Asianet Suvarna News Asianet Suvarna News

ಏನ್ರೀ ನಿಮ್ಗೆ ಸ್ವಂತ ಬುದ್ಧಿ ಇಲ್ವಾ? ಮಹಿಳೆ ಕೋಪಕ್ಕೆ ಬ್ರಹ್ಮಗಂಟು ನಾಯಕ ಚಿರಾಗ್​ ಕಕ್ಕಾಬಿಕ್ಕಿ!

ಬ್ರಹ್ಮಗಂಟು ಮತ್ತು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್​ ತಾರೆಯರಿಂದ ದಾವಣಗೆರೆಯಲ್ಲಿ ಮನರಂಜನೆಯ ಮಹಾಮೇಳ ನಡೆದಿದ್ದು, ಅಭಿಮಾನಿಗಳು ಏನು ಪ್ರಶ್ನೆ ಕೇಳಿದ್ರು ನೋಡಿ...
 

Brahmagantu Shravani Subrahmanya stars held an entertainment megamela in Davangere suc
Author
First Published Aug 10, 2024, 1:08 PM IST | Last Updated Aug 10, 2024, 1:08 PM IST

ಇಂದು ಸೀರಿಯಲ್​ಗಳು ಎಂದರೆ ಅದು ಕೇವಲ ಸೀರಿಯಲ್​ಗಳಾಗಿ ಉಳಿದಿಲ್ಲ. ಬಹುತೇಕ ಮಂದಿ ಇದನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ ಅಂದೇ ಅಂದುಕೊಂಡಿದ್ದಾರೆ. ಅಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿರದೇ ನಿಜ ಜೀವನ ಅಂದುಕೊಳ್ಳುವವರು ಇದ್ದಾರೆ. ಇದೇ ಕಾರಣಕ್ಕೆ ವಿಲನ್​ ಪಾತ್ರಧಾರಿಗಳು ಹೊರಗಡೆ ಹೋದಾಗ ಜನರು ಅವರನ್ನು ನಿಜವಾದ ವಿಲನ್​ಗಳೇ ಅಂದುಕೊಂಡು ಛೀಮಾರಿ ಹಾಕುವುದೂ ಇದೆ. ಅದೇ ರೀತಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್​ನ ನಾಯಕನಿಗೂ ಆಗಿದೆ. ಅಷ್ಟಕ್ಕೂಬ್ರಹ್ಮಗಂಟು ಮತ್ತು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್​ ತಾರೆಯರು ದಾವಣಗೆರೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಎರಡೂ ಸೀರಿಯಲ್​ ನಾಯಕ-ನಾಯಕಿಯರ ಭರ್ಜರಿ ಡಾನ್ಸ್​ ನಡೆದಿದೆ. ಜೊತೆಗೆ ವೀಕ್ಷಕರ ಜೊತೆ ಒಂದಿಷ್ಟು ಮನರಂಜನೆ ಮಾಡಲಾಗಿದೆ. ವೀಕ್ಷಕರು ತಮ್ಮ ಈ ಸೀರಿಯಲ್​ಗಳನ್ನು ಹೇಗೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿಯುವುದಕ್ಕಾಗಿ ಹಾಗೂ ಸೀರಿಯಲ್​ ಪ್ರಮೋಷನ್​ಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಹಿಂದೆ ಕೂಡ ಹಲವಾರು ಸೀರಿಯಲ್​ಗಳು ಇದೇ ರೀತಿ ಒಂದೊಂದು ಊರುಗಳಲ್ಲಿ ಸೀರಿಯಲ್​ ಸಂತೆ ಕಾರ್ಯಕ್ರಮ ಆಯೋಜಿಸುವುದು ರೂಢಿ.

ಹೆಜ್ಜೆಹೆಜ್ಜೆಗೂ ಬಾಡಿಶೇಮಿಂಗ್​ ಅನುಭವಿಸ್ತಿರೋ ಬ್ರಹ್ಮಗಂಟು ನಾಯಕಿ ದೀಪಾ ನಿಜಜೀವನ ಗೊತ್ತಾ?

