸಾಮಾನ್ಯ ಕಲಾವಿದರಿಂದ ಹೊರತೆಗೆಸೋದು ಕಷ್ಟ. ಅದಕ್ಕೇ ರಂಗಭೂಮಿ ಕಲಾವಿದೆ ಪ್ರಿಯಾ ಅವರನ್ನು ಈ ಪಾತ್ರಕ್ಕೆ ನಿರ್ದೇಶಕ ಕಂ ಹೀರೋ ಜಗನ್ನಾಥ್ ಚಂದ್ರಶೇಖರ್ ಕರೆತಂದರು. ಹಾಗಂತ ಪ್ರಿಯಾ ಕ್ಯಾಮರ ಎದುರಿಸಿದ್ದು ಇದೇ ಮೊದಲಲ್ಲ. ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಲೇಟೆಸ್ಟ್ ಸಿನಿಮಾ ಅಂದರೆ ದುನಿಯಾ ವಿಜಯ್ ನಟನೆ, ನಿರ್ದೇಶನದ 'ಭೀಮ'. ಈ ಸಿನಿಮಾದಲ್ಲಿ ಗಿರಿಜಾ ಅನ್ನೋ ಖಡಕ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈಕೆ ಅನೇಕ ನಾಟಕಗಳಲ್ಲೂ ನಟಿಸಿದ್ದಾರೆ. ಅದ್ಭುತವಾಗಿ ಹಾಡು ಹಾಡುತ್ತಾರೆ. ಅದರಲ್ಲೂ ರಂಗಗೀತೆಗಳನ್ನು ಇವರ ಕಂಠದಲ್ಲಿ ಕೇಳೋದೇ ಚೆಂದ.
ರಾಮಾಚಾರಿ: ಸಿದ್ಧಿಮಂಗಲ ದಟ್ಟ ಕಾಡಲ್ಲಿ ಚಾರು, ಮಾನ್ಯತಾ ರಾಮಾಚಾರಿ ಕಾಲು ಹಿಡಿಯೋದೊಂದು ಬಾಕಿ!
ಅಂದಹಾಗೆ ಡೆವಿಲ್ ಭಾರ್ಗವಿ ಪಾತ್ರ ಮಾಡುತ್ತಿರುವ ಪ್ರಿಯಾ ಅವರಿಗೆ ಮದುವೆ ಆಗಿದೆ. ಇವರ ಪತಿ ರಂಗಭೂಮಿ ಕಲಾವಿದ ಜೊತೆಗೆ ಚಿತ್ರನಟ. ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಒಂದಿಷ್ಟು ಸಿನಿಮಾಗಳಲ್ಲಿ ಹೀರೋ ಆಗಿಯೂ ನಟಿಸಿದ್ದಾರೆ.'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾದ ನಾಯಕ ನಟನಾಗಿ ಅಭಿನಯಿಸಿದ್ರು. ಅಧ್ಯಾತ್ಮದಲ್ಲಿ ಪ್ರೀತಿ ಇರೋ ವ್ಯಕ್ತಿ. ಕುಂಭಮೇಳದಲ್ಲೂ ಭಾಗವಹಿಸಿ ಆ ವಿಶಿಷ್ಟ ಅನುಭವವನ್ನು ದಾಖಲಿಸಿದ್ರು. ಸೋಷಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಗಂಡ ಹೆಂಡತಿ ಇಬ್ಬರೂ ರಂಗಗೀತೆ ಹಾಡುತ್ತಾ ಮೈ ಮರೆಯೋದನ್ನು ನೋಡೋದಕ್ಕೇ ಚಂದ.
ಪ್ರಿಯಾ ಅವರ ವಿಷಯಕ್ಕೆ ಬರೋದಾದ್ರೆ ಅವರಿಗೆ ರಂಗಭೂಮಿ ಅಂದರೆ ಇವತ್ತಿಗೂ ಜೀವ. ಸುಮಾರು 14 ವರ್ಷಗಳಿಂದ ನಾನು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಕೆ ಕಿರುತೆರೆಗೆ ಬಂದು ಐದು ವರ್ಷ ಆಗಿದೆ. ಸೀರಿಯಲ್‌ಗೂ ಮೊದಲು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಸತ್ಯಪ್ರಕಾಶ್ ನಿರ್ದೇಶನದ ‘ರಾಮ ರಾಮ ರೇ’ ಸಿನಿಮಾದಲ್ಲಿ ಒಂದು ಪಾತ್ರ ನಿಭಾಯಿಸಿದ್ದರು. 'ಚೇಸ್’ ಹಾಗೂ ಮಂಸೋರೆಯವರ ‘19-20-21’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೆರಡು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗುತ್ತಿವೆ. ‘ಒಂದಲ್ಲಾ ಎರಡಲ್ಲಾ’ ಸಿನಿಮಾಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ.
Jothe jotheyali: ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು? ಅನುಗೆ ಆರ್ಯನ ನೇರ ಪ್ರಶ್ನೆ!
ಡೆವಿಲ್ ಭಾರ್ಗವಿ ಪಾತ್ರವನ್ನು ಈಕೆ ಬಹಳ ಎನ್‌ಜಾಯ್ ಮಾಡ್ತಿದ್ದಾರಂತೆ. ಎರಡು ಶೇಡ್‌ಗಳಲ್ಲಿ ಈ ಪಾತ್ರ ಸಾಗುತ್ತದೆ. ಪ್ರಿಯಾ ಇದೇ ಮೊದಲ ಬಾರಿಗೆ ಭಾರ್ಗವಿ ಪಾತ್ರದ ಮೂಲಕ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸೀರಿಯಲ್‌ಗಳಲ್ಲಿ ಬರೋ ಸಾಮಾನ್ಯ ವಿಲನ್ ಪಾತ್ರಕ್ಕಿಂತ ತುಂಭಾ ವಿಭಿನ್ನ ರೀತಿಯಲ್ಲಿದೆ. ಸುಮಾರು ಒಂದು ವರ್ಷಗಳ ಕಾಲ ತೆರೆಮರೆಯಲ್ಲೇ ಇದ್ದ ಈ ಪಾತ್ರ ಇದೀಗ ವೀಕ್ಷಕರ ಮುಂದೆ ಬಂದಿದೆ. ಅದ್ದೂರಿ ಎಂಟ್ರಿ ಪಡೆದಿದೆ. ಈ ಮೂಲಕ ಪ್ರಿಯಾ ಅವರೂ ಮನೆಮಾತಾಗಿದ್ದಾರೆ.
