ದೊಡ್ಡ ಮನೆಯವರಿಂದ ಕಲಿತ ಪಾಠವನ್ನು ಎಂದೂ ಮರೆಯುವುದಿಲ್ಲ ಎಂದು ವಿಜಯ್. ಭೀಮಾ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ....

ಸ್ಯಾಂಡಲ್‌ವುಡ್‌ ಒಂಟಿ ಸಲಗ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ 'ಭೀಮಾ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಾಯಕ ಆಗಾಗ ದೊಡ್ಡ ಮನೆಯವರನ್ನು ನೆನಪಿಸಿಕೊಳ್ಳುತ್ತಾರೆ. ಸಲಗ ಸಿನಿಮಾ ಹಿಟ್ ನಂತರ ವಿಜಯ್ ಮೇಲೆ ಸಿನಿ ರಸಿಕರ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೆ ಈಗಾಗಲೆ ಪೋಸ್ಟ್‌, ಟ್ರೈಲರ್ ಮತ್ತು ಸಾಂಗ್‌ಗಳಯ ವೈರಲ್ ಆಗುತ್ತಿದೆ. ಮುಂದಿನ ತಿಂಗಳು ಬಾಕ್ಸ್‌ ಆಫೀಸ್ ಧೂಳ್ ಎಬ್ಬಿಸುವುದರಲ್ಲಿ ಅನುಮಾನವಿಲ್ಲ. 

ಇತ್ತೀಚಿಗೆ ರಾಮನಗರದಲ್ಲಿ ನಡೆದ ಚಾಮುಂಡೇಶ್ವರಿ ಉತ್ಸವದಲ್ಲಿ ದುನಿಯಾ ವಿಜಯ್ ತಮ್ಮ ಭೀಮಾ ಸಿನಿಮಾ ಪ್ರಚಾರ ಮಾಡಲು ಆಗಮಿಸಿದ್ದರು. ಈ ವೇಳೆ ದುನಿಯಾ ವಿಜಯ್ ಅವಕಾಶ ಕೊಟ್ಟ ಕ್ಷಣವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೆನೆದಿದ್ದಾರೆ. 'ನಾನು ಆರಂಭದಲ್ಲಿ ಬಂದಾಗ ನನಗೆ ಸಿನಿಮಾಗಳನ್ನು ಕೊಟ್ಟು ಕೈ ಹಿಡಿದು ಚಿತ್ರರಂಗದಲ್ಲಿ ನಾನು ಇಲ್ಲಿವೆಗೂ ಬಂದು ನಿಂತಿದ್ದೇನೆ ಅಂದರೆ ಬಹಳ ಮುಖ್ಯವಾದ ಕಾರಣ ದುನಿಯಾ ವಿಜಯ್ ಅಣ್ಣ' ಎಂದು ಅರ್ಜುನ್ ಜನ್ಯ ಮಾತನಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಸೆಲ್‌ 1 ಕಿಮೀ. ದೂರದಲ್ಲಿದೆ, ಬೇಕರಿ ಐಟಂ ಸಿಗುತ್ತೆ; ದರ್ಶನ್‌ VIP ಸೆಲ್‌ ಬಗ್ಗೆ ಸತ್ಯ ಬಿಚ್ಚಿಟ್ಟ ವ್ಯಕ್ತಿ

ತಕ್ಷಣವೇ ಪಕ್ಕದಲ್ಲಿದ್ದ ದುನಿಯಾ ವಿಜಯ್ 'ನಾನು ಅದನ್ನೆಲ್ಲ ಕಲಿತಿದ್ದು ಅಣ್ಣಾವ್ರ ಮನೆಯಿಂದ. ಪುನೀತ್ ರಾಜ್‌ಕುಮಾರ್ ಸರ್ ಕಡೆಯಿಂದ. ಹಾಗಾಗಿ ಇವತ್ತು ಆ ದುಃಖನೂ ಇದೆ. ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ ಅನ್ನುವ ಖುಷಿನೂ ಇದೆ. ನಾನೇನು ಮಾಡಿಲ್ಲ ಅವರು ಏನು ಮಾಡಿದ್ದಾರೋ ಅದರಲ್ಲಿ ಸಣ್ಣದನ್ನು ಮಾಡಿದ್ದೇವೆ ಅಷ್ಟೇ' ಎಂದಿದ್ದಾರೆ.