Asianet Suvarna News Asianet Suvarna News

Bigg Boss OTT: ಟಾಪರ್‌ ಆದ ರೂಪೇಶ್​ ಶೆಟ್ಟಿ ಗೆದ್ದ ಬಹುಮಾನದ ಮೊತ್ತವೆಷ್ಟು?


ಬಿಗ್​ ಬಾಸ್​ ಕನ್ನಡ ಒಟಿಟಿ  ಶೋಗೆ ಗ್ರ್ಯಾಂಡ್ ತೆರೆ ಬಿದ್ದಿದೆ. ಶುಕ್ರವಾರ (ಸೆಪ್ಟಂಬರ್ 16) ಸಂಜೆ ಅದ್ದೂರಿಯಾಗಿ ನಡೆದ ಫಿನಾಲೆಯಲ್ಲಿ ರೂಪೇಶ್ ಶೆಟ್ಟಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 42 ದಿನಗಳ ಕಾಲ ನಡೆದ ಬಿಗ್ ಬಾಸ್ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಫಿನಾಗೆ 4 ಮಂದಿ ಎಂಟ್ರಿ ಕೊಟ್ಟಿದ್ದಾರೆ. 

roopesh shetty became topper of bigg boss ott kannada and get 5 lakh sgk
Author
First Published Sep 17, 2022, 10:34 AM IST

ಬಿಗ್​ ಬಾಸ್​ ಕನ್ನಡ ಒಟಿಟಿ ಶೋಗೆ ಗ್ರ್ಯಾಂಡ್ ತೆರೆ ಬಿದ್ದಿದೆ. ಶುಕ್ರವಾರ (ಸೆಪ್ಟಂಬರ್ 16) ಸಂಜೆ ಅದ್ದೂರಿಯಾಗಿ ನಡೆದ ಫಿನಾಲೆಯಲ್ಲಿ ರೂಪೇಶ್ ಶೆಟ್ಟಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 42 ದಿನಗಳ ಕಾಲ ನಡೆದ ಬಿಗ್ ಬಾಸ್ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಫಿನಾಗೆ 4 ಮಂದಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಒಟಿಟಿಯಲ್ಲಿ ಎಲ್ಲರ ನಡುವೆ ಸಖತ್​ ಪೈಪೋಟಿ ಇತ್ತು. ಇವರಲ್ಲಿ ಕೊನೆಗೂ ನಾಲ್ಕು ಜನರು ಬಿಗ್​ ಬಾಸ್​ ಕನ್ನಡ ಸೀಸನ್​ 9ರಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ನಾಲ್ವರಲ್ಲಿ ರೂಪೇಶ್​ ಶೆಟ್ಟಿ ಅವರು ಟಾಪರ್​ ಆಗಿದ್ದಾರೆ. ಟಾಪರ್ ಆದ ರೂಪೇಶ್ 5 ಲಕ್ಷ ರೂಪಾಯಿ ಗೆದ್ದಿದ್ದಾರೆ. ಕೊನೇ ವಾರದಲ್ಲಿ ವಿಶೇಷ ಟಾಸ್ಕ್​ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್​ ಪರ್ಫಾರ್ಮೆನ್ಸ್​ ನೀಡುವ ಮೂಲಕ ರೂಪೇಶ್​ ಶೆಟ್ಟಿ ಅವರು ಈ ಬಹುಮಾನದ ಮೊತ್ತ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಅವರ ಜೊತೆಗೆ ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್​ ಹಾಗೂ ಆರ್ಯವರ್ಧನ್​ ಗುರೂಜಿ ಕೂಡ ಟಿವಿ ಸೀಸನ್​ಗೆ ನೇರ ಟಿಕೆಟ್​ ಪಡೆದುಕೊಂಡಿದ್ದಾರೆ.

ತಮ್ಮದೇ ರೀತಿಯಲ್ಲಿ ರೂಪೇಶ್​ ಶೆಟ್ಟಿ ಅವರು ಗುರುತಿಸಿಕೊಂಡಿದ್ದರು. ಸಾನ್ಯಾ ಐಯ್ಯರ್​ ಜೊತೆಗೆ ಅವರು ಹೆಚ್ಚು ಆಪ್ತವಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಮತ್ತು ಸಾನ್ಯಾ ಜೋಡಿ ವೈರಲ್ ಆಗಿದೆ. ಅಂದಹಾಗೆ ರೂಪೇಶ್ ಹೆಚ್ಚು ಕಿರಿಕ್​ ಮಾಡಿಕೊಂಡಿದ್ದು ಸಹ ಕಡಿಮೆ. ಸಾಧ್ಯವಾದಷ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರದ್ದಾಗಿತ್ತು. ಈ ಎಲ್ಲಾ ಕಾರಣದಿಂದಾಗಿ ಅವರು ಜನರ ಹೃದಯ ಗೆದ್ದಿದ್ದಾರೆ. ಹೆಚ್ಚು ವೋಟ್​ ಪಡೆಯುವ ಮೂಲಕ ಟಾಪರ್​ ಸ್ಥಾನ ಗಳಿಸಿದ್ದಾರೆ.

