ದೇಹದ ಒಂದು ಭಾಗದ ಸೌಂದರ್ಯಕ್ಕಾಗಿ ಟ್ರೈನರ್ ನೇಮಿಸಿದ ಮಾಡೆಲ್, ಮಾಸಿಕ 3 ಲಕ್ಷ ರೂ ಸ್ಯಾಲರಿ
ಈ ಮಾಡೆಲ್ ತನ್ನ ದೇಹದ ಒಂದು ಭಾಗದ ಸೌಂದರ್ಯಕ್ಕಾಗಿ ಮಾತ್ರ ಟ್ರೈನರ್‌ನ್ನು ನೇಮಿಸಿಕೊಂಡಿದ್ದಾಳೆ. ಪ್ರತಿ ತಿಂಗಳು ಈ ಟ್ರೈನರ್‌ಗೆ 3 ಲಕ್ಷ ರೂಪಾಯಿ ಪಾವತಿಸುತ್ತಿದ್ದಾಳೆ.
ಸಾವೋ ಪೌಲೋ(ಜ.09) ಮಾಡೆಲ್, ನಟ ನಟಿಯರು, ಸೆಲೆಬ್ರೆಟಿಗಳು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳು, ಯಂಗ್ ಆಗಿ ಕಾಣಲು ವೈಯುಕ್ತಿಕ ತರಬೇತಿದಾರರನ್ನು ಇಟ್ಟುಕೊಂಡಿರುತ್ತಾರೆ. ಜಿಮ್ ವರ್ಕೌಟ್, ಡಯೆಟ್ ಎಲ್ಲವನ್ನೂ ಅಚ್ಚುಕಟ್ಟಾಗಿ ಅನುಸರಿಸುತ್ತಾರೆ. ಇದು ಹೊಸ ವಿಚಾರವಲ್ಲ. ಆದರೆ ಇಲ್ಲೊಬ್ಬ ಮಾಡೆಲ್ ಪ್ರತಿ ಜಿಮ್, ಅಭ್ಯಾಸ, ವ್ಯಾಯಾಮ ಎಲ್ಲವನ್ನು ಮಾಡುತ್ತಾಳೆ.ಆದರೆ ತನ್ನ ದೇಹದ ಒಂದು ಭಾಗದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಹಾಗೂ ಸೌಂದರ್ಯ ವೃದ್ಧಿಗೆ ಟ್ರೈನರ್ ನೇಮಿಸಿಕೊಂಡಿದ್ದಾಳೆ. ಈ ಟ್ರೈನರ್ ಮಾಡೆಲ್‌ನ ಒಂದೇ ಭಾಗದ ಬಗ್ಗೆ ಮಾತ್ರ ನಿಗಾವಹಿಸಬೇಕು. ಇದಕ್ಕಾಗಿ ಪ್ರತಿ ತಿಂಗಳು ಟ್ರೈನರ್‌ಗೆ 3 ಲಕ್ಷ ರೂಪಾಯಿ ಪಾವತಿಸುತ್ತಿದ್ದಾಳೆ.
ಬ್ರಿಜೆಲ್‌ನ ಮಾಡೆಲ್ ಕರೋಲ್ ರೊಸಾಲಿನ್ ಮತ್ತೆ ಸುದ್ದಿಯಲ್ಲಿದ್ದಾಳೆ. 25 ವರ್ಷದ ಈ ಮಾಡೆಲ್ ತನ್ನ ಸೊಂಟ ಹಾಗೂ ಪೃಷ್ಠ ಭಾಗ ಹೆಚ್ಚು ಆಕರ್ಷಕವಾಗಿ ಕಾಣಬೇಕು ಅನ್ನೋದು ಈಕೆಯ ಗುರಿ. ಇದಕ್ಕಾಗಿ ಈ ಭಾಗದ ಸೌಂದರ್ಯ ವೃದ್ಧಿ, ಫಿಟ್ನೆಸ್ ಕಾಪಾಡಿಕೊಳ್ಳಲು ವೈಯುಕ್ತಿಕ ತರಬೇತಿದಾರರನ್ನು ನೇಮಿಸಿಕೊಂಡಿದ್ದಾಳೆ. ಈ ಟ್ರೈನರ್ ಇದೀಗ ಪ್ರತಿ ದಿನ ಕರೋಲ್ ರೋಸಾಲಿನ್ ಯಾವ ರೀತಿ ಜಿಮ್ ವರ್ಕೌಟ್ ಮಾಡಬೇಕು ಅನ್ನೋ ತರಬೇತಿ ನೀಡುತ್ತದ್ದಾರೆ. ದೇಹದ ಈ ಭಾಗದ ಸೌಂದರ್ಯ ಕಾಪಾಡಿಕೊಂಡು ಮತ್ತಷ್ಟು ಆಕರ್ಷಕವಾಗಿ ಕಾಣಲು ಏನು ಮಾಡಬೇಕು, ಯಾವ ರೀತಿ ವರ್ಕೌಟ್ ಮಾಡಬೇಕು ಅನ್ನೋ ಸ್ಪಷ್ಟ ಸೂಚನೆ ಲಿಸ್ಟ್ ತಯಾರಿಸಲಾಗಿದೆ.
ಬ್ಯಾಂಡೇಜನ್ನೇ ಹೀಲ್ಸ್ ಮಾಡಿದ್ರಾ ನಟಿ ಕಿಮ್ ಕರ್ದಾಶಿಯನ್? ಹೊಸ ಫ್ಯಾಶನ್ ಟ್ರೆಂಡ್
ಪ್ರತಿ ದಿನ ಟ್ರೈನರ್ ಈಕೆಯ ಜಿಮ್ ವರ್ಕೌಟ್ ಸಮಯದಲ್ಲಿ ಹಾಜರಿರುತ್ತಾರೆ. ಬಳಿಕ ಈ ಮಾಡೆಲ್ ಸೌಂದರ್ಯ ವೃದ್ಧಿಗೆ ಟ್ರೈನರ್ ಮಾರ್ಗದರ್ಶನದಂತೆ ವರ್ಕೌಟ್ ಮಾಡುತ್ತಿದ್ದಾಳೆ. ಇಷ್ಟೇ ಅಲ್ಲ ಯಾವೆಲ್ಲಾ ಆಹಾರ ತಿನ್ನಬೇಕು, ಎಷ್ಟು ತಿನ್ನಬೇಕು ಅನ್ನೋ ಪಟ್ಟಿಯನ್ನು ನೀಡಲಾಗಿದೆ. ಬೆಳಗ್ಗೆ ಜಿಮ್‌ಗೆ ಮೊದಲು, ಜಿಮ್ ಬಳಿಕ, ಬೆಳಗ್ಗೆ 11 ಗಂಟೆಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಯಾವೆಲ್ಲಾ ಆಹಾರ ಸೇವಿಸಬೇಕು ಅನ್ನೋ ಪಟ್ಟಿಯನ್ನು ನೀಡಲಾಗಿದೆ. ಒಂದೇ ಭಾಗದ ಮೇಲೆ ಮಾತ್ರ ಗಮನಕೇಂದ್ರಿಕರಿಸಲು ಸೂಚಿಸಲಾಗಿದೆ. ಇನ್ನುಳಿದ ಭಾಗದ ಕುರಿತು ಕಾಳಜಿಯನ್ನು ಸ್ವತಃ ಕರೋಲ್ ರೋಸಾಲಿನ್ ನೋಡಿಕೊಳ್ಳುತ್ತಿದ್ದಾಳೆ. ತನ್ನ ದೇಹದಲ್ಲಿ ಅತ್ಯಂತ ಸೌಂದರ್ಯದ ಭಾಗ ಸೊಂಟ ಹಾಗೂ ಪೃಷ್ಠ ಎಂದು ಈಕೆ ಹಲವು ಬಾರಿ ಹೇಳಿಕೊಂಡಿದ್ದಾಳೆ.
