ಬಿಗ್ ಬಾಸ್ ಕನ್ನಡ ಸೀಸನ್ 5 ಶೋ ಖ್ಯಾತಿಯ ನಿವೇದಿತಾ ಗೌಡ, ಚಂದನ್ ಶೆಟ್ಟಿ ಅವರು ಮತ್ತೆ ಒಂದಾಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇನ್ನು ಈ ಜೋಡಿ ನಟನೆಯ ʼಮುದ್ದು ರಾಕ್ಷಸಿʼ ಸಿನಿಮಾ ಶೂಟಿಂಗ್ ಮುಗಿದಿದೆ. ಡಿವೋರ್ಸ್ ವಿಷಯವಾಗಿ ನಿವೇದಿತಾ, ಚಂದನ್ ಶೆಟ್ಟಿ ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ಪಡೆದು ಒಂಭತ್ತು ತಿಂಗಳುಗಳು ಕಳೆದಿವೆ. ಮತ್ತೆ ಈ ಜೋಡಿ ಒಂದಾಗಲಿದ್ಯಾ ಎಂಬ ಪ್ರಶ್ನೆ ಆಗಾಗ ಕೇಳಿಬರುವುದು. ಡಿವೋರ್ಸ್‌ಗೂ ಮುನ್ನವೇ ಈ ಜೋಡಿ ʼಮುದ್ದು ರಾಕ್ಷಸಿʼ ಎನ್ನುವ ಸಿನಿಮಾ ಒಪ್ಪಿಕೊಂಡಿತ್ತು. ಈಗ ಈ ಸಿನಿಮಾದ ಕೊನೆಯ ದಿನದ ಶೂಟಿಂಗ್ ಮುಗಿದಿದ್ದು, ಮಾಧ್ಯಮದ ಮುಂದೆ ಬಂದಿತ್ತು. ಆಗ ಈ ಜೋಡಿ ಡಿವೋರ್ಸ್ ವಿಚಾರವಾಗಿ ಮಾತನಾಡಿದೆ. ಮತ್ತೆ ಒಂದಾಗುವ ಸಾಧ್ಯತೆ ಇದ್ಯಾ ಎನ್ನುವ ಪ್ರಶ್ನೆಗೆ ನಿವೇದಿತಾ ಗೌಡ ಉತ್ತರ ನೀಡಿದ್ದಾರೆ.
ಚಂದನ್ ಶೆಟ್ಟಿ ಏನಂದ್ರು?
“ಡಿವೋರ್ಸ್ ತಗೊಳೋದು ಅಂದ್ರೆ ಒಂದು ಶಾಪ್‌ಗೆ ಹೋಗಿ ಬಟ್ಟೆ ತಗೊಂಡ ಹಾಗಲ್ಲ. ಇದು ನಮ್ಮ ಲೈಫ್. ಹೀಗಾಗಿ ಇಬ್ಬರೂ ತುಂಬ ತಿಂಗಳುಗಳ ಕಾಲ ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇವೆ. ನಿವೇದಿತಾಗೂ ಸಾಧನೆ ಮಾಡಬೇಕು ಅಂತಿದೆ, ನನಗೂ ಸಾಧನೆ ಮಾಡುವ ಮನಸ್ಸಿದೆ. ಒಟ್ಟಿಗೆ ಇದ್ದಾಗ ಅಡಚಣೆ ಆಗತ್ತೆ ಅಂತ ನಾವು ಬೇರೆ ಆದೆವು, ನಿವೇದಿತಾ ಜೀವನಲ್ಲಿ ಮುಂದೆ ಬಂದರೆ ಹೆಚ್ಚು ಖುಷಿಪಡೋದು ನಾವೇ” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ನಿವೇದಿತಾ ಗೌಡ, ಚಂದನ್ ಶೆಟ್ಟಿ ಮತ್ತೆ ಒಂದಾದ್ರಾ? ಕಣ್ಣೊರೆಸಿದ ಆ ವಿಡಿಯೋ ಅಸಲಿ ಸತ್ಯ ಏನು?
ನಿವೇದಿತಾ ಗೌಡ ಏನಂದ್ರು?
