ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಅನುಷಾಗೆ ನಟಿ ಭವ್ಯ ಗೌಡ ಉಂಗುರ ಹಾಕಿದ ವೈರಲ್ ಆಗಿದೆ. ಇದು ಪ್ರಿ ವೆಡ್ಡಿಂಗ್ ಶೂಟ್ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ರಂಜಿತ್ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು. ಅಲ್ಲಿಯೇ ಈ ಫನ್ ವಿಡಿಯೋ ಶೂಟ್ ಮಾಡಿದ್ದಾರೆ.
ಈಗ ಹುಡುಗಿಯರು ರಿಂಗ್ (Ring) ಬದಲಿಸಿಕೊಂಡು ಮದುವೆ ಆಗೋದು ಹೊಸ ವಿಷ್ಯ ಏನಲ್ಲ ಬಿಡಿ. ಅದೆಷ್ಟೋ ಹುಡುಗಿಯರು ಹುಡುಗಿಯರನ್ನೇ ತಮ್ಮ ಲೈಫ್ ಪಾರ್ಟನರ್ ಆಗಿ ಆಯ್ಕೆ ಮಾಡ್ಕೊಳ್ತಿದ್ದಾರೆ. ಈಗ ಅದ್ಯಾಕೆ ಹೇಳ್ತಿದ್ದೇವೆ ಅಂದ್ರೆ, ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ರ ಸ್ಪರ್ಧಿ ಅನುಷಾಗೆ, ಭವ್ಯ ಗೌಡ (Bhavya Gowda) ರಿಂಗ್ ಹಾಕಿದ್ದಾರೆ. ತಮ್ಮ ಕೈನಲ್ಲಿದ್ದ ರಿಂಗ್ ತೆಗೆದು, ದುಬಾರಿ ಬೆಲೆಯ ಡೈಮಂಡ್ ರಿಂಗ್ ಎನ್ನುತ್ತ ಅನುಷಾ (Anusha) ಕೈಗೆ ಹಾಕಿದ್ದಾರೆ. ಅವ್ರ ಈ ವಿಡಿಯೋವನ್ನು ಮಿಸ್ಟರ್ ಡಿ ಪಿಕ್ಚರ್ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದೆ.
ಭವ್ಯ ಗೌಡ ಹಾಗೂ ಅನುಷಾ ಸೀರೆಯುಟ್ಟಿದ್ದು, ಒಂದು ಜೋಕಾಲಿ ಮೇಲೆ ಕುಳಿತಿದ್ದಾರೆ. ಕ್ಯಾಮರಾ ಹತ್ತಿರ ಬರ್ತಿದ್ದಂತೆ ಇದು ನಮ್ಮ ಪ್ರಿ ವೆಡ್ಡಿಂಗ್ ಶೂಟ್ ಅಂತ ಭವ್ಯ ಗೌಡ ಹೇಳ್ತಾರೆ. ಆ ನಂತ್ರ ಅನುಷಾ ಬೆರಳಿಗೆ ತಮ್ಮ ಬೆರಳಿನಲ್ಲಿದ್ದ ಉಂಗುರವನ್ನು ಹಾಕ್ತಾರೆ. ಅನುಷಾ ಮಧ್ಯದ ಬೆರಳಿಗೆ ಉಂಗುರ ಹಾಕಿ, ಡಿಫರೆಂಟ್ ಸ್ಟೈಲ್ ನಲ್ಲಿ ಉಂಗುರು ಹಾಕ್ತಿದ್ದೇನೆ ಅಂತ ಭವ್ಯ ನಗ್ತಾರೆ.
ನೀ ಗುಲಾಬಿಯೊಳಗೋ, ನಿನ್ನೊಳು ಗುಲಾಬಿಯೋ- ಬಿಗ್ ಬಾಸ್ ನಿವೇದಿತಾ ಗೌಡ ಈಗಿನ ವಯಸ್ಸೆಷ್ಟು?
ಭವ್ಯ ಹಾಗೂ ಅನುಷಾ ಮಾಡಿದ್ದು ತಮಾಷೆಗೆ ಅನ್ನೋದನ್ನು ನಾವು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಇವರ ವಿಡಿಯೋ ಫ್ಯಾನ್ಸ್ಗೆ ಇಷ್ಟವಾಗಿದೆ. ಪ್ರೀ ವೆಡ್ಡಿಂಗ್ ಶೂಟಾ ಅಂತ ಅನೇಕರು ಅಚ್ಚರಿಯಿಂದ ಕೇಳಿದ್ದಾರೆ. ಅನುಷಾ ಹಾಗೂ ಭವ್ಯ ಗೌಡ, ಬಿಗ್ ಬಾಸ್ ಸ್ಪರ್ಧಿ ರಂಜಿತ್ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅವರು ರೀಲ್ಸ್ ಕೂಡ ಮಾಡಿದ್ದಾರೆ. ಭವ್ಯ ತಮ್ಮ ಇನ್ಸ್ಟಾ ಖಾತೆಯಲ್ಲಿ ರೀಲ್ಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯೂಟಿ ಜೊತೆ ಕ್ವಿಕ್ ರೀಲ್ಸ್ ಅಂತ ಶೀರ್ಷಿಕೆ ಹಾಕಿದ್ದಾರೆ. ಉದಿತ್ ನಾರಾಯಣ್ ಹಾಡಿರುವ ಓ ಆಜಾರೆ ಹಾಡಿಗೆ ಅನುಷಾ ಹಾಗೂ ಭವ್ಯ ಗೌಡ ಡಾನ್ಸ್ ಮಾಡಿದ್ದಾರೆ. ಇಬ್ಬರು ಸೀರೆಯಲ್ಲಿ ಮಿಂಚಿದ್ದು, ಫ್ಯಾನ್ಸ್, ದೃಷ್ಟಿ ತಾಗದಿರಲಿ, ಡಾನ್ಸ್ ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ.
