ವರಮಹಾಲಕ್ಷ್ಮಿ ಉತ್ಸವದ ಊಟ ವೇಸ್ಟ್ ಮಾಡ್ತಿರೋ ಬ್ರಹ್ಮಗಂಟು ನಟಿಯರು! ವಿಡಿಯೋಗೆ ನೆಟ್ಟಿಗರಿಂದ ಕ್ಲಾಸ್
ದಾವಣಗೆರೆಯಲ್ಲಿ ನಡೆದ ಬ್ರಹ್ಮಗಂಟು ಮತ್ತು ಶ್ರಾವಣಿ ಸುಬ್ರಹ್ಮಣ್ಯ ವರಮಹಾಲಕ್ಷ್ಮಿ ಉತ್ಸವದಲ್ಲಿ ನಟಿಯರು ಊಟ ವೇಸ್ಟ್ ಮಾಡಿದ್ದು, ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಇಂದು ಸೀರಿಯಲ್ಗಳು ಎಂದರೆ ಅದು ಕೇವಲ ಸೀರಿಯಲ್ಗಳಾಗಿ ಉಳಿದಿಲ್ಲ. ಬಹುತೇಕ ಮಂದಿ ಇದನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ ಅಂದೇ ಅಂದುಕೊಂಡಿದ್ದಾರೆ. ಅಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿರದೇ ನಿಜ ಜೀವನ ಅಂದುಕೊಳ್ಳುವವರು ಇದ್ದಾರೆ. ಇದೇ ಕಾರಣಕ್ಕೆ ಎಷ್ಟೋ ಸೀರಿಯಲ್ಗಳು ಇಂದು ಹಲವರಿಗೆ ದಾರಿದೀಪಗಳಾಗಿವೆ. ಅಲ್ಲಿರುವುದನ್ನೇ ಅನುಸರಿಸುತ್ತಾರೆ. ಕೆಲವೊಂದು ನಟ-ನಟಿಯರನ್ನು ತಮ್ಮ ಆದರ್ಶ ಎಂದುಕೊಂಡುಬಿಡುತ್ತಾರೆ. ಇದೇ ಕಾರಣಕ್ಕೆ ಸೀರಿಯಲ್ಗಳಲ್ಲಿ ಏನೇ ಎಡವಟ್ಟು ಆದರೂ ಅದು ಕೇವಲ ಧಾರಾವಾಹಿ ಎನ್ನುವುದನ್ನು ಮರೆತು ಬೈಯುವುದು ಉಂಟು. ಇನ್ನು ವಿಲನ್ ಪಾತ್ರಧಾರಿಗಳು ಹೊರಗಡೆ ಹೋದಾಗ ಜನರು ಅವರನ್ನು ನಿಜವಾದ ವಿಲನ್ಗಳೇ ಅಂದುಕೊಂಡು ಛೀಮಾರಿ ಹಾಕುವುದೂ ಇದೆ.
ಕೆಲ ದಿನಗಳ ಹಿಂದೆ ಬ್ರಹ್ಮಗಂಟು ಮತ್ತು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ತಾರೆಯರು ದಾವಣಗೆರೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎರಡೂ ಸೀರಿಯಲ್ ನಾಯಕ-ನಾಯಕಿಯರ ಭರ್ಜರಿ ಡಾನ್ಸ್ ನಡೆದಿತ್ತು. ಜೊತೆಗೆ ವೀಕ್ಷಕರ ಜೊತೆ ಒಂದಿಷ್ಟು ಮನರಂಜನೆ ಕೈಗೊಳ್ಳಲಾಗಿತ್ತು. ಧಾರಾವಾಹಿಗಳ ವೀಕ್ಷಕರು ತಮ್ಮ ಈ ಸೀರಿಯಲ್ಗಳನ್ನು ಹೇಗೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿಯುವುದಕ್ಕಾಗಿ ಹಾಗೂ ಸೀರಿಯಲ್ ಪ್ರಮೋಷನ್ಗಾಗಿ ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಹಿಂದೆ ಕೂಡ ಹಲವಾರು ಸೀರಿಯಲ್ಗಳು ಇದೇ ರೀತಿ ಒಂದೊಂದು ಊರುಗಳಲ್ಲಿ ಸೀರಿಯಲ್ ಸಂತೆ ಕಾರ್ಯಕ್ರಮ ಆಯೋಜಿಸುವುದು ರೂಢಿ. ಅದರಂತೆಯೇ ದಾವಣಗೆರೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ ಆಚರಿಸಲಾಗಿತ್ತು.
ಸೇಮ್-ಟು-ಸೇಮ್ ಡ್ರೆಸ್ನಲ್ಲಿ ಮಿಂಚಿದ ಸೀತಾ- ಶ್ರಾವಣಿ! ಇವರಿಬ್ಬರ ಸಂಬಂಧವಾದ್ರೂ ಏನು?
