ಕ್ಯಾಪ್ಟನ್ ಆದ ರಜತ್ ಕಿಶನ್ ಗೆ ವೀಕ್ಷಕರ ಫುಲ್ ಸಪೋರ್ಟ್… ಇವರೇ ಬಿಗ್ ಬಾಸ್ ವಿನ್ನರ್ ಅಂತಿದ್ದಾರೆ!

ಬಿಗ್ ಬಾಸ್ ಸೀಸನ್ 11 ರ ಹೊಸ ಕ್ಯಾಪ್ಟನ್ ಆಗಿ ರಜನ್ ಕಿಶನ್ ಆಯ್ಕೆಯಾಗಿದ್ದು, ಕಿಶನ್ ಆಟ, ಮನರಂಜನೆ ನೋಡಿ ವೀಕ್ಷಕರು ಪೂರ್ತಿ ಬೆಂಬಲವನ್ನು ನೀಡಿದ್ದು ಇವರೇ ವಿನ್ನರ್ ಅಂತಿದ್ದಾರೆ. 
 

Captain Rajath get full support from viewers and says he is bigg boss winner pav

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Season 11) ಅದ್ಧೂರಿಯಾಗಿಯೇ ನಡೆಯುತ್ತಿದೆ. ಇನ್ನೇನು ಕೊನೆಯ ಹಂತ ತಲುಪೋದಕ್ಕೂ ರೆಡಿಯಾಗಿದೆ. ಫಿನಾಲೆ ಹತ್ತಿರ ಬರುವ ಸಮಯದಲ್ಲಿ ಇದೀಗ ವೈಲ್ಡ್ ಕಾರ್ಡ್ (wild card entry) ಮೂಲಕ ಎಂಟ್ರಿ ಕೊಟ್ಟ ರಜತ್ ಕಿಶನ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ವೀಕ್ಷರು ಫುಲ್ ಖುಷಿಯಾಗಿದ್ದಾರೆ. ಈ ಮೊದಲು ರಜತ್ ಗೆ ಬಯ್ಯುತ್ತಿದ್ದಂತಹ ವೀಕ್ಷಕರೇ ಇದೀಗ ರಜತ್ ಆಟದ ಶೈಲಿ, ಎಂಟರ್’ಟೇನ್ ಮೆಂಟ್ ಕೊಡುವ ರೀತಿ, ಪ್ರತಿಯೊಂದು ಸಂದರ್ಭದಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಾ ನಡೆದುಕೊಳ್ಳುವ ರೀತಿ, ಜನರನ್ನು ಸೆಳೆದಿದ್ದು, ಇವರೇ ವಿನ್ನರ್ ಅಂತ ಹೇಳ್ತಿದ್ದಾರೆ. 

ಅದ್ಭುತವಾದ ಟಾಸ್ಕ್‌ ಗೆದ್ದು ಬಿಗ್‌ಬಾಸ್‌ನ ಹೊಸ ಕ್ಯಾಪ್ಟನ್‌ ಆದ ರಜತ್, ಫಿನಾಲೆಗೆ ಒಂದೇ ಸ್ಟೇಪ್‌!

ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆದಿದ್ದು, ಬಿಗ್ ಬಾಸ್ ಸ್ಪರ್ಧಿಗಳ ಮನೆಮಂದಿ ಮನೆಗೆ ಎಂಟ್ರಿ ಕೊಟ್ಟಿದ್ದರಿಂದ ಜಗಳ, ಕೋಪ ಎಲ್ಲೂ ತೋರಿಸದೇ ಎಲ್ಲರೂ ನಗುನಗುತ್ತಾ ಪ್ರತಿಕ್ಷಣವನ್ನು ಎಂಜಾಯ್ ಮಾಡುತ್ತಾ ಕಳೆದಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ರಜತ್  (Rajath Kishan) ಹೆಂಡತಿ ಹಾಗೂ ಮಕ್ಕಳು ಸಹ ಎಂಟ್ರಿ ಕೊಟ್ಟಿದ್ದು, ರಜತ್ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತ್ತು. ರಜತ್ ಬಿಗ್ ಬಾಸ್ ಮನೆಗೆ ಬಂದು 50 ದಿನ ಕಳೆದಿದ್ದು, ಇದೀಗ್ 50 ದಿನಗಳ ಬಳಿಕ ತಮ್ಮ ಭರ್ಜರಿ ಆಟದ ಮೂಲಕ ಕ್ಯಾಪ್ಟನ್ ಕೂಡ ಆಗಿದ್ದಾರೆ. ಆರಂಭದಲ್ಲಿ ತಮ್ಮ ಕೋಪದ ಮಾತುಗಳಿಂದಲೇ ಸಹ ಸ್ಪರ್ಧಿಗಳಿಂದ ಹಾಗೂ ವೀಕ್ಷಕರಿಂದ ಬೈಸಿಕೊಂಡಿದ್ದ ರಜತ್, ಇದೀಗ ತಮ್ಮ ಆಟ ಹಾಗೂ ಮನರಂಜನೆ ಮೂಲಕ ಜನರ ಮನಸ್ಸು ಗೆಲ್ಲುತ್ತಿದ್ದಾರೆ. 

