ಬಿಗ್‌ಬಾಸ್‌ನಲ್ಲಿ ಮಿಡ್‌ವೀಕ್ ಎಲಿಮಿನೇಷನ್ ರದ್ದಾಗಿ, ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಉಗ್ರಂ ಮಂಜು, ಭವ್ಯಾ ಗೌಡರನ್ನು ನಾಮಿನೇಟ್ ಮಾಡಿ, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭವ್ಯಾ ತಪ್ಪು ಮಾಡಿದ್ದಾರೆ ಮತ್ತು ಹನುಮಂತು ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಿದರು. ಭವ್ಯಾ ತಕ್ಷಣ ತಿರುಗೇಟು ನೀಡಿ, ತಾನು ಮಾತನಾಡುವುದಕ್ಕೆ ಬಂದಿದ್ದೇನೆ, ಕೇಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳಿ ಎಂದರು.
ಬಿಗ್ ಬಾಸ್ ಸೀಸನ್ 11ರ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಧನರಾಜ್ ಮಾಡಿದ ತಪ್ಪಿದೆ ಮತ್ತೊಮ್ಮೆ ಯಾರೂ ಎಲಿಮಿನೇಟ್ ಆಗದೇ ಮತ್ತೊಮ್ಮೆ ನಾಮಿನೇಟ್ ಪ್ರಕ್ರಿಯೆ ನಡೆಯಿತ್ತು. ಈ ವೇಳೆ ಪ್ರತಿಯೊಬ್ಬ ಸ್ಪರ್ಧಿಯೂ ಮೂವರನ್ನು ನಾಮಿನೇಟ್ ಮಾಡಬಹುದು. ಈ ವೇಳೆ ಉಗ್ರಂ ಮಂಜು ಭವ್ಯಾ ಗೌಡ, ಗೌತಮಿ ಜಾದವ್ ಹಾಗೂ ರಜತ್‌ರನ್ನು ನಾಮಿನೇಟ್ ಮಾಡುತ್ತಾರೆ. ಆಗ ಮಂಜು ಮತ್ತು ಭವ್ಯಾ ನಡುವೆ ಮಾತಿನ ಚಕಾಮಕಿ ನಡೆಯುತ್ತದೆ.
'ಭವ್ಯಾ ಹೆಸರು ತೆಗದುಕೊಳ್ಳಲು ಕಾರಣ ಏನೆಂದರೆ ಅವರು ಕ್ಯಾಪ್ಟನ್ ಟಾಸ್ಕ್‌ನಲ್ಲಿ ಗೊತ್ತಿದ್ದರೂ ಮಿಸ್ಟೇಕ್ ಮಾಡಿದ್ದಾರೆ. ಅಲ್ಲದೆ ಹನುಮಂತು ಮೇಲೆ ಕೈ ಮಾಡಿದ್ದಾರೆ. ಕೆಲವೊಂದು ಟಾಸ್ಕ್‌ನಲ್ಲಿ ತುಂಬಾ ಚೆನ್ನಾಗಿ ಆಟವಾಡಿದ್ದಾರೆ ಆದರೆ ಅದರ ಜೊತೆಗೆ ಅಲ್ಲಿ ಟಚ್ ಮಾಡಬೇಡಿ ಇಲ್ಲಿ ಟಚ್ ಮಾಡಬೇಡಿ ಅಂತ ಹೇಳ್ತಾ ಬೇರೆಯವರನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ' ಎಂಬ ಕಾರಣ ಕೊಟ್ಟು ಉಗ್ರಂ ಮಂಜು ಭವ್ಯಾರನ್ನು ನಾಮಿನೇಟ್ ಮಾಡುತ್ತಾರೆ.
ಜನರ ಮುಂದೆ ಬಿಗ್ ಬಾಸ್ ಗಿಮಿಕ್ ಬಯಲು; ಉಗ್ರಂ ಮಂಜು ಮಾಡಿದ್ದು ಓಕೆ ಆದ್ರೆ ಧನರಾಜ್ ಯಾಕೆ ಟಾರ್ಗೆಟ್?