ಇದೇ ವೇಳೆ ಶ್ರಾವಣಿ ಸುಬ್ರಹ್ಮಣ್ಯ ನಾಯಕ- ನಾಯಕಿ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದರೆ, ಬ್ರಹ್ಮಗಂಟು ಸೀರಿಯಲ್​ ನಾಯಕ-ನಾಯಕಿಯೂ ಕಾಣಿಸಿಕೊಂಡಿದ್ದಾರೆ. ಆದರೆ ಬ್ರಹ್ಮಗಂಟುವಿನಲ್ಲಿ ಸದ್ಯದ ಮಟ್ಟಿಗೆ ನಾಯಕನೇ ಪತ್ನಿಯಾಗಿರುವ ನಾಯಕಿಗೆ ವಿಲನ್​ ರೀತಿಯಲ್ಲಿ ಕಾಣಿಸುತ್ತಿದ್ದಾರೆ. ಸ್ಫುರದ್ರೂಪಿ ಎನಿಸಿರುವ ಅಕ್ಕನನ್ನು ಮದುವೆಯಾಗುವ ಕನಸು ಹೊತ್ತಿದ್ದ ನಾಯಕ, ಸುಂದರವಲ್ಲದ ತಂಗಿಯನ್ನು ಮದುವೆಯಾಗುವ ಸ್ಥಿತಿ ಬಂದಿದೆ. ಆದರೆ ಈಕೆ ಸುಂದರವಾಗಿಲ್ಲ ಎನ್ನುವ ಒಂದೇಕಾರಣಕ್ಕೆ ಮನೆಯವರೆಲ್ಲರೂ ಈಕೆಯನ್ನು ಹೀಯಾಳಿಸುತ್ತಿದ್ದಾರೆ, ಕ್ಷಣ ಕ್ಷಣಕ್ಕೂ ಆಕೆಯ ಮೇಲೆ ಸವಾರಿ ಮಾಡುವುದೇ ಆಗಿದೆ. ನಾಯಕ ಕೂಡ ಮನೆಯವರ ಮಾತು ಕೇಳಿ ಪತ್ನಿಯ ಸಮೀಪ ಹೋಗುವುದಿಲ್ಲ. ಪತ್ನಿಯ ರೂಪ ನೋಡಿಆತನಿಗೂ ಆಕೆಯಂದರೆ ಅಸಹ್ಯ ಮಾಡುತ್ತಾನೆ.  ಒಳ್ಳೆಯ ಮನಸ್ಸಿನ ಮುಗ್ಧ ಹುಡುಗಿಯಾಗಿರುವ ನಾಯಕಿ ದೀಪಾಳ ಮೇಲೆ ವೀಕ್ಷಕರಿಗಂತೂ ಕರುಣೆ. ಆಕೆಯ ಒಳ್ಳೆಯ ಗುಣ ಆಕೆಯ ಬಾಹ್ಯ ರೂಪದ ನಡುವೆ ವೀಕ್ಷಕರಿಗೆ ಕಾಣಿಸುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದೆ.

ಇದೇ ಕಾರಣಕ್ಕೆ ವರಮಹಾಲಕ್ಷ್ಮಿ ಕಾರ್ಯಕ್ರಮದಲ್ಲಿ ಮಹಿಳೆಯರು ನಾಯಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮಗೆ ಸ್ವಂತ ಬುದ್ಧಿ ಇಲ್ವಾ ಎಂದು ವೀಕ್ಷಕರೊಬ್ಬರು ನಾಯಕನನ್ನು ಚೆನ್ನಾಗಿ ಬೈದಿದ್ದಾರೆ. ಈ ಪಾತ್ರದಲ್ಲಿ ನಟಿಸುತ್ತಿರುವ ನಟ ನಂದನ್​ ಅವರನ್ನು ಮಹಿಳೆಯರು ಚೆನ್ನಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.ತಾವು ನೋಡುತ್ತಿರುವುದು ಸೀರಿಯಲ್​ ಪಾತ್ರ ಎನ್ನುವುದನ್ನೂ ಮರೆತು ಚೆನ್ನಾಗಿ ಬೈದಿದ್ದು, ಅದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.  

ತಿನ್ಬೇಕು ಅಂದ್ರೆ ಒಂದು ದಿನ ಬ್ರೇಕ್​ ಮಾಡ್ಬೇಕು... ಏನದು? ಸೀತಾಳ ಪ್ರಶ್ನೆಗೆ ನಿಮ್ಗೆ ಗೊತ್ತಾ ಉತ್ತರ?

Latest Videos
Follow Us:
Download App:
  • android
  • ios