Ramachari ಮನೆಗೇ ಬಂದು ಧಮಕಿ ಹಾಕಿದ ಚಾರು! ಇವಳಿಗೆ ಬ್ರೇಕ್ ಹಾಕೋರೇ ಇಲ್ವಾ?
ರಾಮಾಚಾರಿ ಸೀರಿಯಲ್‌ನಲ್ಲಿ ಒಮ್ಮೆ ರಾಮಾಚಾರಿ ಮೇಲುಗೈ ಆದ್ರೆ ಇನ್ನೊಮ್ಮೆ ಚಾರು ದರ್ಪ, ದುರಹಂಕಾರದಿಂದ ಮೇಲುಗೈ ಸಾಧಿಸುತ್ತಾಳೆ. ಚಾರು ರಾಮಾಚಾರಿ ಮನೆಗೇ ಬಂದು ತನಗೆ ಪರ್ಫಾಮೆನ್ಸ್ ಸರ್ಟಿಫಿಕೇಟ್ ಕೊಡುವಂತೆ ರಾಮಾಚಾರಿಗೆ ಧಮಕಿ ಹಾಕಿದ್ದಾಳೆ. ರಾತ್ರೋ ರಾತ್ರಿ ರಾಮಾಚಾರಿ ಚಾರು ಮನೆಗೆ ಬಂದಿದ್ದಾನೆ. ಅವನ ಕೈಯಲ್ಲಿ ಏನೋ ಇದೆ. ಅದು ಚಾರು ಸರ್ಟಿಫಿಕೇಟಾ? ಅವನಿಗೂ ಚಾರು ಸಹವಾಸ ಸಾಕಾಯ್ತಾ?
'ರಾಮಾಚಾರಿ' ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಇದರ ಕಥೆ ಬೇರೆ ಸೀರಿಯಲ್ ಕಥೆಗಿಂತ ಭಿನ್ನವಾಗಿರುವುದಕ್ಕೋ ಏನೋ ಹೆಚ್ಚು ಜನ ಈ ಸೀರಿಯಲ್‌ಅನ್ನು ಇಷ್ಟಪಡುತ್ತಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ನಾಯಕ ರಾಮಾಚಾರಿ. ಪುರೋಹಿತರ ಮನೆಯ ಸುಸಂಸ್ಕೃತ ಹುಡುಗ. ಅಪಾರ ಬುದ್ಧಿವಂತ. ಪ್ರತೀ ಕೆಲಸವನ್ನೂ ಶ್ರದ್ಧೆಯಿಂದ ಮಾಡುವ ಕಾರಣ ಜೈ ಶಂಕರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ಈ ಸೀರಿಯಲ್ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ, ಅಪ್ಪ ಒಳ್ಳೆ ಮನಸ್ಸಿನ ಉದ್ಯಮಿ ಆಗಿದ್ದರೂ ತಾಯಿಯ ದುರ್ವತನೆಯಿಂದ ಪ್ರಭಾವಿತಳಾಗಿ ಚಾರು ತಾಯಿಯ ದರ್ಪ, ದುಡ್ಡಿನ ಮದವನ್ನೇ ಕಲಿತಿದ್ದಾಳೆ. ಹೀಗಾಗಿ ಒಳಗೆ ಒಳ್ಳೆತನವಿದ್ದರೂ ಮೇಲ್ನೋಟಕ್ಕೆ ದುರಹಂಕಾರಿಯಾಗಿ ಕಾಣುತ್ತಾಳೆ.
ಈಕೆಗೆ ಅಪ್ಪನ ಕಂಪನಿಯಲ್ಲಿ ಸಿಇಓ ಆಗೆ ಮೆರೆಯಬೇಕು ಅನ್ನೋ ಆಸೆ. ಆದ್ರೆ ಜೈ ಶಂಕರ್ ಅವರಿಗೆ ತನ್ನ ಮಗಳು ಆ ಹುದ್ದೆಗೆ ಯೋಗ್ಯಳಾಗಿದ್ದರೆ ಮಾತ್ರ ಸರ್ಟಿಫಿಕೇಟ್ ಕೊಡುವ ಮನಸ್ಸು. ಹೀಗಾಗಿ ರಾಮಾಚಾರಿ ಕೈಯಿಂದ ಪರ್ಫಾಮೆನ್ಸ್ ಸರ್ಟಿಫಿಕೇಟ್ ತಂದರೆ ಮಾತ್ರ ಸಿಇಓ ಹುದ್ದೆ ಕೊಡೋದಾಗಿ ಹೇಳಿದ್ದಾರೆ. ಆದರೆ ಆರಂಭದಿಂದಲೂ ಸುಲಭದಲ್ಲೇ ಎಲ್ಲವನ್ನೂ ಕೈಗೆಟಕಿಸಿಕೊಂಡ ಚಾರು ಕೆಟ್ಟ ದಾರಿಯ ಮೂಲಕ ಆ ಸರ್ಟಿಫಿಕೇಟ್ ಪಡೆಯಲು ಹವಣಿಸುತ್ತಿದ್ದಾಳೆ. ಇದು ರಾಮಾಚಾರಿಯ ಸಿಟ್ಟಿಗೆ ಕಾರಣವಾಗಿದೆ.