ಈ ಕಾರ್ಯಕ್ರಮ ಮುಗಿದ ಬಳಿಕ ಸೀರಿಯಲ್ ನಟಿಯರಿಗೆ ಭರ್ಜರಿ ಭೋಜನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಬ್ರಹ್ಮಗಂಟು ನಾಯಕಿ ದೀಪಾ, ವಿಲನ್ ಸೌಂದರ್ಯ ಸೇರಿದಂತೆ ಹಲವು ನಟಿಯರನ್ನು ಒಳಗೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಮೊದಲಿಗೆ ದೀಪಾ ಪಾತ್ರಧಾರಿ ಊಟ ಮುಗಿಸಿ ಬರುತ್ತಿದ್ದಾಗ ವಿಡಿಯೋಗಳಿಗೆ ಪೋಸ್ ಕೊಟ್ಟಿದ್ದಾರೆ. ಅದೇ ಸಮಯದಲ್ಲಿ ಅತ್ತ ಇತರ ನಟಿಯರನ್ನು ತೋರಿಸುವಾಗ ಹೆಚ್ಚಿನವರು ಬಾಳೆ ಎಲೆಯಲ್ಲಿ ಊಟ ವೇಸ್ಟ್ ಮಾಡಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ನೆಟ್ಟಿಗರು ನಟಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೆಲ್ಲಾ ಊಟ ಯಾಕೆ ವೇಸ್ಟ್ ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ನಿಮ್ಮನ್ನು ಅನುಸರಿಸುವ ದೊಡ್ಡ ವರ್ಗವೇ ಇದೆ. ನೀವು ಈ ರೀತಿ ಮಾಡುವುದು ಸರಿಯಲ್ಲ ಎಂದು ಹಲವರು ಹೇಳುತ್ತಿದ್ದಾರೆ.
ಬ್ರಹ್ಮಗಂಟು ಸೀರಿಯಲ್ ಕುರಿತು ಹೇಳುವುದಾದರೆ, ಸ್ಫುರದ್ರೂಪಿ ಎನಿಸಿರುವ ಅಕ್ಕನನ್ನು ಮದುವೆಯಾಗುವ ಕನಸು ಹೊತ್ತಿದ್ದ ನಾಯಕ, ಸುಂದರವಲ್ಲದ ತಂಗಿಯನ್ನು ಮದುವೆಯಾಗುವ ಸ್ಥಿತಿ ಬಂದಿದೆ. ಆದರೆ ಈಕೆ ಸುಂದರವಾಗಿಲ್ಲ ಎನ್ನುವ ಒಂದೇಕಾರಣಕ್ಕೆ ಮನೆಯವರೆಲ್ಲರೂ ಈಕೆಯನ್ನು ಹೀಯಾಳಿಸುತ್ತಿದ್ದಾರೆ, ಕ್ಷಣ ಕ್ಷಣಕ್ಕೂ ಆಕೆಯ ಮೇಲೆ ಸವಾರಿ ಮಾಡುವುದೇ ಆಗಿದೆ. ನಾಯಕ ಕೂಡ ಮನೆಯವರ ಮಾತು ಕೇಳಿ ಪತ್ನಿಯ ಸಮೀಪ ಹೋಗುವುದಿಲ್ಲ. ಪತ್ನಿಯ ರೂಪ ನೋಡಿಆತನಿಗೂ ಆಕೆಯಂದರೆ ಅಸಹ್ಯ ಮಾಡುತ್ತಾನೆ. ಒಳ್ಳೆಯ ಮನಸ್ಸಿನ ಮುಗ್ಧ ಹುಡುಗಿಯಾಗಿರುವ ನಾಯಕಿ ದೀಪಾಳ ಮೇಲೆ ವೀಕ್ಷಕರಿಗಂತೂ ಕರುಣೆ. ಆಕೆಯ ಒಳ್ಳೆಯ ಗುಣ ಆಕೆಯ ಬಾಹ್ಯ ರೂಪದ ನಡುವೆ ವೀಕ್ಷಕರಿಗೆ ಕಾಣಿಸುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದೆ. ಇನ್ನು ಶ್ರಾವಣಿ ಸುಬ್ರಹ್ಮಣದ ಕುರಿತು ಹೇಳುವುದಾದರೆ, ಇಲ್ಲಿ ಕಥಾನಾಯಕಿ ಶ್ರಾವಣಿ ತಂದೆಯ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾಳೆ. ಅಪ್ಪ ಯಾವಾಗ ತನ್ನನ್ನು ಒಪ್ಪಿಕೊಳ್ಳುತ್ತಾರೆ, ರಾಜಕಾರಣಿಯಾಗಿರೋ ಅಪ್ಪನ ಪ್ರೀತಿ ಸಿಗಬಹುದು ಎಂಬ ಆಸೆಯ ಕಣ್ಣುಗಳಿಂದಲೇ ಕಾಯುತ್ತಿದ್ದಾಳೆ ಶ್ರಾವಣಿ. ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿದ್ದಾಳೆ ಶ್ರಾವಣಿ.
ಏನ್ರೀ ನಿಮ್ಗೆ ಸ್ವಂತ ಬುದ್ಧಿ ಇಲ್ವಾ? ಮಹಿಳೆ ಕೋಪಕ್ಕೆ ಬ್ರಹ್ಮಗಂಟು ನಾಯಕ ಚಿರಾಗ್ ಕಕ್ಕಾಬಿಕ್ಕಿ!