ಬಿಗ್‌ಬಾಸ್‌ನಲ್ಲಿ ಚೈತ್ರಾ ಮತ್ತು ಜಗದೀಶ್ ನಡುವೆ ನಿರಂತರ ಜಗಳ, ವಾಗ್ವಾದಗಳು ಸಾಮಾನ್ಯವಾಗಿದ್ದವು. ಜಗದೀಶ್ ಅವರ ಅಸಭ್ಯ ವರ್ತನೆ ಮತ್ತು ಚೈತ್ರಾ ಅವರ "ರೋಲ್‌ಕಾಲ್ ಲಾಯರ್" ಕಾಮೆಂಟ್‌ಗಳು ಚರ್ಚೆಗೆ ಕಾರಣವಾಗಿದ್ದವು. ಚೈತ್ರಾ ಜಗದೀಶ್‌ರ ಹಿಂದಿನ ವಿವಾದಗಳನ್ನು ಉಲ್ಲೇಖಿಸಿ, ಬಿಗ್‌ಬಾಸ್‌ನಲ್ಲಿ ಅವರ ದುರ್ವರ್ತನೆಯನ್ನು ಟೀಕಿಸಿದ್ದಾರೆ. ಚೈತ್ರಾ ಬಿಗ್‌ಬಾಸ್‌ನಿಂದ ಹೊರಬಂದ ನಂತರ ಹಲವು ಬಹಿರಂಗಪಡಿಸುವಿಕೆಗಳನ್ನು ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 11ರಲ್ಲಿ ಅತಿ ಹೆಚ್ಚು ಜಗಳ ಮಾಡುತ್ತಿದ್ದ, ಅತಿ ಹೆಚ್ಚು ಮಾತನಾಡುತ್ತಿದ್ದ, ಅತಿ ಹೆಚ್ಚು ಕಿರಿಕಿರಿ ಮಾಡುತ್ತಿದ್ದ ಸ್ಪರ್ಧಿಗಳು ಅಂದ್ರೆ ಚೈತ್ರಾ ಕುಂದಾಪುರ ಮತ್ತು ಲಾಯರ್ ಜಗದೀಶ್. ಒಮ್ಮೆ ಲಾಯರ್ ಜಗದೀಶ್ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರಯ ಎಂದು ಇಡೀ ಮನೆ ಜಗಳಕ್ಕೆ ನಿಂತಿದ್ದರು. ಅಲ್ಲದೆ ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಮಾತನಾಡು ಎಂದು ಚೈತ್ರಾ ಕೂಡ ವಾರ್ನಿಂಗ್ ಕೊಡುತ್ತಿದ್ದರು. ಜಗದೀಶ್ ಮತ್ತು ಚೈತ್ರಾ ನಡುವೆ ಆಗಾಗ ಜಗಳು ಆಗುತ್ತಿತ್ತು ಅಲ್ಲದೆ ಇಬ್ಬರ ಮಾತು ಮೀರಿ ವಾದ ಮಾಡುತ್ತಿದ್ದರು. ಆಗ ಪದೇ ಪದೇ ರೋಲ್ ಕಾಲ್ ಲಾಯರ್ ಎಂದು ಚೈತ್ರ ಕಾಮೆಂಟ್ ಮಾಡುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರವಿದು.
