ಅದ್ಭುತವಾದ ಟಾಸ್ಕ್‌ ಗೆದ್ದು ಬಿಗ್‌ಬಾಸ್‌ನ ಹೊಸ ಕ್ಯಾಪ್ಟನ್‌ ಆದ ರಜತ್, ಫಿನಾಲೆಗೆ ಒಂದೇ ಸ್ಟೇಪ್‌!

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ರಜತ್ ಕಿಶನ್ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಫಿನಾಲೆಗೆ ಕೇವಲ ಮೂರು ವಾರಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ.

bigg boss kannada 11 Rajath Kishan new captain of the house gow

ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ರಜತ್‌ ಕಿಶನ್‌ ಮನೆಯ ನೂತನ ಕ್ಯಾಪ್ಟನ್‌ ಆಗಿದ್ದಾರೆ. ಬಿಗ್‌ಬಾಸ್‌ ಕೊಟ್ಟ ಅದ್ಭುತವಾದ ಟಾಸ್ಕ್‌ ಗೆದ್ದು ವೈಲ್ಡ್‌ ಕಾರ್ಡ್ ಎಂಟ್ರಿಯಾಗಿ ಮನೆಗೆ ಬಂದು ಚೆನ್ನಾಗಿ ಆಡುತ್ತಿರುವ ರಜತ್‌ ಮನೆಯ ಕ್ಯಾಪ್ಟನ್‌ ಆಗಿರುವುದು ಅವರ ಆಟದ ವೈಖರಿಯನ್ನು ತೋರಿಸಿದೆ.

ಹೊಸ ವರ್ಷದ ಸಂಭ್ರಮದ ಮಧ್ಯೆಯೇ ಮನೆಗೆ ಹೊಸ ಕ್ಯಾಪ್ಟನ್‌ ಮಾತ್ರವಲ್ಲ ಬಿಗ್‌ಬಾಸ್‌ ಫಿನಾಲೆಗೆ ಮೂರು ವಾರಗಳು ಇರುವಾಗಲೇ ರಜತ್ ಗೆದ್ದಿರುವುದು. ಫಿನಾಲೆಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಜನವರಿ ಕೊನೆಯ ವಾರದಲ್ಲಿ ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.

ಯಾವ ಜನ್ಮದ ಪುಣ್ಯನೋ, ಬಿಗ್‌ಬಾಸ್ ಮನೆಗೆ ಬಂತು ಕಿಚ್ಚನ ಕೈರುಚಿ, ಸ್ಪರ್ಧಿಗಳಿಗೆ ಸರ್‌ಪ್ರೈಸ್‌!

ಈ ಸೀಸನ್​ ನ ಪ್ರಬಲ ಸ್ಪರ್ಧಿಗಳಲ್ಲಿ ರಜತ್‌ ಕೂಡ ಒಬ್ಬರು. 50 ದಿನ ಕಳೆದ ಬಳಿಕ ವೈಲ್ಡ್​ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ  ಬಂದ ರಜತ್ ಟಾಪ್‌ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಲಿದ್ದಾರೆಂಬುದು ಅನೇಕರ ಅಭಿಪ್ರಾಯ. 100 ದಿನಗಳ ಸಮೀಪದಲ್ಲಿರುವ ಬಿಗ್‌ಬಾಸ್‌ನ ಹೊಸ ಕ್ಯಾಪ್ಟನ್‌ ಆಗಿ ರಜತ್‌ ಆಯ್ಕೆಯಾಗಿದ್ದಾರೆ. ಟಾಪ್‌ ಫೈನಲಿಸ್ಟ್ ಆಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಮನೆಯವರಿಗೆಲ್ಲರಿಗೂ ವಿಶೇಷವಾಗಿ ಕೈಯಾರೆ  ಅಡುಗೆ ಮಾಡಿ ಕಳಿಸಿರುವ ಸುದೀಪ್‌ ಅವರು ಅದರ ಜೊತೆಗೆ ಸಂದೇಶವನ್ನು ಕೂಡ ಎಲ್ಲರಿಗೂ ಕಳಿಸಿದ್ದರು. ಈ ಪತ್ರದಲ್ಲಿ ಉತ್ತಮ ಸಂದೇಶದ ಜೊತೆಗೆ ಕಿವಿಮಾತು ಕೂಡ ಇದೆ. ಇದರಲ್ಲಿ ಕ್ಯಾಪ್ಟನ್‌ ಆದ ರಜತ್ ಅವರಿಗೆ  ನಾಯಕನಿಗೂ, ಖಳನಾಯಕನಿಗೂ ವ್ಯತ್ಯಾಸ ಇಷ್ಟೇ. ಒಬ್ಬನಿಗೆ ಕೋಪ ಜಾಸ್ತಿ. ಇನ್ನೊಬ್ಬನಿಗೆ ತಾಳ್ಮೆ ಜಾಸ್ತಿ. ನೀವು ನಾಯಕನಾ ಅಥವಾ ಖಳನಾಯಕನಾ’ ಎಂದು ಬರೆದಿದ್ದರು. ಇದಕ್ಕೆ ಉತ್ತರಿಸಿದ ರಜತ್​ ನಾನು ನಿಮ್ಮ ಅಭಿಮಾನಿ ಸರ್ ಎಂದಿದ್ದಾರೆ. ಕ್ಯಾಪ್ಟನ್‌ ಆಗಿರುವ ರಜತ್ ಮನೆಯನ್ನು ಎಷ್ಟು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಾರೆ ಎಂಬುದನ್ನು ಮುಂದಿನವಾರ ಕಾದು ನೋಡಬೇಕಿದೆ. ಏಕೆಂದರೆ ರಜತ್‌ ಗೆ ತಾಳ್ಮೆ ಎಷ್ಟಿದೆಯೋ ಅಷ್ಟೇ ಕೋಪ. ಜೊತೆಗೆ ಅಷ್ಟೇ ಎಂಟಟೈನಿಂಗ್‌ ಆಗಿರುವ ವ್ಯಕ್ತಿ ಕೂಡ ಹೌದು. ಹೀಗಾಗಿ ಅವರ ನಾಯಕತ್ವ ಹೇಗಿರಲಿದೆ ಎಂಬುದು ಎಲ್ಲರ ಕುತೂಹಲ.

ವೀಕೆಂಡ್‌ನಲ್ಲಿ ಕಿಚ್ಚನನ್ನು ಯಾವ ಚಾನೆಲ್‌ನಲ್ಲಿ ನೋಡ್ಬೇಕು ಎಂಬುದೇ ಫುಲ್ ಕನ್ಫ್ಯೂಸ್!

ಈ ಮಧ್ಯೆ ಡಬಲ್‌ ಎಲಿಮಿನೇಶನ್ ಮುಂದಿನ ವಾರ ನಡೆಯುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಡಬಲ್‌ ಎಲಿಮೇನೇಶನ್‌ ಮುಂದಿನವಾರ ನಡೆದರೆ ರಜತ್‌  ಇದರಿಂದ ಸೇಫ್. ಅದರ ಮುಂದಿನ ವಾರ 7 ಜನ ಇರಲಿದ್ದಾರೆ. ಯಾರು ಹೋಗುತ್ತಾರೆ? ಯಾರು ಫಿನಾಲೆಗೆ ಹೋಗುತ್ತಾರೆ ಎಂಬುದು ಮೂರನೇ ವಾರ ತಿಳಿಯಲಿದೆ.

Latest Videos
Follow Us:
Download App:
  • android
  • ios