'ನನಗೆ ಏನು ಬರುತ್ತದೆ ಅದನ್ನು ಅಷ್ಟೇ ಮಾಡಬಲ್ಲೆ. ಏನೇನೋ ಮಾಡೋದಕ್ಕೆ ನಾನಿಲ್ಲಿಗೆ ಬಂದಿಲ್ಲ. ಕುಗ್ಗಿಸುವಂತಹ ಪ್ರಯತ್ನ ಮಾಡಿದ್ದೀನಿ ಅಂತ ಹೇಳಿದ್ರೆ ಆದರೆ ನೀವ್ಯಾಕೆ ಕುಗ್ಗುತ್ತೀರಿ? ಯಾಕೆ ನಿಮ್ಮ ಮೆಂಟಾಲಿಟಿ ಸ್ಟ್ರಾಂಗ್ ಇಲ್ವಾ? ನಿಮ್ಮ ಮನಸ್ಸು ಗಟ್ಟಿಯಾಗಿ ಇಲ್ವಾ? ನನ್ನನ್ನು ಇಲ್ಲಿಗೆ ಕಳಿಸಿರೋದೇ ಮಾತನಾಡೋದಕ್ಕೆ. ನಾನು ಸಾವಿರ ಮಾತನಾಡುತ್ತೀನಿ, ಅಕ್ಕೆ ನೀವು ಯಾಕೆ ಕುಗ್ಗುತ್ತೀರಿ ಯಾಕೆ ಅಷ್ಟೋಂದು ವೀಕಾ ನೀವು' ಎಂದು ತಕ್ಷಣವೇ ಭವ್ಯಾ ತಿರುಗೇಟು ನೀಡುತ್ತಾರೆ.
ಟಾಸ್ಕ್ ಕೊಡುವ ಬಿಗ್ ಬಾಸ್ ತಂಡಕ್ಕೆ ಬುದ್ಧಿ ಇಲ್ವಾ?; ಧನರಾಜ್ ತಪ್ಪೇ ಮಾಡಿಲ್ಲ ಎಂದು ಬ್ಯಾಟ್ ಬೀಸಿದ
'ಹನುಮಂತು ಬಗ್ಗೆ ಹೇಳಿದ್ದೀರಿ ಹೌದು ನಾನು ಹೊಡೆದಿದ್ದೀನಿ. ಅದಕ್ಕೆ ವೀಕೆಂಡ್‌ನಲ್ಲಿ ಒಪ್ಪಿಕೊಂಡಿದ್ದೀನಿ ಅದಕ್ಕೆ ನಾನು ಶಿಕ್ಷೆ ಪಡೆದಿದ್ದೀನಿ ಅದನ್ನು ನಿಮ್ಮಿಂದ ನಾನು ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ನು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಗಿದ್ದು ನನಗೆ ಗೊತ್ತೇ ಇಲ್ಲ ಅದರ ಉಸ್ತುವಾರಿ ಆಗಿದ್ದ ನೀವು ನೋಡಿಕೊಳ್ಳಬೇಕಿತ್ತು ಹಾಗ್ನೋಡಿದ್ರೆ ನಿಮ್ಮದೇ ತಪ್ಪಿದೆ. ನೀವು ಆಟ ಆಡುವಾಗ ಅಗ್ರೆಸ್ಸಿವ್ ಆದ್ರಿ...ಗೌತಮಿಗೆ ಏಟಾಗಿದ್ದಕ್ಕೆ ನಮ್ಮನೆಲ್ಲಾ ಎತ್ತಿ ಎತ್ತಿ ಬೀಸಾಕಿದ್ರಿ ಅದನ್ನು ಎಲ್ಲರೂ ನೋಡಿದ್ದಾರೆ. ಗೌತಮಿ ಒಂದು ಹುಡುಗಿ ಅಂತ ಗೌರವ ಕೊಡುತ್ತೀರಿ ಅಲ್ವಾ? ಆದರೆ ನಾನು ಮತ್ತು ಮೋಕ್ಷಿತಾ ನಿಮಗೆ ಹುಡುಗಿ ಅಂತ ಕಾಣಿಸಲ್ವಾ? ನಾನು ಮಾತನಾಡೋಕೆ ಬಂದಿರೋದು. ನಾನು ಮಾತನಾಡುತ್ತೀನಿ ಗುರು ನಿಮಗೆ ಕಷ್ಟ ಅನಿಸಿದರೆ ಕವಿಯಲ್ಲಿ ಹತ್ತಿ ಇಟ್ಟುಕೊಳ್ಳಿ
ಡಾಕ್ಟರ್ ಮುಂದೆ ವಾಂತಿ ಮಾಡಿದ್ದೀನಿ, ನನಗೆ PCOD ಸಮಸ್ಯೆ ಇದೆ; ಆರೋಗ್ಯದ ಬಗ್ಗೆ ಚೈತ್ರಾ ಕುಂದಾಪುರ