'ಈ ಹಿಂದೆ ರಾಜ್ಯದಲ್ಲಿ ಪ್ರಕರಣವೊಂದು ನಡೆದಾಗ ಜಗದೀಶ್ ಸರ್ ಅವರ ಇಂಟರ್‌ವ್ಯೂಗಳನ್ನು ನಾನು ಟಿವಿಯಲ್ಲಿ ಹಲವು ಸಲ ನೋಡಿದ್ದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗಳನ್ನು ನೋಡುತ್ತಿದ್ದೆ. ಪತ್ರಕರ್ತೆಯೂ ಆಗಿರುವುದರಿಂದ ಸಹಜವಾಗಿ ಅಪ್‌ಡೇಟ್ ತಿಳಿದುಕೊಂಡಿದ್ದೆ. ಆದರೆ ಅವರು ಬಿಗ್ ಬಾಸ್‌ಗೆ ಬರ್ತಾರೆ ಅನ್ನೋದು ಗೊತ್ತಿರಲಿಲ್ಲ. ಅವರ ಪರಿಚಯವೂ ನನಗೆ ಇರಲಿಲ್ಲ. 24 ಗಂಟೆ ಜಗದೀಶ್ ಸರ್ ಕೊಟ್ಟ ಕಿರುಕು ಇದ್ಯಲ್ಲ....ಕೆಟ್ಟದಾಗಿ ಜಗಳ ಮಾಡುತ್ತಿದ್ದರು ಕೆಟ್ಟದಾಗಿ ಬೈಯುತ್ತಿದ್ದರು ಕೆಟ್ಟ ಪದಗ ಬಳಕೆ ಮಾಡುತ್ತಿದ್ದರು. ಬೆಳಗ್ಗೆದ್ದರೆ ಸಾರಿ ಕೇಳುತ್ತಿದ್ದರು. ಅದನ್ನೆಲ್ಲಾ 1.5 ಗಂಟೆಯಲ್ಲಿ ಹೇಗೆ ತೋರಿಸಿದ್ದಾರೆ ಅಂತ ನನಗೆ ಏನೂ ಗೊತ್ತಿಲ್ಲ. ಜಗದೀಶ್ ಸರ್ ಆಡಿದ ಮಾತುಗಳ ಬಗ್ಗೆ ಸುದೀಪ್ ಸರ್ ಹೇಳಿಲ್ಲ ಅನ್ನೋದು ನನಗೆ ಬೇಸರವಾಗಿತ್ತು. ಆದರೆ ಜಗದೀಶ್ ಅವರನ್ನು ಸುದೀಪ್ ಸರ್ ಗಣನೆಗೆ ತೆಗೆದುಕೊಂಡಿರಲಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚೈತ್ರಾ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಪೊಲೀಸರು ಬಂದಿದ್ದು ನಿಜ; ಸತ್ಯ ಬಿಚ್ಚಿಟ್ಟ ಚೈತ್ರಾ ಕುಂದಾಪುರ
ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ಚೈತ್ರಾ ಕುಂದಾಪುರ ಹಾವಳಿ ಹೆಚ್ಚಾಯ್ತು. ಮನೆಯಲ್ಲಿ ಇತರ ಸ್ಪರ್ಧಿಗಳ ಜೊತೆ ಚೈತ್ರಾ ಜಗಳ ಮಾಡುತ್ತಿದ್ದರು. ಫಿನಾಲೆಗೆ 11 ದಿನಗಳು ಇರುವಾಗ ಚೈತ್ರಾ ಎಲಿಮಿನೇಟ್ ಆಗಿ ಹೊರ ಬರುತ್ತಾರೆ. ಚೈತ್ರಾ ಹೊರ ಬಂದ ಮೇಲೆ ಈಗ ಬಿಗ್ ಬಾಸ್ ಮನೆ ಸೈಲೆಂಟ್ ಆಗಿದೆ. ಈಗ ಚೈತ್ರಾ ಹೊರಗಡೆ ಸಖತ್ ಸುದ್ದಿ ಮಾಡುತ್ತಿದ್ದಾರೆ. ಇದುವರೆಗೂ ಯಾರೂ ರಿವೀಲ್ ಮಾಡಿರದ ವಿಚಾರಗಳನ್ನು ಸಂದರ್ಶನದಲ್ಲಿ ಹೇಳುತ್ತಿದ್ದರು. ಈಗಾಗಲೆ ಮದುವೆ, ಲಾಯರ್ ಜಗದೀಶ್, ಅನಾರೋಗ್ಯ ಮತ್ತು ಪೊಲೀಸರ ಎಂಟ್ರಿ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯದ ಕಾರಣ ಈ ವೀಕೆಂಡ್ ಎಬಲ್ ಎಲಿಮಿನೇಷನ್ ಇರಲಿದೆ.
ಗೌತಮಿ ಮಾತ್ರ ಹುಡುಗಿ ಅಂತ ಗೌರವಿಸಬೇಕಾ ಯಾಕೆ ನಾನು- ಮೋಕ್ಷಿತಾ ಕಣ್ಣಿಗೆ ಕಾಣಿಸಲ್ವಾ; ಉಗ್ರಂ ಮಂಜುಗೆ ಭವ್ಯಾ ತಿರುಗೇಟು