Hitler Kalyana: ಏಜೆ ವಿರುದ್ಧ ಲೀಲಾಗೆ ಸಿಕ್ತು ಸಾಕ್ಷಿ, ಏಜೆ ಕಂಬಿ ಎಣಿಸೋದು ಗ್ಯಾರಂಟಿ!
ತಾನು ಕೊಡುವ ಮೂರು ಟಾಸ್ಕ್‌ನಲ್ಲಿ ಗೆದ್ದರೆ ಚಾರುವಿಗೆ ಪರ್ಫಾಮೆನ್ಸ್ ಸರ್ಟಿಫಿಕೇಟ್ ಕೊಡೋದಾಗಿ ರಾಮಾಚಾರಿ ಹೇಳಿದ್ದಾನೆ. ಅದರಲ್ಲಿ ಎರಡು ಟಾಸ್ಕ್‌ಗಳನ್ನು ಚಾರು ಕಷ್ಟಪಟ್ಟು ಮಾಡಿದ್ದಾಳೆ. ಆದರೆ ಆ ಮೂಲಕ ಅವಳ ಒಳ್ಳೆಯತನ ಹೊರಗೆ ಬಂದಿದೆ. ಆದರೆ ಮೂರನೇ ಟಾಸ್ಕ್ ಅವಳ ತಾಯಿಯ ವಿರುದ್ಧವೇ ಇರುವ ಕಾರಣ ಅವಳು ತಾಯಿಯ ಸಪೋರ್ಟಿಗೆ ನಿಂತಿದ್ದಾಳೆ. ಇನ್ನೊಂದು ಕಡೆ ಅವಳಿಗೆ ಸರ್ಟಿಫಿಕೇಟ್ ಪಡೆಯೋ ಆಸೆ. ಅವನು ಕೊಟ್ಟ ಟಾಸ್ಕ್ ಮಾಡದೆ ಹೋದರೆ ರಾಮಾಚಾರಿ ಎಷ್ಟೇ ಕೇಳಿದ್ರೂ ಸರ್ಟಿಫಿಕೇಟ್ ಕೊಡಲ್ಲ ಎಂದು ಚಾರುಗೆ ಗೊತ್ತಾಗಿದೆ. ಅದಕ್ಕೆ ಅವರ ಮನೆಯವರ ಹತ್ತಿರ ಹೇಳಿ ಈ ಕೆಲಸ ಮಾಡಿಸಬೇಕು ಎಂದು ರಾಮಾಚಾರಿ ಮನೆಗೆ ಹೋಗಿದ್ದಾಳೆ. ರಾಮಾಚಾರಿಗೆ ಒಳ್ಳೆಯ ಮಾತಿನಿಂದ ಹೇಳಿ ನನಗೆ ಬೇಕಾದದ್ದನ್ನು ಕೊಡಿಸಿ. ಇಲ್ಲ ಪರಿಣಾಮ ನೆಟ್ಟಗಿರಲ್ಲ. ರಾಮಾಚಾರಿಯನ್ನು ನಾನು ಬುಟ್ಟಿಗೆ ಹಾಕಿಕೊಂಡು, ಈ ಮನೆಯ ಸೊಸೆಯಾಗಿ ಬರಬೇಕಾಗುತ್ತೆ. ಈ ಮನೆಗೆ ನರಕ ತೋರಿಸುತ್ತೇನೆ. ಸುಸಂಸ್ಕೃತ ಮನೆಯನ್ನು ಹಾಳು ಮಾಡುತ್ತೇನೆ. ಮರ್ಯಾದೆಯಿಂದ ರಾಮಾಚಾರಿಗೆ ಸರ್ಟಿಫಿಕೇಟ್ ಕೊಡಲು ಹೇಳಿ ಎಂದು ಮನೆಯವರಿಗೆ ಧಮಕಿ ಹಾಕಿ ಹೋಗಿದ್ದಾಳೆ. ಆಕೆ ಹೊರಹೋಗುವಾಗ ರಾಮಾಚಾರಿ ಎದುರಾಗಿದ್ದಾನೆ. ಎದುರಿಗೆ ಸಿಕ್ಕ ಚಾರುಳನ್ನು, ಏನ್ ಮೇಡಂ ನೀವು ನಮ್ಮ ಮನೆಗೆ ಬಂದಿದೀರಾ ಎಂದು ಕೇಳಿದ್ದಕ್ಕೆ. ಒಳಗೆ ಹೋಗು ನಿನಗೆ ಎಲ್ಲಾ ಗೊತ್ತಾಗುತ್ತೆ ಅಂತಾಳೆ. ರಾಮಾಚಾರಿ ಗಾಬರಿಯಿಂದ ಮನೆ ಒಳಗೆ ಹೋಗುತ್ತಾನೆ. ಆಗ ರಾಮಾಚಾರಿ, ಅಜ್ಜಿ, ತಂಗಿ ಚಾರು ಹೇಳಿದ್ದನ್ನು ಹೇಳುತ್ತಾರೆ.
