ನಾಲ್ವರು ಹುಡುಗಿಯರ ಜೊತೆ ಚಂದನ್ ಶೆಟ್ಟಿ ಡಾನ್ಸ್: ಇದು ಚೆನ್ನಾಗಿರೋದು ಎಂದ ಫ್ಯಾನ್ಸ್!
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇರುವ ಚಂದನ್ ಶೆಟ್ಟಿ ಡಾನ್ಸ್ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ನಿವೇದಿತಾಗೆ ರಿವೆಂಜಾ ಅಂತಾ ಪ್ರಶ್ನೆ ಕೇಳಿದ್ದಾರೆ.
ವಿಚ್ಛೇದನದ ನಂತ್ರ ರ್ಯಾಪರ್ ಚಂದನ್ ಶೆಟ್ಟಿ ಧೂಳೆಬ್ಬಿಸಿದ್ದಾರೆ. ಅವರ ಡಾನ್ಸ್ ವಿಡಿಯೋ ಒಂದು ಫುಲ್ ವೈರಲ್ ಆಗ್ತಿದೆ. ನಾಲ್ಕು ಹುಡುಗಿಯರ ಜೊತೆ ಚಂದನ್ ಶೆಟ್ಟಿ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದಾರೆ. ಅವರ, ನೀ ಹಾಕೊಂಡಿರೋ ಬಟ್ಟೆ ನಾ ನೋಡಿ ಸ್ಟನ್ನಾಗ್ ಬಿಟ್ಟೆ ಹಾಡಿಗೆ ಚಂದನ್ ಡಾನ್ಸ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಇದು ಇದು ನಿಜವಾಗ್ಲೂ ಚೆನ್ನಾಗಿರೋದು ಅಂತ ಕಮೆಂಟ್ ಮಾಡಿದ್ದಾರೆ.
ನಿವೇದಿತಾ (Nivedita) ವಿಚ್ಛೇದನದ ನಂತ್ರ ಚಂದನ್ (Chandan) ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದಾದ್ಮೇಲೆ ಒಂದು ಹೇಳಿಕೆ ನೀಡ್ತಿರುವ ಚಂದನ್ ಅವರ ಶಾರ್ಟ್ಸ್ ಒಂದು ವೈರಲ್ ಆಗಿದೆ. ಈ ಹಿಂದೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಒಟ್ಟಿಗೆ ಒಂದಿಷ್ಟು ವಿಡಿಯೋ (Video) ಮಾಡಿದ್ದರು. ವಿಚ್ಛೇದನದ ನಂತ್ರ ನಿವೇದಿತಾ ವಿಡಿಯೋ ಮಾಡೋದನ್ನು ಬಿಟ್ಟಿಲ್ಲ. ಈಗಾಗಲೇ ಸಾಕಷ್ಟು ರೀಲ್ಸ್ ಗಳನ್ನು ನಿವೇದಿತಾ ಪೋಸ್ಟ್ ಮಾಡಿದ್ದಾರೆ. ಆದ್ರೆ ಚಂದನ್ ಶೆಟ್ಟಿ ವಿಡಿಯೋ ಎಲ್ಲೂ ಕಂಡಿರಲಿಲ್ಲ. ಈಗ ವಿಡಿಯೋ ಫ್ಯಾಕ್ಟರಿ ಹೆಸರಿನ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದಕ್ಕೆ 150ಕ್ಕೂ ಹೆಚ್ಚು ಮಂದಿ ಈಗಾಗಲೇ ಕಮೆಂಟ್ ಮಾಡಿದ್ದಾರೆ. ಬಹುತೇಕರು ಚಂದನ್ ಶೆಟ್ಟಿ ಡಾನ್ಸ್ ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮತ್ತೆ ಕೆಲ ಅಭಿಮಾನಿಗಳು ಇದು ನಿವೇದಿತಾಗೆ ರಿವೆಂಜಾ ಅಂತ ಪ್ರಶ್ನೆ ಕೇಳಿದ್ದಾರೆ. ಚಂದನ್ ನೀವು ಡಾನ್ಸ್ ಮಾಡಿ ಆ ಕಡೆ ನಿವೇದಿತಾ ಉರಿದುಕೊಳ್ಳಲಿ ಅಂತ ಕಮೆಂಟ್ ಮಾಡಿದ ಅಭಿಮಾನಿಗಳ ಸಂಖ್ಯೆಯೂ ಸಾಕಷ್ಟಿದೆ. ಇಷ್ಟರ ಮಧ್ಯೆ ಅಭಿಮಾನಿಯೊಬ್ಬರು, ಹುಡುಗಿರು ಕ್ಯೂಟ್ ಅಂತ ಮದುವೆ ಆಗ್ಬೇಡಿ ಅಂತ ಸಲಹೆ ಕೂಡ ನೀಡಿದ್ದಾರೆ. ಬೋನಿನಿಂದ ಹೊರ ಬಂದ ಸಿಂಹ ಎನ್ನುವ ಮೂಲಕ ಚಂದನ್ ಶೆಟ್ಟಿಗೆ ಪ್ರೋತ್ಸಾಹ ನೀಡಿದ ಅಭಿಮಾನಿಗಳಿದ್ದಾರೆ.
