ಡ್ಯುರೆಕ್ಸ್ ಕಾಂಡೋಮ್ ಶುಭಾಶಯಕ್ಕೆ ಭಾರಿ ಮೆಚ್ಚುಗೆ ಆಲಿಯಾ ಭಟ್ ಪ್ರಗ್ನೆಂಟ್, ಕಾಂಡೋಮ್ ಕಂಪನಿ ಶುಭಾಶಯ ಫನ್ನಿ ಶುಭಾಶಯದ ಮೂಲಕ ಸದ್ದು ಮಾಡಿದ ಕಾಂಡೋಮ್

ಮುಂಬೈ(ಜೂ.28): ಬಾಲಿವುಡ್ ಜೋಡಿ ರಣಬೀರ್ ಹಾಗೂ ಆಲಿಯಾ ಭಟ್ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಮದುವೆಯಾದ 2 ತಿಂಗಳಿಗೆ ಪ್ರೆಗ್ನೆಂಟ್ ಆಗಿರುವ ಆಲಿಯಾ ಭಟ್‌ ಹಾಗೂ ಪತಿ ರಣಬೀರ್ ಕಪೂರ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದರ ನಡುವೆ ಡ್ಯುರೆಕ್ಸ್ ಕಾಂಡೋಮ್ ಕಂಪನಿ ಮಾಡಿರುವ ಶುಭಾಶಯ ಇದೀಗ ಭಾರಿ ವೈರಲ್ ಆಗಿದೆ. 

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್‌ಗೆ ಡ್ಯುರೆಕ್ಸ್ ಕಾಂಡೋಮ್ ಕಂಪನಿಯ ಶುಭಕೋರಿದೆ. ರಣಬೀರ್ ನಟನೆಯ ಏ ದಿಲ್ ಹೇ ಮುಷ್ಕಿಲ್ ಚಿತ್ರದ ಚನ್ನ ಮೆರೆಯಾ ಹಾಡಿನ ಸಾಲನ್ನು ಬಳಿಸಿಕೊಂಡ ಡ್ಯುರೆಕ್ಸ್ ಕಾಂಡೋಮ ಕಂಪನಿ. ಮೆಹಫಿಲ್ ಮೇ ತೇರಿ, ಹಮ್ ತೋ ಕ್ಲೀಯರ್ಲಿ ನಹಿ ಥೆ ಎಂದಿದೆ. ಅಂದರೆ ನಿಮ್ಮ ಖುಷಿಯ ಕ್ಷಣದಲ್ಲಿ ಖಂಡಿತ ನಾವು ಇರಲಿಲ್ಲ ಎಂದು ಕಾಂಡೋಮ್ ಕಂಪನಿ ಹೇಳಿದೆ. ಇಷ್ಟೇ ಅಲ್ಲ ಆಲಿಯಾ ಹಾಗೂ ರಣಬೀರ್‌ಗೆ ಶುಭಾಶಯ ಎಂದು ಬರೆದುಕೊಂಡಿದೆ.

ಮದುವೆಯಾದ ಎರಡು ತಿಂಗ್ಳಿಗೆ ಆಲಿಯಾ ಪ್ರೆಗ್ನೆಂಟ್, ನೋಡಿ ಕಲೀರಿ ದೀಪಿಕಾ ಎಂದ ನೆಟಿಜನ್ಸ್!

ಡ್ಯುರೆಕ್ಸ್ ಕಾಂಡೋಮ್ ಕಂಪನಿಯ ಈ ಶುಭಾಶಯ ಭಾರಿ ಸಂಚಲನ ಸೃಷ್ಟಿಸಿದೆ. ಕಂಪನಿಯ ಸಾಮಾಜಿಕ ಜಾಲತಾಣ ನಿರ್ವಹಿಸುವ ಹಾಗೂ ಬ್ರ್ಯಾಂಡ್ ಪ್ರಚಾರ ಮಾಡುವ ಕಂಪನಿಯ ಫನ್ನಿ ಶುಭಾಶಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಯಾತ್ಮಕ ಸಂದೇಶಕ್ಕೆ ಜನ ಮಾರುಹೋಗಿದ್ದಾರೆ.

