ಕಾಫಿ ವಿತ್ ಕರಣ್ ಶೋಗೆ ಬರಲು ಯಾರೂ ಸಿದ್ಧರಿಲ್ಲ, ಎಲ್ಲರ ಕಾಲಿಡೀತಿದ್ದಾರೆ ಕರಣ್ ಜೋಹರ್!
Coffee With Karan: ಈ ಬಾರಿ ಕಾಫಿ ವಿತ್ ಕರಣ್ ಶೋ ಟಿವಿಯಲ್ಲಿ ಬರುತ್ತಿಲ್ಲ. ಮೊದಲ ಬಾರಿಗೆ ಹಾಟ್‌ಸ್ಟಾರ್ ಆಪ್‌ನಲ್ಲಿ ಪ್ರದರ್ಶನವಾಗಲಿದೆ. ಆದರೆ ಬಾಲಿವುಡ್ ನಟ-ನಟಿಯರು ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ಬರಲು ತಯಾರಿಲ್ಲವಂತೆ. ಅದಕ್ಕಾಗಿ, ಬಾಲಿವುಡ್ ಸ್ನೇಹಿತರಿಗೆ ಕರೆ ಮಾಡಿ ಕರಣ್ ಜೋಹರ್ ಅಂಗಲಾಚುತ್ತಿದ್ದಾರೆ.
ಕರಣ್ ಜೋಹರ್ ತಮ್ಮ ಬಾಲಿವುಡ್‌ನ ಸ್ನೇಹಿತರನ್ನು ತಾವು ನಡೆಸಿಕೊಡುವ ಕಾಫಿ ವಿತ್ ಕರಣ್ ಸೆಲೆಬ್ರಿಟಿ ಟಾಕ್ ಶೋನಲ್ಲಿ ಕಾಣಿಸುಕೊಳ್ಳಲು ಬೇಡಿಕೊಳ್ಳುತ್ತಿದ್ದಾರೆ.
ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ ಜೋಹರ್ ಅವರ ಜನಪ್ರಿಯ ಚಾಟ್ ಶೋ ಕಾಫಿ ವಿತ್ ಕರಣ್ 7ನೇ ಆವೃತ್ತಿ ಶೀಘ್ರದಲ್ಲೇ ತೆರೆಯ ಮೇಲೆ ಬರಲು ಸಿದ್ದವಾಗದೆ. ಮಂಗಳವಾರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್ನಲ್ಲಿ ಬಿಡುಗಡೆ ಮಾಡುವುದರ ಮೂಲಕ ಕರಣ್ ತಮ್ಮ ಶೋನಲ್ಲಿ ಸ್ನೇಹಿತರ ಬರುವಿಕೆಗೆ ಮನವೊಲಿಸಲು ಕಷ್ಟಪಡುತ್ತಿದ್ದಾರೆ. ನಿರ್ಮಾಪಕರು, ನಟ-ನಟಿಯರು ಸೇರಿದಂತೆ ಬಾಲಿವುಡ್‌ನ ಯಾರೂ ಬರಲು ಒಪ್ಪಿಕೊಳ್ಳುತ್ತಿಲ್ಲ. ಈ ಕಾರಣಕ್ಕಾಗಿಯೇ ಕರಣ್ ಜೋಹರ್ ಎಲ್ಲರ ಅಂಗಲಾಚುತ್ತಿದ್ದಾರೆ.