 BBK11: ಹೊಸ ವರ್ಷಕ್ಕೆ ಚೈತ್ರಾ-ರಜತ್‌ಗೆ ತನ್ನ ಬೆಲೆಬಾಳುವ ಕಿವಿಯೋಲೆ ಬಿಚ್ಚಿ ಉಡುಗೊರೆ ಕೊಟ್ಟ ಕಿಚ್ಚ!

ರಜತ್ ಕ್ಯಾಪ್ಟನ್ (captain Rajath) ಆಗಿರೋದನ್ನು ಸಹ ವೀಕ್ಷಕರು ಮೆಚ್ಚಿಕೊಂಡಿದ್ದು, ಇವರೇ ಈ ಬಾರಿ ಬಿಗ್ ಬಾಸ್ ಸೀಸನ್ 11 ರ ವಿನ್ನರ್ ಎಂದು ಹೇಳುತ್ತಿದ್ದಾರೆ. ರಜತ್ ಮೊದಲಿನ ದಿನದಿಂದ ಇರಬೇಕಿತ್ತು, ಆವಾಗ್ಲೇ ಮಜಾ ಇರ್ತಿತ್ತು ಎನ್ನುತ್ತಿದ್ದಾರೆ ಹಲವರು. ಮತ್ತೆ ಕೆಲವರು ನಿಮ್ಮ ಕೋಪ ಕಡಿಮೆ ಮಾಡಿ ರಜತ್, ನೀವು ಆಟ ಭರ್ಜರಿಯಾಗಿಯೇ ಆಡುತ್ತೀರಿ, ವಿನ್ನರ್ ಕೂಡ ನೀವೇ ಎಂದಿದ್ದಾರೆ. ಈ ವಾರ ರಜತ್ ಕಾಮಿಡಿ ಪಂಚಿಂಗ್ ಚೆನ್ನಾಗಿತ್ತು, ಈ ವಾರ ಕಿಚ್ಚನ ಚಪ್ಪಾಳೆ ರಜತ್ ಗೆ ಸಿಗಬೇಕು ಎನ್ನುತ್ತಿದ್ದಾರೆ ಜನ. ಒಟ್ಟಲ್ಲಿ ಹೇಳಬೇಕು ಅಂದ್ರೆ ಇಷ್ಟು ದಿನ ರಜತ್ ಗೆ ಬೈಯ್ಯುತ್ತಿದ್ದೋರೆಲ್ಲಾ ಈಗ ರಜತ್ ಅಭಿಮಾನಿಗಳಾಗಿರೋದು (fans of Rajath) ನಿಜಾ. ಏನೇ ಆಗ ಈ ವಾರ ರಜತ್ ಆಟ ಹೇಗಿರುತ್ತೇ? ಕ್ಯಾಪ್ಟನ್ ಆಗಿ ಏನೆಲ್ಲಾ ಬದಲಾವಣೆ ತರುತ್ತೆ ಅನ್ನೋದನ್ನು ನೋಡೋಣ. 
 

ವ್ಯಂಗ್ಯಕ್ಕೂ ಅಪಹಾಸ್ಯಕ್ಕೂ ವ್ಯತ್ಯಾಸ ಇದೆ; ರಜತ್ ಫೋಟೋ ಇಟ್ಟು ತಟ್ಟೆ ಪುಡಿಪುಡಿ ಮಾಡಿದ ಚೈತ್ರಾ ಕುಂದಾಪುರ

Latest Videos
Follow Us:
Download App:
  • android
  • ios