ಬಾಲಿವುಡ್‌ನ ಸ್ಟಾರ್‌ ಜೋಡಿಯಾದ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಸಧ್ಯದಲ್ಲೇ ಮೊದಲ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಧಲ್ಲಿ ಶುಭಾಶಯಗಳು ಹರಿದು ಬಂದಿತ್ತು. ಜೊತೆಗೆ ಹಲವು ಮೀಮ್ಸ್ ಕೂಡ ಸದ್ದು ಮಾಡಿತ್ತು. ಇದೇ ವೇಳೆ ದೀಪಿಕಾ ಹಾಗೂ ರಣವೀರ್ ಸಿಂಗ್ ಜೋಡಿಗೆ ನೋಡಿ ಕಲಿಯಿರಿ ಎಂದು ಹಲವರು ತಿವಿದಿದ್ದರು. 

Scroll to load tweet…

ಆಸ್ಪತ್ರೆಯಲ್ಲಿ ಪತಿಯೊಂದಿಗೆ ಅಲ್ಟಾ್ರಸೌಂಡ್‌ ಸ್ಕಾ್ಯನಿಂಗ್‌ನಲ್ಲಿ ಭಾಗಿಯಾಗಿರುವ ಫೋಟೋವನ್ನು ಇಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಆಲಿಯಾ, ನಮ್ಮ ಮಗು ಶೀಘ್ರದಲ್ಲೇ ಬರಲಿದೆ ಎಂದು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಈ ಜೋಡಿ ಕಳೆದ ಏಪ್ರಿಲ್‌ನಲ್ಲಿ ಮದುವೆಯಾಗಿದ್ದರು. ಅಲ್ಲದೇ ಈ ಜೋಡಿ ಒಟ್ಟಾಗಿ ನಟಿಸಿರುವ ಬ್ರಹ್ಮಾಸ್ತ್ರ ಮುಂದಿನ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ರಣಬೀರ್‌ ಅಭಿನಯದ ಶಂಶೇರಾ ಪೋಸ್ಟರ್‌ನಿಂದ ಸಂತೋಷಗೊಂಡಿದ್ದ ಅಭಿಮಾನಿಗಳು ಈಗ ಮತ್ತಷ್ಟುಸಂತೋಷಗೊಂಡಿದ್ದಾರೆ.

ತಾಯಿಯಾಗುತ್ತಿದ್ದಾರೆ ನಟಿ ಆಲಿಯಾ ಭಟ್; ಸಂತಸ ಹಂಚಿಕೊಂಡ ಸ್ಟಾರ್ ದಂಪತಿ

ಎಪ್ರಿಲ್ 14 ರಂದು ಅಲಿಯಾ ಹಾಗೂ ರಣಬೀರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪ್ರಗ್ನೆಂಟ್ ಸಂತಸ ಬಹಿರಂಗ ಪಡಿಸಿದ ರಣಬೀರ್ ಕಪೂರ್, ಮಗುವಿನ ಹೆಸರನ್ನು ಟ್ಯಾಟೋ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರೆ. 

ಮದುವೆಯಾದ ಬಳಿಕ ಆಲಿಯಾ ಭಟ್ ತಮ್ಮ ಹಾಲಿವುಡ್ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಇತ್ತ ರಣಬೀರ್ ಕಪೂರ್ ಶಂಶೇರಾ ಚಿತ್ರದ ಪ್ರೋಮಶನ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇದೇ ವೇಳೆ ಆಲಿಯಾ ಹಾಗೂ ರಣಬೀರ್ ಕಂಪೂರ್ ಜೊತೆಯಾಗಿ ಬ್ರಹ್ಮಾಸ್ತ್ರ ಪ್ರಮೋಶನ್ ಕೂಡ ನಡೆಸುತ್ತಿದ್ದಾರೆ.