ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಹೊಸ ಬಗೆಯ ಟ್ವಿಸ್ಟ್ ಶುರುವಾಗಿದೆ. ಏಜೆ ಮತ್ತು ಲೀಲಾ ನಡುವೆ ರೊಮ್ಯಾಂಟಿಕ್ ಸನ್ನಿವೇಶದ ಹಿಂಟ್ ಸಿಕ್ಕಿದೆ. ಇವರ ಪ್ರೀತಿಯ ಕೊಂಡಿಯಾಗಿ ಬ್ರಹ್ಮಗಂಟು ಸೀರಿಯಲ್‌ನ ಗುಂಡಮ್ಮ ಅಂತಲೇ ಫೇಮಸ್ ಆಗಿರುವ ಗೀತಾ ಭಾರತಿ ಹಿಟ್ಲರ್ ಕಲ್ಯಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಏನು, ಹೇಗೆ, ಎಲ್ಲಿ?
ಹಿಟ್ಲರ್ ಕಲ್ಯಾಣ(Hitler Kalyana) ಸೀರಿಯಲ್ ನಲ್ಲಿ ಹೊಸ ಹೊಸ ಟ್ವಿಸ್ಟ್(Twist) ಗಳು ಕಾಣಿಸಿಕೊಳ್ಳುತ್ತಿವೆ. ಇದನ್ನು ನೋಡಿದರೆ ಇನ್ಮೇಲೆ ಈ ಸೀರಿಯಲ್ ಪ್ರೇಕ್ಷಕರು ಪೆಪ್ಪರ್ ಸಾಲ್ಟ್(Pepper salt look) ಲುಕ್‌ನ ಎಜೆ ಹಾಗೂ ಲೀಲಾ ನಡುವಿನ ಪ್ರೇಮ, ಪ್ರಣಯಗಳಿಗೆ ಸಾಕ್ಷಿಯಾಗಬೇಕಾಗುತ್ತಾ ಅನ್ನೋ ಅನುಮಾನ ಶುರುವಾಗಿದೆ. ಈ ಅನುಮಾನ ಪ್ರೇಕ್ಷಕರಿಗೆ ಖುಷಿಯನ್ನೇ ತಂದಿದೆ. ಈ ಜೋಡಿಯ ನಡುವೆ ಪ್ರೀತಿ ಕಿಡಿ ಹಚ್ಚೋದಕ್ಕೆ ಇನ್‌ಡೈರೆಕ್ಟ್(Indirect) ಆಗಿ ಬ್ರಹ್ಮಗಂಟು ಸೀರಿಯಲ್‌ನ ಗುಂಡಮ್ಮ ಅಂತಲೇ ಫೇಮಸ್ ಆಗಿರುವ ಗೀತಾ ಭಾರತಿ ಭಟ್(Geetha Bharthi Bhat) ಬಂದಿದ್ದಾರೆ.
ಡಿನ್ನರ್ ಡೇಟ್ ನೆವದಲ್ಲಿ ಏಜೆ(AJ) ಲೀಲಾ(Leela) ಳನ್ನು ಕಾರಿನಲ್ಲಿ ಕೂರಿಸಿಕೊಂಡು ಹೊಟೇಲ್‌ಗೆ ಬರುತ್ತಾನೆ. ಲೀಲಾಳನ್ನು ಇಂಪ್ರೆಸ್(Impress) ಮಾಡಲು ಏಜೆ ಇಟ್ಟುಕೊಂಡಿರುವ ಸಣ್ಣ ಪಾರ್ಟಿ ಇದು. ಲೀಲಾಗೆ ಆದ ನೋವನ್ನು ಎಜೆ ಈ ರೀತಿ ಮರೆಸಲು ಏಜೆ ಪ್ರಯತ್ನ ಪಡುತ್ತಿದ್ದಾನೆ. ಆದರೆ ಇನ್ನೂ ಶಾಕ್(Shock)ನಲ್ಲೇ ಇರುವ ಲೀಲಾಗೆ ಏಜೆ ನನ್ನ ಹೊಟೇಲ್‌ಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬುವುದೇ ಒಂದು ದೊಡ್ಡ ವಿಷಯ. ನೀನು ಹೊಟೇಲ್ ಒಳಗೆ ಹೋಗಿರು ನಾನು ಒಂದು ಕಾಲ್ ಮಾಡಿ ಅಲ್ಲಿಗೆ ಬರುತ್ತೇನೆ ಎಂದು ಏಜೆ ಆಚೆ ಬಂದಾಗ ಲೀಲಾಗೆ ಕೊಂಚ ಗಲಿಬಿಲಿಯಾಗುತ್ತದೆ. ಇಂಥಾ ಜಾಗಕ್ಕೆ ಮೊದಲ ಬಾರಿಗೆ ಬರುತ್ತಿರುವ ಲೀಲಾಗೆ ಏನು ಇಲ್ಲಿ ಅಂತ ಗೊತ್ತಿಲ್ಲ. ಏಜೆ ಮಾತ್ರ ನಾನಿಲ್ಲಿ ಎಲ್ಲಾ ಆರೆಂಜ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆ ಟೈಮಲ್ಲಿ ಒಬ್ಬ ವ್ಯಕ್ತಿ ಲೀಲಾನ ಮೇಡಂ ಬನ್ನಿ ಎಂದು ಕರೆದುಕೊಂಡು ಹೋಗುತ್ತಿದ್ದಾನೆ.
ಅಕ್ಟೋಬರ್ 21ಕ್ಕೆ ಹೆಡ್ ಬುಷ್; ಬಚ್ಚನ್ ಪುತ್ರ ಎಂಟ್ರಿ
ಹೀಗೆ ಒಂಟಿಯಾಗಿ ಹೋಟೇಲ್ ಒಳಗೆ ಹೋಗುವ ಲೀಲಾಗೆ ದೂರದಲ್ಲಿ ಕೂತು ಮಾತನಾಡುತ್ತಿರುವ ಗೀತಾ ಭಾರತಿ ಭಟ್ ಕಂಡು ಫುಲ್ ಎಕ್ಸೈಟ್ ಮೆಂಟ್(Excitment). ಅವಳಿಗೆ ಅವಳನ್ನೇ ನಂಬಲು ಸಾಧ್ಯವಾಗಲಿಲ್ಲ. ಕೈ ಗಿಂಡಿಕೊಂಡು ನೋಡಿದರೆ ಅದು ಕನಸಲ್ಲ. ಅವರಿಬ್ಬರ ಬಳಿ ಲೀಲಾ ಓಡಿ ಬಂದು ತನ್ನ ಎಕ್ಸೈಟ್‌ಮೆಂಟ್ ಅವರ ಮುಂದೆಯೂ ತೋರಿಸುತ್ತಾಳೆ. ಗೀತಾ ಮೇಡಂ , ಗುರು ಮೂರ್ತಿ ಸರ್. ನಾನು ನಿಮ್ಮಿಬ್ಬರ ದೊಡ್ಡ ಫ್ಯಾನ್(Fan) ಅಂತ ಹೇಳ್ತಾ ಪಟ ಪಟನೆ ಪಕ್ಕಾ ಫ್ಯಾನ್ ಶೈಲಿಯಲ್ಲಿ ತನ್ನ ಅಭಿಮಾನ ತೆರೆದಿಡುತ್ತಾಳೆ. ಇದನ್ನು ಕಂಡ ಗೀತಾ ಅವರಿಗೂ ಖುಷಿಯಾಗುತ್ತೆ. ನಾವು ಎಜೆ ಫ್ಯಾನ್, ನೀವು ಅವರ ಹೆಂಡತಿ. ನೀವು ಕೂಡ ದೊಡ್ಡ ಸೆಲೆಬ್ರೆಟಿಯೇ ಎಂದು ಹೇಳುತ್ತಾರೆ. ಆದರೆ ಲೀಲಾ ಇನ್ನೂ ಎಕ್ಸೈಟ್‌ಮೆಂಟ್‌ನಿಂದ ಹೊರಬಂದಿಲ್ಲ. ಅವಳಿಗೆ ತನ್ನ ಮೆಚ್ಚಿನ ಸೀರಿಯಲ್ ನಟಿಯನ್ನು ನೋಡಿ ಆ ಭಾವನೆಯಿಂದ ಹೊರಬರೋದಕ್ಕೇ ಆಗ್ತಾ ಇಲ್ಲ. ಅದೇ ಖುಷಿಯಲ್ಲಿ ತನಗೂ ಸೀರಿಯಲ್‌ನಲ್ಲಿ ನಟಿಸಲು ಆಸೆ. ಏನು ಮಾಡುವುದು ಮದುವೆ ಆಯ್ತು ಎಂದು ಕೊಂಚ ಬೇಸರಲ್ಲಿ ಹೇಳ್ತಾಳೆ. ಕೊನೆಗೆ ಎಲ್ಲ ಅಭಿಮಾನಿಗಳ ಹಾಗೆ ನಿಮ್ಮಿಬ್ಬರ ಜೊತೆ ಒಂದು ಫೋಟೋ ತೆಗೆಯಲೇ ಬೇಕು ಎಂದು ಹೇಳಿ ಮೊಬೈಲ್ ಪರ್ಸ್‌ನಿಂದ ತೆಗೆಯಲು ನೋಡುತ್ತಾಳೆ. ನೋಡಿದ್ರೆ ಮೊಬೈಲ್ ಇಲ್ಲ. ಆ ಖುಷಿಯಲ್ಲೂ ಸಣ್ಣ ನಿರಾಸೆ. ತನ್ನ ಮೂರ್ಖತನಕ್ಕೆ, ದುರಾದೃಷ್ಟಕ್ಕೆ ಸಿಟ್ಟು. ಇದನ್ನು ನೋಡಿ ಗೀತಾ ಭಟ್ ನಗುತ್ತಾರೆ.
ಇನ್ನೊಂದು ಕಡೆ ಲೀಲಾ ತಾಯಿ ಎಜೆ ಹಾಗೂ ಲೀಲಾ ಡಿವೋರ್ಸ್ ಗೆ ಲಾಯರ್ ಹತ್ರ ಮಾತಾಡಿದ್ದಾರೆ. ಈ ಡೀವೋರ್ಸ್ ನಿಂದ 80 ಕೋಟಿ ಬರುತ್ತೆ ಅನ್ನೋದನ್ನು ಕೇಳಿ ಅವರ ಸ್ವರ್ಗಕ್ಕೆ ಮೂರೇ ಗೇಣು, ಇದಕ್ಕೂ ಮೊದಲು ಚಂದ್ರಶೇಖರ್ ಮನೆಯಲ್ಲಿ ಮಿಕ್ಸಿ ರಿಪೇರಿ ಮಾಡುತ್ತಿರುತ್ತಾರೆ. ಇತ್ತ ಚಂದ್ರಶೇಖರ್ ಬಳಿ ಬಂದ ಲೀಲಾ ತಾಯಿ ಪೇಪರ್‌ನಲ್ಲಿ ಬಂದಿದ್ದ ಕಬೋರ್ಡ್ ಅದನ್ನೆಲ್ಲ ತೋರಿಸುತ್ತಾಳೆ. ಬಳಿಕ ಇದು ಚೆನ್ನಾಗಿದ್ಯಾ ಎಂದು ಕೇಳುತ್ತಾಳೆ. ಇದನ್ನು ನೋಡಿದ ಚಂದ್ರಶೇಖರ್ ಯಾಕೆ ಇದೆಲ್ಲ ತೋರಿಸುತ್ತಿದ್ದೀಯಾ ಎಂದು ಕೇಳುತ್ತಾರೆ. ಇದೆಲ್ಲ ಚೆನ್ನಾಗಿದೆ ಅಲ್ವಾ ಎಂದು ಹೇಳುತ್ತಾ ಮನದಲ್ಲಿಯೇ ಯೋಚಿಸುತ್ತಾಳೆ. ಇದೆಲ್ಲ ಇದ್ದರೆ ಎಷ್ಟು ಚೆಂದ? ಎಜೆಗೆ ವಿಚ್ಛೇದನ ಕೊಟ್ಟ ಮೇಲೆ 80 ಕೋಟಿ ರೂ. ಸಿಗುತ್ತೆ. ಆ ಮೇಲೆ ಇದನ್ನೆಲ್ಲ ತೆಗೆದುಕೊಳ್ಳಬೇಕು ಎಂದು ಮನದಲ್ಲಿಯೇ ಅಂದುಕೊಂಡು ಅಲ್ಲಿಂದ ತೆರಳುತ್ತಾಳೆ.
ಮತ್ತೆ ಬಂದ ಮಗಳು ಜಾನಕಿ: ಅಗಸ್ಟ್‌ನಿಂದ ನಿಮ್ಮ ಅಂಗೈಯಲ್ಲೇ ಟಿಎನ್‌ಎಸ್ ಕತೆ
ಇನ್ನೊಂದು ಕಡೆ ಲೀಲಾ ಫೋನ್ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ. ಇತ್ತ ಲಾಯರ್ ಲೀಲಾ ಮೊಬೈಲ್‌ಗೆ ಕಾಲ್ ಮಾಡಿ ನಿಮ್ಮ ವಿಚ್ಛೇದನ(Divorce)ದ ಪತ್ರ ರೆಡಿ ಆಗಿದೆ. ನಾಳೆ ಪೇಪರ್ ಮನೆಗೆ ಕಳಿಸಿಕೊಡುತ್ತೇನೆ ಎಂದು ಹೇಳುತ್ತಾರೆ. ಮೊಬೈಲ್ ಮನೆಯಲ್ಲಿ ಇದ್ದಿದ್ದುದರಿಂದ ಮೊಬೈಲನ್ನು ಮೂವರು ಸೊಸೆಯಂದಿರ ಬಳಿ ಇರುತ್ತದೆ. ಲಾಯರ್ ಹೇಳಿದ ಮಾತು ಕೇಳಿದ ಮೂವರು ಸೊಸೆಯಂದಿರಿಗೆ ಸಿಡಿಲೆರಗಿದಂತಾಗುತ್ತದೆ. ಲೀಲಾ ಹಾಗೂ ಎಜೆ ಮಧ್ಯೆ ವಿಚ್ಛೇದನವಾಗುತ್ತಾ? ಚಿಗುರುತ್ತಿರುವ ಎಜೆ ಪ್ರೀತಿ ಮೊಳಕೆಯಲ್ಲಿ ಚಿವುಟಿ ಹಾಕುತ್ತಾರಾ? ಇನ್ನೂ ಈ ವಿಚಾರ ಅಜ್ಜಿಗೆ ತಿಳಿದರೆ ಏನು ಗತಿ? ಅಮ್ಮ ಮಾಡಿದ ಎಡವಟ್ಟಿನಿಂದ ಮಗಳು ಪೇಚಿಗೆ ಸಿಲುಕುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
Davanagere: 777 ಚಾರ್ಲಿ ವೀಕ್ಷಣೆಗೆ ಡಯನಾಗೆ ಸಿಗಲಿಲ್ಲ ಅನುಮತಿ: ಪ್ರತಿಭಟಿಸಿದ ಮಾಲೀಕ
ಒಂದು ಕಡೆ ಪ್ರೀತಿಯ ಕಿಡಿ, ಇನ್ನೊಂದು ಕಡೆ ಡಿವೋರ್ಸ್ ಬೆಂಕಿ. ಇದು ಎಲ್ಲಿಗೆ ಹೋಗಿ ಮುಟ್ಟಬಹುದು ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.