“ಎಮೋಶನಲ್ ಆಗಿದ್ದೇನೆ. ಚಂದನ್ ಶೆಟ್ಟಿ ಅವ್ರಿಂದ ಡಿವೋರ್ಸ್ ತಗೊಂಡು ದೂರ ಆದಾಗ ಎಮೋಶನಲ್ ಆಗಿದ್ದೆ, ಫೀಲಿಂಗ್ ಆಗಿತ್ತು. ಬೇರೆ ಜೋಡಿಗಳು ಪ್ರೀತಿ ಇದ್ದಿದ್ದಕ್ಕೆ ಮತ್ತೆ ಒಂದಾಗಿರಬಹುದು. ಆದರೆ ನಮ್ಮ ಮಧ್ಯೆ ಹೊಂದಾಣಿಕೆಯೇ ಇಲ್ಲ. ಹೀಗಾಗಿ ನಾವು ಒಂದಾಗೋದು ಚಾನ್ಸ್ ಇಲ್ಲ” ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ಒಂದು ಕಾಲಕ್ಕೆ ಕನ್ನಡ ಧಾರಾವಾಹಿಗಳಲ್ಲಿ ಸೀರೆಯುಟ್ಟು ಗೃಹಿಣಿ, ತಾಯಿ ಪಾತ್ರ ಮಾಡ್ತಿದ್ದ ನಟಿ ಇವರೇನಾ?
ಎಲ್ಲರೂ ನಂದೇ ತಪ್ಪು ಅಂತಾರೆ!
“ಡಿವೋರ್ಸ್ ಆದಾಗ ಅಥವಾ ಇನ್ನೇನೋ ಆದರೂ ಕೂಡ ನಮ್ಮ ಸಮಾಜದಲ್ಲಿ ಹುಡುಗಿಯದ್ದು ತಪ್ಪು ಅಂತ ಹೇಳುತ್ತಾರೆ. ನಮ್ಮ ಲೈಫ್‌ನಲ್ಲಿ ಏನೇನು ಸಮಸ್ಯೆಗಳು ಇರುತ್ತವೆ, ಅದನ್ನು ಎಲ್ಲರ ಮುಂದೆ ಹೇಳೋಕೆ ಆಗೋದಿಲ್ಲ, ಅದು ಎಲ್ಲರಿಗೂ ಗೊತ್ತಿಲ್ಲ. ಹೇಳೋ ಅವಶ್ಯಕತೆ ಇಲ್ಲ. ಡಿವೋರ್ಸ್ ಆದಾಗ ಅವರದ್ದೇ ತಪ್ಪಿರಬಹುದು, ಹಾಗೆ ಮಾಡಿದ್ರು, ಹೀಗೆ ಮಾಡಿದ್ರು ಅಂತ ಹೇಳ್ತಾರೆ. ಇದನ್ನು ಬದಲಾಯಿಸೋಕೆ ಆಗೋದಿಲ್ಲ. ಈ ರೀತಿ ಮಾತಾಡೋದು ತಪ್ಪು, ಮಾನವೀಯತೆ ಇಲ್ಲ ಅಂತ ಅನಿಸುತ್ತದೆ” ಎಂದು ನಿವೇದಿತಾ ಗೌಡ ಹೇಳಿದ್ದಾರೆ.
ಅನುಷಾಗೆ ರಿಂಗ್ ತೊಡಿಸಿದ ಭವ್ಯಾ ಗೌಡ ! ಇದು ಪ್ರೀ ವೆಡ್ಡಿಂಗ್ ಫೋಟೋಶೂಟಾ?
ಕಾಮೆಂಟ್ಸ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ!
“ಬೇರೆಯವರು ನನ್ನ ಬಗ್ಗೆ ಹೇಗೆ ಯೋಚನೆ ಮಾಡ್ತಾರೆ ಅಂತ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಯೋಚಿಸೋದು ಅವರ ಪ್ರಾಬ್ಲಮ್, ನನ್ನ ಪ್ರಾಬ್ಲಮ್ ಅಲ್ಲ. ನಾನು ನನ್ನ ಕೆಲಸದ ಕಡೆಗೆ ಗಮನ ಕೊಡ್ತೀನಿ. ನೆಗೆಟಿವ್ ಕಾಮೆಂಟ್ಸ್ ಏನೇನು ಬರತ್ತೆ ಅಂತ ನನಗೆ ಗೊತ್ತೂ ಇಲ್ಲ. ನೆಗೆಟಿವ್ ಕಾಮೆಂಟ್ಸ್ ನೋಡೋರನ್ನು ಜನರು ನೋಡಿಕೊಳ್ತಾರೆ, ಲೈವ್ ಆಗಿ ಬಂದು ಪ್ರೀತಿಯಿಂದ ಮಾತಾಡೋರು ತುಂಬ ಜನ ಇರ್ತಾರೆ. ಮಹಿಳೆಯರು ದುಡಿಯಬೇಕು, ಸ್ವತಂತ್ರವಾಗಿರಬೇಕು. ಆಗ ಯಾರು ಏನೇ ಅಂದ್ರೂ ತಲೆಕೆಡಿಸಿಕೊಳ್ಳುವ ಪ್ರಮೇಯವೇ ಬರೋದಿಲ್ಲ” ಎಂದು ನಿವೇದಿತಾ ಗೌಡ ಹೇಳಿದ್ದಾರೆ.