ಕನ್ನಡತಿ: ರತ್ನಮಾಲಾ ಕೊಟ್ಟ ಮೊದಲ ಹೊಡೆತಕ್ಕೆ ತತ್ತರಿಸಿದ ಸಾನಿಯಾ! ಅಮ್ಮಮ್ಮ ಮುಂದಿನ ಹೆಜ್ಜೆ ಏನು
ಇದನ್ನೆಲ್ಲ ಕಂಡು ರಾಮಾಚಾರಿ ರಾತ್ರೋ ರಾತ್ರಿ ಚಾರುಲತಾ ಮನೆಗೆ ಬಂದಿದ್ದಾನೆ. ಆತ ಕೈಯಲ್ಲಿ ಬೇರೆ ಏನೋ ಹಿಡಿದುಕೊಂಡು ಬಂದಿದ್ದಾನೆ. ತಾನು ಧಮಕಿ ಹಾಕಿದ್ದು ವರ್ಕೌಟ್ ಆಗಿದೆ. ರಾಮಾಚಾರಿ ಸರ್ಟಿಫಿಕೇಟ್ ಕೊಟ್ಟೇ ಬಿಟ್ಟ ಅಂತ ಚಾರು ಖುಷಿಯಲ್ಲಿರುತ್ತಾಳೆ. ಆದರೆ ಅಲ್ಲಿ ಆಗಿದ್ದೇ ಬೇರೆ. ರಾಮಾಚಾರಿ ಇಡೀ ಮನೆಮಂದಿಗೆ ಚಾರು ವಿಚಾರವಾಗಿ ಕ್ಲಾಸ್ ತಗೊಳ್ತಾನೆ. ಮನೆಯವರ ವರ್ತನೆಯನ್ನು ಅವರೆದುರೇ ಖಂಡಿಸಿ ಮಾತನಾಡುತ್ತಾನೆ. ಜೈ ಶಂಕರ್‌ಗೆ ರಾಮಾಚಾರಿ ಮಾತಿನ ರೀತಿ ಶುರುವಿಗೆ ಅರ್ಥ ಆಗಲ್ಲ. ಆದರೆ ಆತ ಚಾರು ತನ್ನ ಮನೆಗೆ ಬಂದು ಮಾಡಿದ ಕೆಲಸವನ್ನು ಬಿಡಿಸಿ ಹೇಳಿದಾಗ ಅವರಿಗೂ ಆಘಾತವಾಗುತ್ತೆ. ಸುಮ್ಮ ಸುಮ್ಮನೆ ಸರ್ಟಿಫಿಕೇಟ್ ಕೊಡಲು ತನ್ನಿಂದಾಗದು, ಚಾರುವಿನ ಈ ವರ್ತನೆಗೆ ಕಾರಣ ಆಕೆಯ ತಾಯಿ. ಆಕೆ ಒಳಗಿನಿಂದ ಒಳ್ಳೆಯವಳು. ಈ ತಾಯಿಗೆ ನೀವು ಬುದ್ಧಿ ಹೇಳದಿದ್ದರೆ ಮಗಳು ಕೈತಪ್ಪಿ ಹೋಗ್ತಾಳೆ ಅನ್ನೋದನ್ನು ರಾಮಾಚಾರಿ ಜೈ ಶಂಕರ್‌ಗೆ ಹೇಳಿ ಕೈ ಮುಗಿದು ಹೊರಡುತ್ತಾನೆ.
ಇತ್ತ ಜೈ ಶಂಕರ್ ಏನೊಂದೂ ಹೇಳದೇ ತನ್ನ ಎರಡನೇ ಪತ್ನಿ ಶರ್ಮಿಳಾಳನ್ನು ಕರೆಯುತ್ತಾರೆ. ಮಾನ್ಯತಾ ಮತ್ತು ಚಾರು ಸಿಟ್ಟು, ಅವಮಾನಲ್ಲಿ ಮುಖಭಂಗವಾಗಿ ನಿಂತಿದ್ದಾರೆ. ಇದು ಮುಂದೆ ಎಲ್ಲಿಗೆ ಹೋಗಬಹುದು ಅನ್ನೋ ಕುತೂಹಲ ಹೆಚ್ಚಾಗಿದೆ.
ರುತ್ವಿಕ್ ಕೃಪಾಕರ್ ರಾಮಾಚಾರಿಯಾಗಿ ಉತ್ತಮ ಅಭಿನಯ ತೋರಿದರೆ, ಚಾರು ಪಾತ್ರದಲ್ಲಿ ಮೌನಾ ಗುಡ್ಡೆ ಮನೆ ನಟಿಸಿದ್ದಾರೆ. ಚಿ.ಗುರುದತ್ ಉದ್ಯಮಿ ಜೈ ಶಂಕರ್ ಪಾತ್ರದಲ್ಲಿ, ಸಿರಿ ಅವರು ಶರ್ಮಿಳಾ ಪಾತ್ರದಲ್ಲಿ ನಟಿಸಿದ್ದಾರೆ.