ಪುನೀತ್ ರಾಜ್ಕುಮಾರ್ ಹೇಳಿಕೊಟ್ಟ ಈ ಪಾಠ ಜೀವನ ಇರೋವರೆಗೂ ಬಿಡಲ್ಲ: ದುನಿಯಾ ವಿಜಯ್
ಚಂದನ್ ಶೆಟ್ಟಿ ಸದ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರೆ ಎಂಬ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಸಿನಿಮಾ ತಂಡದ ಜೊತೆ ಮಾಧ್ಯಮಗಳ ಮುಂದೆ ಬಂದಿದ್ದ ಚಂದನ್, ಕನ್ನಡ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದಿದ್ದಾರೆ. ಬೇರೆ ಭಾಷೆ ಸಿನಿಮಾ ನೋಡಲು ಜನರಿಗೆ ಹಣವಿರುತ್ತೆ. ಕನ್ನಡ ಸಿನಿಮಾ ನೋಡಲು ಹಣವಿರೋದಿಲ್ಲ ಎಂದು ಚಂದನ್ ಅಭಿಮಾನಿಯೊಬ್ಬರ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ.
ಎರಡು ದಿನಗಳ ಹಿಂದೆ ಸಿನಿಮಾ ಥಿಯೇಟರ್ ಮುಂದೆ ಹಾಡಿಗೆ ಸ್ಟೆಪ್ ಹಾಕಿದ್ದ ಚಂದನ್ ಎಲ್ಲ ಮರೆತು ಸಿನಿಮಾಕ್ಕೆ ಹೆಚ್ಚು ಗಮನ ನೀಡ್ತೇನೆ ಎಂಬ ಸೂಚನೆ ನೀಡಿದ್ದರು. ಕನ್ನಡದ ಬಿಗ್ ಬಾಸ್ ಸರಣಿ 5ರಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಭೇಟಿಯಾಗಿದ್ದರು. ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡರಿಗೆ ಪ್ರಪೋಸ್ ಮಾಡಿದ್ದರು. 2020ರಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆಯಾಗಿದ್ದರು. ಇಬ್ಬರು ಕ್ಯಾಂಡಿಕ್ರಶ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.
ಪ್ರಣಿತಾ ಸುಭಾಷ್ ಮತ್ತೆ ಪ್ರೆಗ್ನೆಂಟ್: ಸಾಮಾಜಿಕ ಜಾಲತಾಣದಲ್ಲಿ ಖುಷಿ ವಿಷಯವನ್ನು ಹಂಚಿಕೊಂಡ ಪೊರ್ಕಿ ನಟಿ
ಈಗ ಒಂದು ತಿಂಗಳ ಹಿಂದೆ ನಿವೇದಿತಾ ಹಾಗೂ ಚಂದನ್ ವಿಚ್ಛೇದನ ಪಡೆದಿದ್ದಾರೆ. ಅವರ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ನಂತ್ರ ಮಾಧ್ಯಮದ ಮುಂದೆ ಬಂದ ಜೋಡಿ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿರುವುದಾಗಿ ತಿಳಿಸಿತ್ತು. ನಿವೇದಿತಾ ಗೌಡ 9 ಕೋಟಿ ಪರಿಹಾರ ಕೇಳಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಆದ್ರೆ ಇದು ಸುಳ್ಳು ಎಂಬುದು ಸ್ಪಷ್ಟವಾಗಿದೆ. ಈಗ ಸೆಲೆಬ್ರಿಟಿ ಜೋಡಿ ಬೇರೆಯಾಗಿದ್ದು, ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುವ ಇವರು, ಕೆಲ ಟ್ರೋಲರ್ ಪ್ರಶ್ನೆಗೆ ದಿಟ್ಟ ಉತ್ತರ ನೀಡಿದ್ದಾರೆ.