ಬಿಗ್‌ಬಾಸ್‌ನ 'ಸ್ವರ್ಗ-ನರಕ' ವಿಭಜನೆಯಿಂದ ಮಹಿಳೆಯರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ದೂರು ನೀಡಿತ್ತು. ಪೊಲೀಸರು ಬಂದು ಹೇಳಿಕೆ ಪಡೆದಿದ್ದರೆಂದು ಚೈತ್ರಾ ರಿವೀಲ್ ಮಾಡಿದ್ದಾರೆ. ಈ ಘಟನೆಯನ್ನು ಕಾರ್ಯಕ್ರಮದಲ್ಲಿ ತೋರಿಸದಿರುವುದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ನಂತರ ನರಕ ಮನೆಯನ್ನು ತೆಗೆದು ಎಲ್ಲರನ್ನೂ ಒಂದೇ ಮನೆಯಲ್ಲಿರಿಸಲಾಯಿತು.
ಬಿಗ್ ಬಾಸ್ ಸೀಸನ್ 11 ಸಿಕ್ಕಾಪಟ್ಟೆ ಸ್ಪೆಷಲ್ ಮಾಡಬೇಕು ಎಂದು ನರಕ ಹಾಗೂ ಸ್ವರ್ಗ ಎಂತ ಮನೆಯನ್ನು ಎರಡು ಭಾಗ ಮಾಡಲಾಗುತ್ತದೆ. ಸೀಸನ್ ಓಪನಿಂಗ್ ದಿನವೇ ಕೆಲವರು ಸ್ವರ್ಗಕ್ಕೆ ಕೆಲವರು ನರಕಕ್ಕೆ ಹೋಗುತ್ತಾರೆ. ಸ್ವರ್ಗದಲ್ಲಿ ಇದ್ದವರು ಸಿಕ್ಕಾಪಟ್ಟೆ ಜಾಲಿಯಾಗಿದ್ದು ಎಲ್ಲಾ ರೀತಿಯ ಸೌಕರ್ಯಗಳನ್ನು ಬಳಸುತ್ತಿದ್ದರು ಆದರೆ ನರಕವಾಸಿಗಳು ಕಡು ಬಡವರ ರೀತಿ ಬದುಕಬೇಕಿತ್ತು ಅಲ್ಲದೆ ಹೆಣ್ಣುಮಕ್ಕಳಿಗೆ ಸರಿಯಾಗಿ ಬಾತ್‌ರೂಮ್ ಕೂಡ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದರು. ವಿಚಾರ ದೊಡ್ಡದಾಗುತ್ತಿದ್ದಂತೆ ಮಹಿಳಾ ಆಯೋಗದವರು ದೂರು ನೀಡಿ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ಪೊಲೀಸರು ಬಂದಿದ್ದರು ಎಂದು ಚೈತ್ರಾ ರಿವೀಲ್ ಮಾಡಿದ್ದಾರೆ.
'ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ನಾನು ನರಕ ವಾಸಿ ಆಗಿದ್ದಾಗ ಪೊಲೀಸ್ ಡಿಪಾರ್ಟ್ಮೆಂಟ್ ನವರು ಬಂದಿದ್ದರು. ಮಹಿಳಾ ಆಯೋಗ ನೋಟೀಸ್ ಕೊಟ್ಟಾಗ ನಮ್ಮ ಕಡೆಯಿಂದ ಹೇಳಿಕೆ ಪಡೆಯಲು ಪೊಲೀಸ್ ಅಧೀಕಾರಿಗಳು ಬಂದಿದ್ದರು. ಶೌಚಾಲಯ ವಿಷಯವಾಗಿ ಮಾತ್ರ ನಾವು ಉತ್ತರ ಕೊಟ್ಟು ಬಂದಿದ್ದು. ಜಗದೀಶ್ ಸರ್ ಹೇಳಿರುವ ರೀತಿ ನಾನು ಅವರ ಬಗ್ಗೆ ಮಾತನಾಡಿಲ್ಲ. ಅಲ್ಲಿ ಅವರ ವಿಚಾರ ಕೂಡ ಬಂದಿಲ್ಲ. ಇದುವರೆಗೂ ನಾನು ಜಗದೀಶ್‌ರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ' ಎಂದು ಖಾಸಗಿ ವೆಬ್ ಸಂದರ್ಶನದಲ್ಲಿ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ.
ಗೌತಮಿ ಮಾತ್ರ ಹುಡುಗಿ ಅಂತ ಗೌರವಿಸಬೇಕಾ ಯಾಕೆ ನಾನು- ಮೋಕ್ಷಿತಾ ಕಣ್ಣಿಗೆ ಕಾಣಿಸಲ್ವಾ; ಉಗ್ರಂ ಮಂಜುಗೆ ಭವ್ಯಾ ತಿರುಗೇಟು
ಬಿಗ್ ಬಾಸ್ ಮನೆಯನ್ನು ಎರಡು ಭಾಗ ಮಾಡಿರುವುದಕ್ಕೆ ಅಲ್ಲದೆ ಹೆಣ್ಣು ಮಕ್ಕಳಿಗೆ ಸಮಸ್ಯೆ ಆಗುತ್ತಿದೆ ಎಂದು ದೂರು ಬಂದಿರುವ ಕಾರಣ ಈ ಕಾನ್ಸೆಪ್ಟ್‌ನ ಬಿಟ್ಟು ಎಲ್ಲರೂ ಒಂದೇ ಮನೆಯಲ್ಲಿ ಒಟ್ಟಿಗೆ ಇರಲಿದ್ದೀರಿ ಎಂದು ಬಿಗ್ ಬಾಸ್ ಹೇಳುತ್ತಾರೆ. ನರಕವಾಸಿಗಳ ಮನೆಯನ್ನು ತೆಗೆಯುವುದು ನೋಡಬಹುದು ಆದರೆ ಯಾಕೆ ಏನೂ ಎಂಬುದರ ಬಗ್ಗೆ ಹೆಚ್ಚಿಗೆ ಮಾಹಿತಿ ಇರಲಿಲ್ಲ. ಅಲ್ಲದೆ ಬಿಗ್ ಬಾಸ್ ಮನೆಗೆ ಪೊಲೀಸರು ಬಂದು ಹೇಳಿಕೆ ಪಡೆದಿದ್ದಾರೆ ಎಂದು ಕೂಡ ತೋರಿಸಿಲ್ಲ. ಇದುವರೆಗೂ ಎಲಿಮಿನೇಟ್ ಆಗಿ ಹೊರ ಬಂದಿರುವ ಸ್ಪರ್ಧಿಗಳು ಈ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಚೈತ್ರಾ ಕುಂದಾಪುರ ಮಾತುಗಳನ್ನು ಕೇಳಿ ವೀಕ್ಷಕರು ಶಾಕ್ ಆಗಿದ್ದಾರೆ. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಏನೇ ಆದರೂ ತೋರಿಸುವುದಾಗಿ ಹೇಳುತ್ತಾರೆ ಯಾಕೆ ಇದನ್ನು ತೋರಿಸಿಲ್ಲ ಎಂದು ವಾದಿಸಲು ಶುರು ಮಾಡಿದ್ದಾರೆ.
ಟಾಸ್ಕ್ ಕೊಡುವ ಬಿಗ್ ಬಾಸ್ ತಂಡಕ್ಕೆ ಬುದ್ಧಿ ಇಲ್ವಾ?; ಧನರಾಜ್ ತಪ್ಪೇ ಮಾಡಿಲ್ಲ