ನಿಜಕ್ಕೂ ಕರಣ್ ಜೋಹರ್‌ಗೆ ಅಂಗಲಾಚುವಂತಾ ಸ್ಥಿತಿ ಬಂತಾ ಅಂತ ಯೋಚಿಸುತ್ತಿದ್ದೀರಾ? ಇಲ್ಲ, ಇದು ಡಿಸ್ನಿ+ ಹಾಟ್‌ಸ್ಟಾರ್ ಬಿಡುಗಡೆ ಮಾಡಿರುವ ಟ್ರೈಲರ್. ಶೋ ಪ್ರೋಮೊದಲ್ಲಿ ಕರಣ್ ಜೋಹರ್ ಬಾಲಿವುಡ್ ಸ್ನೇಹಿತರಿಗೆ ಕರೆ ಮಾಡಿ, ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ, ನಿಮಗಿಷ್ಟವಾದ ಗಿಫ್ಟ್ ನೀಡುತ್ತೇನೆ. ಬೇಕಾದರೆ ಎರಡು ಗಿಫ್ಟ್ ನೀಡುತ್ತೇನೆ, ನೀವು ಕೇಳಿದ್ದನ್ನು ಕೊಡುತ್ತೇನೆ. ಬೇಕಾದರೆ ಸಿನೆಮಾ ಅವಕಾಶ ಕೊಡಿಸುತ್ತೇನೆ ಎಂದೆಲ್ಲಾ ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಇದಕ್ಕೂ ಮುನ್ನ, ಟೀಸರ್ ನೋಡಿದ ನಂತರ ಬಾಲಿವುಡ್ ದಿಗ್ಗಜರು, ಶೋಗೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವಂತೆ ತೋರಿಸಲಾಗಿದೆ. ಇದಕ್ಕೆ ಪ್ರತಿಯಾಗಿ, ಕರಣ್ ಜೋಹರ್ ಯಾರೋ ನಾಲ್ಕು ಮಂದಿ ಬಾಯ್‌ಕಾಟ್ ಮಾಡಬಹುದು, ಆದರೆ ಬೇರೆ ಸ್ನೇಹಿತರನ್ನು ಕರೆಯುತ್ತೇನೆ ಎಂದು ಕರೆ ಮಾಡಿದಾಗ, ಬರುವುದಿಲ್ಲ ಎಂಬ ಉತ್ತರ ಎಲ್ಲರಿಂದ ಬರುತ್ತದೆ.
ಕರಣ್ ಪೋನಿನಲ್ಲಿ ಮಾತನಾಡುತ್ತಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲು ಎಲ್ಲ ಸೆಲೆಬ್ರಿಟಿಗಳನ್ನು ಬೇಡಿಕೊಳ್ಳುತ್ತಾರೆ. ಕಾರ್ಯಕ್ರಮದಲ್ಲಿ ಪ್ರಸಿದ್ಧ ಹ್ಯಾಂಪರ್‌ಗಳನ್ನು ಲಂಚದ ರೂಪದಲ್ಲಿ ನೀಡುತ್ತೀನಿ ಎನ್ನುತ್ತಾರೆ ಮತ್ತು ಅವರ ಚಿತ್ರಗಳಲ್ಲಿ ಪಾತ್ರವನ್ನು ನೀಡುತ್ತೀನಿ ಎಂಬ ಆಫರ್ ಸಹ ಕೊಡುತ್ತಾರೆ. ಒಟ್ಟಿನಲ್ಲಿ ಈ ವಿಡಿಯೋ ನೈಜವಾಗಿ ಬಂದಿರುವುದಲ್ಲದೇ, ನಗೆಗಡಲಲ್ಲಿ ತೇಲಿಸುತ್ತದೆ. ವೀಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ಉಲ್ಲಾಸದಾಯಕವಾಗಿದೆ, ಹಾಸ್ಯವನ್ನು ಪ್ರೀತಿಸಿ." ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು, "ಇದು ಅತ್ಯಂತ ಪ್ರಾಮಾಣಿಕವಾದ ಪ್ರೋಮೋ" ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಖುಷಿಯಲ್ಲಿ ಖಂಡಿತ ನಾವಿರಲಿಲ್ಲ, ರಣಬೀರ್ ಆಲಿಯಾಗೆ ಕಾಂಡೋಮ್ ಕಂಪನಿಯ ಫನ್ನಿ ಶುಭಾಶಯ!