ನಿನ್ನೆ ಬಿಗ್ ಬಾಸ್ ಸ್ಪರ್ಧಿ ರಂಜಿತ್ ಎಂಗೇಜ್ಮೆಂಟ್ ನಡೆದಿದೆ. ರಂಜಿತ್ ತಾವು ಪ್ರೀತಿಸಿದ್ದ ಹುಡುಗಿ ಮಾನಸಾರನ್ನು ಶೀಘ್ರವೇ ಮದುವೆ ಆಗಲಿದ್ದಾರೆ. ಉಂಗುರ ಬದಲಿಸುವ ಕಾರ್ಯಕ್ರಮದಲ್ಲಿ ಬಿಗ್ ಬಾಸ್ 11ರ ಸ್ಪರ್ಧಿಗಳು ಮಿಂಚಿದ್ದಾರೆ. ಶಿಶಿರ್, ಭವ್ಯ ಗೌಡ, ಅನುಷಾ, ಮೋಕ್ಷಿತಾ ಪೈ, ಐಶ್ವರ್ಯ ಸಿಂಧೋಗಿ ರಂಜಿತ್ ಎಂಗೇಜ್ಮೆಂಟ್ ಗೆ ಆಗಮಿಸಿದ್ದರು. ಅವ್ರ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
ಈಗ ಹಣದ ಹಿಂದೆ ಓಡುತ್ತಿಲ್ಲ, ಪ್ರೀತಿ ಹುಡುಕುತ್ತಿಲ್ಲ ಮದುವೆ ಯೋಚನೆ ಇಲ್ವೇ ಇಲ್ಲ: ನಮ್ರತಾ ಗೌಡ
ಇನ್ನು ಬಿಗ್ ಬಾಸ್ ಸ್ಪರ್ಧಿ ಭವ್ಯ ಗೌಡ ಬಗ್ಗೆ ಹೇಳೋದಾದ್ರೆ ಅವ್ರು ಸದ್ಯ ಶೋಗಳಲ್ಲಿ ಬ್ಯುಸಿಯಿದ್ದಾರೆ. ಹಂಪಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಭವ್ಯ, ಅಲ್ಲಿನ ಸುಂದರ ಪರಿಸದಲ್ಲಿ ಬೋಟಿಂಗ್ ಮಾಡಿದ್ದ ವಿಡಿಯೋ ಹಂಚಿಕೊಂಡಿದ್ದಾರೆ. ಯಾವುದೇ ಸಿನಿಮಾ ಅಥವಾ ಸಿರಿಯಲ್ ಗೆ ಭವ್ಯ ಸಹಿ ಹಾಕಿದಂತೆ ಕಾಣ್ತಿಲ್ಲ. ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಭವ್ಯ ಕಾಣಿಸಿಕೊಳ್ಳಬೇಕಾಗಿತ್ತು. ಆದ್ರೆ ಮೈ ಹುಷಾರಿಲ್ಲದ ಕಾರಣ ಛಾನ್ಸ್ ಕೈತಪ್ಪಿದೆ. ಒಳ್ಳೆ ಛಾನ್ಸ್ ಗೆ ಭವ್ಯ ಕಾಯ್ತಿದ್ದು, ಭವ್ಯ ಹಾಗೂ ತ್ರಿವಿಕ್ರಮ್ ಒಟ್ಟಿಗೆ ನಟಿಸುವಂತೆ ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ. ಇತ್ತ ಅನುಷಾ ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಬ್ಯುಸಿಯಾಗಿದ್ದಾರೆ. ಕುಂಭ ಮೇಳಕ್ಕೆ ಹೋಗಿ ಬಂದಿರುವ ಅನುಷಾ, ಮಂಡ್ಯದ ಕೆರಗೋಡಿನಲ್ಲಿ ನಡೆದ ಪಂಚಲಿಂಗೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ಯಾಂಡಲ್ವುಡ್ ಸ್ಟಾರ್ ಧ್ರುವ ಸರ್ಜಾ ಜೊತೆ ವೇದಿಕೆ ಹಂಚಿಕೊಂಡಿದ್ದರು.