ಸದ್ಯ ಬಿಗ್ ಬಾಸ್ ಒಟಿಟಿ ಶೋ ಮುಕ್ತಾಯವಾಗಿದೆ. ಬೆನ್ನಲ್ಲೇ ಟಿವಿ ಬಿಗ್ ಪ್ರಾರಂಭವಾಗುತ್ತಿದೆ. ಹೌದು, ಬಿಗ್​ ಬಾಸ್​ ಕನ್ನಡ ಸೀಸನ್​ 9 ಶೋ ಸೆಪ್ಟೆಂಬರ್​ 24ರಿಂದ ಆರಂಭ ಆಗಲಿದೆ. ಅದನ್ನು ಕೂಡ ಕಿಚ್ಚ ಸುದೀಪ್​ ಅವರೇ ನಡೆಸಿಕೊಡಲಿದ್ದಾರೆ. ಬಿಗ್​ ಬಾಸ್​ ಕನ್ನಡ ಒಟಿಟಿ ಫಿನಾಲೆಯಲ್ಲಿ ಗೆದ್ದ ರೂಪೇಶ್​ ಶೆಟ್ಟಿ, ಸಾನ್ಯಾ ಐಯ್ಯರ್​, ಆರ್ಯವರ್ಧನ್​ ಗುರೂಜಿ ಹಾಗೂ ರಾಕೇಶ್​ ಅಡಿಗ ಜೊತೆಯಲ್ಲಿ ಹಳೇ ಸೀಸನ್​ನ 5 ಸ್ಪರ್ಧಿಗಳು ಕೂಡ 9ನೇ ಸೀಸನ್​ಗೆ ಎಂಟ್ರಿ ನೀಡಲಿದ್ದಾರೆ. ಅವರ ಜೊತೆ 9 ಹೊಸ ಸ್ಪರ್ಧಿಗಳಿಗೆ ಅವಕಾಶ ಸಿಗುತ್ತಿದೆ. ಅವರೆಲ್ಲರ ನಡುವೆ ರೂಪೇಶ್​ ಶೆಟ್ಟಿ ಅವರು ಯಾವ ರೀತಿ ಗುರುತಿಸಿಕೊಳ್ಳಲಿದ್ದಾರೆ ಎಂಬ ಕೌತುಕ ಮೂಡಿದೆ.


ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್, ಆರ್ಯವರ್ಧನ್, ರೂಪೇಶ್ ಸೇರಿ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿಗೆ ಎಂಟ್ರಿ!

ನಟನಾಗಿ, ಆರ್​ಜೆ ಆಗಿ ರೂಪೇಶ್​ ಶೆಟ್ಟಿ ಫೇಮಸ್​. ಬಿಗ್​ ಬಾಸ್​ ಕನ್ನಡ ಒಟಿಟಿ ಶೋಗೆ ಬಂದ ಬಳಿಕ ಅವರಿಗೆ ಇನ್ನಷ್ಟು ಜನಪ್ರಿಯತೆ ಸಿಕ್ಕಿದೆ. ಟಾಪರ್ ಆಗಿರುವ ರೂಪೇಶ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

BBK9; ಬಿಗ್‌ಬಾಸ್‌ ಕನ್ನಡ 9 ನೇ ಸೀಸನ್ ಶೀಘ್ರವೇ ಆರಂಭ, ವೀಕ್ಷಕರಿಗೆ ಕಿಕ್‌ ಕೊಟ್ಟ ಮೊದಲ ಪ್ರೋಮೋ

ಬಿಗ್ ಮನೆಗೆ ಎಂಟ್ರಿ ಕೊಟ್ಟ ಒಟ್ಟು ಸ್ಪರ್ಧಿಗಳು 

ಬಿಗ್ ಬಾಸ್ ಒಟಿಟಿ ಮನೆಗೆ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನ್ಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್.  

Follow Us:
Download App:
  • android
  • ios