ಕಾಫಿ ವಿತ್ ಕರಣ್ 2004 ರಲ್ಲಿ ಸ್ಟಾರ್ ವರ್ಲ್ಡ್ ನಲ್ಲಿ ಮೊದಲು ಪ್ರಸಾರವಾಯಿತು. ಈ ವರ್ಷದಿಂದ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ಜುಲೈ 7 ರಿಂದ OTTಯಲ್ಲಿ ಪ್ರಸಾರವಾಗಲಿದೆ. ಚಾಟ್ ಶೋ ತನ್ನ ಅತಿಥಿಗಳ ಪ್ರಾಮಾಣಿಕ ತಪ್ಪೊಪ್ಪಿಗೆಗಳಿಗೆ ಹೆಸರುವಾಸಿಯಾಗಿದೆ. ಮತ್ತು ಕೆಲವೊಮ್ಮೆ ವಿವಾದಾತ್ಮಕ ಅಭಿಪ್ರಾಯಗಳು ಕೂಡ ಇಂತಾ ಶೋಗಳಿಂದ ಹೊರಬರುತ್ತದೆ. ಉದಾಹರಣೆಗೆ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ವಿವಾದ. ಕಾಫಿ ವಿತ್ ಕರಣ್ ಶೋನಲ್ಲಿ ಹೆಂಗಸರ ಬಗ್ಗೆ ಹಾರ್ದಿಕ್ ಮತ್ತು ರಾಹುಲ್ ವಿವಾದಾತ್ಮಕವಾಗಿ ಮಾತನಾಡಿದ್ದರು. ಇದರ ನಂತರ ಕೆಲ ಪಂದ್ಯಗಳಿಗೆ ತಂಡದಿಂದ ಇಬ್ಬರೂ ಆಚೆ ಉಳಿಯುವಂತೆಯೂ ಆಯಿತು.
ಅನೇಕ ಸ್ಟಾರ್ಸ್ ತಾವು ಶೋನಲ್ಲಿ ಹೇಳುವ ವಿಷಯಗಳಿಗೆ ಕೆಲವೊಂದು ಸಲ ಪಶ್ಚಾತ್ತಾಪ ಪಡುತ್ತಾರೆ. 2017 ರಲ್ಲಿ, ರಣಬೀರ್ ಕಪೂರ್ AIB ಪಾಡ್‌ಕ್ಯಾಸ್ಟ್‌ನಲ್ಲಿ, “ಕರಣ್ ನಮ್ಮಿಂದ ಹಣ ಸಂಪಾದಿಸುತ್ತಿದ್ದಾರೆ. ನಾವು ಶೋನಲ್ಲಿ ಭಾಗಿಯಾದಾಗ, ವೈಯಕ್ತಿಕ ಮತ್ತು ವಿವಾದಾತ್ಮಕ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದರೆ ವರ್ಷವಿಡೀ ನಾವು ಟ್ರೋಲ್ ಆಗುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಪೂಜಾ ಹೆಗ್ಡೆಯನ್ನ ಹಿಂದಿಕ್ಕಿದ ರಶ್ಮಿಕಾ, ಅರೆರೆ... ಸಂಭಾವನೆ ಇಷ್ಟೊಂದಾ..?
15 ವರ್ಷಗಳ ಅವಧಿಯಲ್ಲಿ, ಸಲ್ಮಾನ್ ಖಾನ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ಸೋನಮ್ ಕಪೂರ್, ಅಮೀರ್ ಖಾನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಟ್ವಿಂಕಲ್ ಖನ್ನಾ, ರಾಣಿ ಮುಖರ್ಜಿ, ಹೃತಿಕ್ ರೋಷನ್, ಸೈಫ್ ಅಲಿ ಖಾನ್, ಸಂಜಯ್ ಕಪೋರ್, ಏಕ್ತಾ ಕಪೋರ್ ಮುಂತಾದ ಸೆಲೆಬ್ರಿಟಿಗಳು ಜಾನ್ ಅಬ್ರಹಾಂ, ಲಾರಾ ದತ್ತಾ ಮತ್ತು ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ.