ಅಕ್ಟೋಬರ್‌ 21ಕ್ಕೆ ಹೆಡ್‌ ಬುಷ್‌ ಡಾಲಿ ಧನಂಜಯ್‌ ಚಿತ್ರದಲ್ಲಿ ಬಚ್ಚನ್‌ ಪುತ್ರ ನಟನೆ

ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಸಿನಿಮಾ ಅಕ್ಟೋಬರ್‌ 21ಕ್ಕೆ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಎಂದು ಹೇಳಲಾಗುತ್ತಿರುವ ಈ ಚಿತ್ರವಿದು. ದೀಪಾವಳಿ ಹಬ್ಬಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಅಗ್ನಿ ಶ್ರೀಧರ್‌ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶೂನ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ.

ಡಾಲಿ ಇಲ್ಲಿ ಜಯರಾಜ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಕ್ರೇಜಿಸ್ಟಾರ್‌ ರವಿಚಂದ್ರನ್‌, ಲೂಸ್‌ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್‌, ಶೃತಿ ಹರಿಹರನ್‌, ರಘು ಮುಖರ್ಜಿ, ಬಾಲು ನಾಗೇಂದ್ರ ಹೀಗೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ನಿರ್ದೇಶಕ ಶೂನ್ಯ ಅವರು ಈ ಮೊದಲು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಅವರ ಬಳಿ ಅಸೋಸಿಯೇಟ್‌ ಆಗಿದ್ದರು. ಅಲ್ಲದೆ ಫಿಲಂ ಮೇಕಿಂಗ್‌ ಕುರಿತು ಎಂಎಸ್ಸಿ , ಸಂಶೋಧನೆ ಕೂಡ ಮಾಡಿದ್ದಾರೆ. ಹೆಡ್‌ ಬುಷ್‌ ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನವಿದೆ. ಸುನೊಜ್‌ ವೇಲಾಯಧನ್‌ ಕ್ಯಾಮೆರಾ, ಬಾದಲ್‌ ನಂಜುಂಡಸ್ವಾಮಿ ಕಲೆ ಚಿತ್ರಕ್ಕಿದೆ. ಡಾಲಿ ಪಿಕ್ಚರ್ಸ್‌ ಹಾಗೂ ಸೋಮಣ್ಣ ಟಾಕೀಸ್‌ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.

ಕೆ ಕೆ ರಾಜಾ ಪಾತ್ರದಲ್ಲಿ ರೋಶನ್‌

ಅಂದಹಾಗೆ ಈ ಚಿತ್ರದಲ್ಲಿ ಬಚ್ಚನ್‌ ಅಲಿಯಾಸ್‌ ಸೈಯಾದ್‌ ಅಮಾನ್‌ ಬಚ್ಚನ್‌ ಅವರ ಪುತ್ರ ರೋಶನ್‌ ಕೆ ಕೆ ರಾಜಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಈಗಾಗಲೇ ಇಂಡಿಯನ್‌ ಅಥ್ಲೆಟಿಕ್‌ ಅಕಾಡೆಮಿ ಸ್ಥಾಪಿಸಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಕ್ರೀಡೆ ಜತೆಗೆ ಸಿನಿಮಾದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದ ರೋಶನ್‌, ತಮ್ಮ ತಂದೆಯ ದಿನಗಳ ಕತೆಯಲ್ಲಿ ಪ್ರಮುಖ ಪಾತ್ರ ಮಾಡುವ ಮೂಲಕ ನಟನೆಯತ್ತಲೂ ಮುಖ ಮಾಡಿದ್ದಾರೆ.

ಊಹಾಪೋಹ ಇಟ್ಕೊಂಡು ಅಜಿತ್ ಜಯರಾಜ್ ಮಾತನಾಬಾರದು ಸಾಕಷ್ಟು ಹಣ ಹಾಕಿದ್ದೀನಿ: ಧನಂಜಯ್

ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರತಂಡ ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ವಸಿಷ್ಠ ಸಿಂಹ, ಲೂಸ್ ಮಾದ ಯೋಗೀಶ್, ಶ್ರುತಿ ಹರಿಹರನ್, ಬಾಲು ನಾಗೇಂದ್ರ, ರಘು ಮುಖರ್ಜಿ ಚಿತ್ರದಲ್ಲಿ ನಟಿಸುತ್ತಿದ್ದು, ಇದನ್ನೊಂದು ಮಲ್ಟಿಸ್ಟಾರ್ ಸಿನಿಮಾ ಆಗಿಸುತ್ತಿದ್ದಾರೆ. ನಿರ್ದೇಶಕ ಶೂನ್ಯ. ಭೂಗತ ಲೋಕದ ಕತೆ ಇದಾಗಿದ್ದು, ಇಲ್ಲಿ ಧನಂಜಯ್ ಅವರು ಎಂ ಪಿ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕತೆ ಬರೆದಿದ್ದಾರೆ. ತೆಲುಗಿನ ‘ಆರ್‌ಎಕ್‌ಸ್ 100’ ಚಿತ್ರದ ನಾಯಕಿ ಪಾಯಲ್ ರಜಪೂತ್ ನಾಯಕಿಯಾಗಿ ನಟಿಸುತ್ತಿದ್ದಾರೆ.ಚಿತ್ರದ ಮೇಕಿಂಗ್ ಅದ್ದೂರಿಯಾಗಿ ಮೂಡಿ ಬರಲಿದ್ದು, ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಎರಡು ಕೋಟಿ ವೆಚ್ಚದಲ್ಲಿ ಸೆಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 70-80ರ ದಶಕದ ವಾತಾವರಣ ಮರು ಸೃಷ್ಟಿಸಲು ಕಲಾ ನಿರ್ದೇಶಕ ಬಾದಲ್ ನಂಜುಂಡಸ್ವಾಮಿ ವಿಶೇಷವಾದ ಸೆಟ್‌ಗಳನ್ನು ಹಾಕುತ್ತಿದ್ದಾರೆ.

"