ಕರೋಲ್ ರೋಸಾಲಿನ್ ಬ್ರೆಜಿಲ್‌ನ ಅತ್ಯಂತ ಜನಪ್ರಿಯ ಮಾಡೆಲ್. ಬ್ರಿಜೆಲ್ ಮಾತ್ರವಲ್ಲ ಹಲವು ದೇಶಗಳಲ್ಲಿ ಈಕೆ ಜನಪ್ರಿಯವಾಗಿದ್ದಾಳೆ. ಇತ್ತೀಚೆಗೆ ರೋಸಾಲಿನ್ ಸೌಂದರ್ಯ ಪ್ರಜ್ಞೆ ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣವೂ ಇದೆ. ಇತ್ತೀಚೆಗೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ರೋಸಾಲಿನ್‌ಗೆ ವಿಶೇಷ ಗರಿಮೆ ನೀಡಿತ್ತು. ಅತ್ಯುತ್ತ ಸೌಂದರ್ಯ ದೇಹ ಹೊಂದಿರುವ ಮಹಿಳೆ ಅನ್ನೋ ಬಿರುದನ್ನು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಇದೇ ಕರೋಲ್ ರೋಸಾಲಿನ್‌ಗೆ ನೀಡಿತ್ತು. ಆಸ್ಟ್ರೇಲಿಯಾದ ಎಐ ಸಂಸ್ಥೆ ಈ ಬಿರುದನ್ನು ಮಾಡೆಲ್ ರೋಸಾಲಿನ್‌ಗೆ ನೀಡಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರೋಸಾಲಿನ್, ಇದು ಕಠಿಣ ಪರಿಶ್ರಮ, ಆರೋಗ್ಯದ ಬಗ್ಗೆ ಕಾಳಜಿ, ಸೌಂದರ್ಯ ಪ್ರಜ್ಞೆಯಿಂದ ಸಾಧ್ಯವಾಗಿದೆ. ಫಿಟ್ನೆಲ್ ಕಾಪಾಡಿಕೊಳ್ಳುವುದು ಸವಾಲು. ಒಂದು ದಿನ ವಿರಾಮ ಪಡೆದುಕೊಂಡರೆ ಬಳಿಕ ಫಿಟ್ನೆಸ್ ಮೊದಲಿನ ರೀತಿ ತರಲು ಸಾಧ್ಯವಾಗುವುದಿಲ್ಲ. ಫಿಟ್ನೆಸ್ ಜೊತೆ ಸೌಂದರ್ಯವನ್ನೂ ಕಾಪಾಡಿಕೊಳ್ಳುತ್ತಿದ್ದೇನೆ. ಇದಕ್ಕಾಗಿ ನಿಯಮಿತ ಆಹಾರ, ತಜ್ಞರು ಸೂಚಿಸಿದ ಡೆಯೆಟ್ ಪ್ಲಾನ್ ಅನುಸರಿಸುತ್ತಿದ್ದೇನೆ ಎಂದಿದ್ದರು. ಫಿಟ್ನೆಸ್ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಇದೀಗ ಫಿಟ್ನೆಸ್ ದುಬಾರಿ ವಿಚಾರ ಎಂದಿದ್ದಾರೆ. ಪ್ರತಿ ದಿನ ಪರಿಶ್ರಮ ಫತಿಫಲ ನೀಡಿದೆ ಎಂದಿದ್ದಾರೆ.
ಕಾಲ ಭೈರವ ದೇಗುಲದ ಗರ್ಭಗುಡಿಯಲ್ಲಿ ಕೇಕ್ ಕತ್ತರಿಸಿದ ಮಾಡೆಲ್ ವಿರುದ್ದ ಭಕ್ತರ ಆಕ್ರೋಶ!