Bigg Boss Niveditha Gowda And Chandan Shetty News: ʼಬಿಗ್‌ ಬಾಸ್ʼ‌ ಖ್ಯಾತಿಯ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಡಿವೋರ್ಸ್‌ ಪಡೆದಿದ್ದಾರೆ. ಈಗ ನಿವೇದಿತಾ ಗೌಡ ಅವರು ಚಂದನ್‌ ಶೆಟ್ಟಿಯನ್ನು ನೋಡಿ ಕಣ್ಣೀರು ಹಾಕ್ತಿರೋ ವಿಡಿಯೋ ಭಾರಿ ವೈರಲ್‌ ಆಗ್ತಿದೆ. ಈ ಬಗ್ಗೆ ಈ ಜೋಡಿ ಸ್ಪಷ್ಟನೆ ನೀಡಿದೆ. 

ಬಿಗ್‌ ಬಾಸ್‌ ಮನೆಯಲ್ಲಿ ಪ್ರೀತಿಸಿ, ಮದುವೆಯಾಗಿದ್ದ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಅವರು ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಹೊಂದಾಣಿಕೆ ಸಮಸ್ಯೆ ಎಂದು ಈ ಜೋಡಿ ಡಿವೋರ್ಸ್‌ ಪಡೆದಿತ್ತು. ಈಗ ಇವರಿಬ್ಬರು ದಿಢೀರ್‌ ಸುದ್ದಿಗೋಷ್ಠಿ ಕರೆದು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. 

ಚಂದನ್‌ ಶೆಟ್ಟಿ ಏನಂದ್ರು? 
“ಮನುಷ್ಯ ಅಂದಕೂಡಲೇ ಎಮೋಶನ್ಸ್‌ ಇರುತ್ತದೆ. ಹಾಗೆಯೇ ನಮಗೂ ನಾಲ್ಕು ವರ್ಷ ಜೊತೆಗಿದ್ದೆವು. ಈಗ ದೂರ ಆಗಿದ್ದೇವೆ. ನಿನ್ನೆ ರಾತ್ರಿಯಿಂದಲೇ ನಾನು ನನ್ನ ಮನಸ್ಸು ಗಟ್ಟಿಮಾಡಿಕೊಳ್ಳೋಣ ಅಂದುಕೊಂಡಿದ್ದೆ. ನಿಜಕ್ಕೂ ನಮಗೆ ಇದು ಎಮೋಶನಲ್‌ ಆಗಿರುತ್ತದೆ. ಪರ್ಸನಲ್‌, ಪ್ರೊಫೆಶನಲ್‌ ಎರಡನ್ನೂ ಒಟ್ಟಿಗೆ ತರೋದು ಒಳ್ಳೆಯದಲ್ಲ. ಆದರೆ ಇಬ್ಬರೂ ಕರಿಯರ್‌ನಲ್ಲಿ ಮುಂದುವರೆಯಲೇಬೇಕು. ಸಿನಿಮಾ ಕೆಲಸ ಆಗಿದ್ದರಿಂದ ಇಬ್ಬರೂ ಪ್ರೊಫೆಶನಲ್‌ ಆಗಿಯೇ ಇರ್ತೀವಿ. ಈ ಸಿನಿಮಾಕ್ಕೆ ನಾನು ಸಂಗೀತ ಸಂಯೋಜನೆ ಮಾಡಿಲ್ಲ. ಈ ಸಿನಿಮಾದಲ್ಲಿ ನಿವೇದಿತಾ ದೃಶ್ಯ ಜಾಸ್ತಿ ಇದೆ. ಅವರಿಗೆ ಬಾಯ್‌ಫ್ರೆಂಡ್‌ ಆಗಿ ಸಪೋರ್ಟ್‌ ಮಾಡಿರೋ ಪಾತ್ರದಲ್ಲಿ ನಾನು ನಟಿಸಿದ್ದೇನೆ” ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಬಾರ್‌ನಲ್ಲಿ ಬ್ಯೂಟಿಯಾದ ನಿವೇದಿತಾ, ಈಕೆಯ ಅಂದಕ್ಕೆ ಸಾಟಿ ಉಂಟಾ?

ಚಂದನ್‌ ಶೆಟ್ಟಿ ನೋಡಿ ನಿವೇದಿತಾ ಗೌಡ ಕಣ್ಣೀರು! 
ಚಂದನ್‌ ಶೆಟ್ಟಿ ಅವರನ್ನು ನೋಡಿ ನಿವೇದಿತಾ ಗೌಡ ಅವರು ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದನ್ನು ನೋಡಿ ಎಲ್ಲರೂ ಇವರಿಬ್ಬರು ಮತ್ತೆ ಒಂದಾದ್ರಾ ಅಂತ ಪ್ರಶ್ನೆ ಬಂದಿತ್ತು. ಅದಕ್ಕೆ ಉತ್ತರ ಕೊಟ್ಟ ನಿವೇದಿತಾ ಗೌಡ, “ನಾಲ್ಕು ವರ್ಷ ನಾವು ಒಂದು ಬಾಂಧವ್ಯ ಹೊಂದಿದ್ದೇವೆ. ನಿಜಕ್ಕೂ ಇದು ಎಮೋಶನಲ್‌ ಆಗಿತ್ತು. ಯಾವುದೇ ಪ್ರಾಜೆಕ್ಟ್‌ ಇದ್ದರೂ ಕೂಡ ಅದು ಮುಗಿಯುವಾಗ ಬೇಸರ ಆಗುತ್ತದೆ. ಹಾಗೆಯೇ ಈ ಸಿನಿಮಾ ಶೂಟಿಂಗ್‌ ಮುಗಿಯುತ್ತಿದೆ, ಹಾಗಾಗಿ ಅಳು ಬಂತು. ಈ ಸಿನಿಮಾ ಕಥೆ ತುಂಬ ಚೆನ್ನಾಗಿದೆ” ಎಂದು ಹೇಳಿದ್ದರು. 

ಗೊಂಬೆ ಜೊತೆ ಮದ್ವೆಯಾದ ಮಹಿಳೆ ಈಗ ಎರಡು ಮಕ್ಕಳ ತಾಯಿ! ವಿಚಿತ್ರ ಎನಿಸಿರೋ ಈ ಸ್ಟೋರಿ ಕೇಳಿ....

ನಿರ್ದೇಶಕರು ಏನಂದ್ರು?
ನಿರ್ದೇಶಕರು ಈ ಬಗ್ಗೆ ಮಾತನಾಡಿದ್ದು, “ಈ ಹಿಂದೆ ಒಂದು ದೃಶ್ಯದಲ್ಲಿ ಹಗ್‌ ಮಾಡಿ, ನಿವೇದಿತಾ ಗೌಡ ಅವರು ಇಪ್ಪತ್ತು ನಿಮಿಷ ಅತ್ತಿದ್ದಾರೆ. ಆಮೇಲೆ ಸಮಾಧಾನ ಮಾಡಿದ್ದೇವೆ. ಚಂದನ್-ನಿವೇದಿತಾ ಗೌಡ ಅವರ ಜೀವನದಲ್ಲಿ ನಡೆದ ದೃಶ್ಯಗಳು ಸಿನಿಮಾದಲ್ಲಿ ಲಿಂಕ್‌ ಆಗುತ್ತವೆ. ಹೀಗಾಗಿ ಅವರೇನು ಅಂತ ನನಗೆ ಗೊತ್ತಿದೆ. ನಿವೇದಿತಾ ಗೌಡ ಅವರು ಫೈಟ್‌ ಸೀನ್‌ ಮತ್ತೆ ಕೊಡಿ ಎಂದು ಹೇಳಿದ್ದರು. ಈ ರೀತಿ ಕಲಾವಿದರು ಸಿಕ್ಕರೆ ನಿರ್ದೇಶಕರು ಮತ್ತೆ ಏನು ಬೇಕಿದ್ರೂ ಮಾಡಬಹುದು” ಎಂದು ಹೇಳಿದ್ದಾರೆ.

View post on Instagram