ಸೇಮ್-ಟು-ಸೇಮ್ ಡ್ರೆಸ್ನಲ್ಲಿ ಮಿಂಚಿದ ಸೀತಾ- ಶ್ರಾವಣಿ! ಇವರಿಬ್ಬರ ಸಂಬಂಧವಾದ್ರೂ ಏನು?
ಸೀತಾರಾಮ ಸೀರಿಯಲ್ ಸೀತಾ ಮತ್ತು ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಶ್ರಾವಣಿ ಪಾತ್ರಧಾರಿಗಳು ಸೇಮ್- ಟು- ಸೇಮ್ ಡ್ರೆಸ್ನಲ್ಲಿ ಮಿಂಚಿಂಗ್. ಇಲ್ಲಿವೆ ನೋಡಿ ಫೋಟೋಗಳು...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾ-ರಾಮ ಸೀರಿಯಲ್ ಇದಾಗಲೇ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ. ಮದುವೆಯಾದವಳೊಬ್ಬಳನ್ನು ಭಗ್ನಪ್ರೇಮಿ ಪ್ರೀತಿಸಿ, ಆಕೆಯ ಮಗಳನ್ನೂ ತಮ್ಮ ಮಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವ ಕಥಾಹಂದರ ಹೊಂದಿರುವ ಈ ಸೀರಿಯಲ್ ಹಲವರಿಗೆ ಇಷ್ಟವಾಗಿದೆ. ಅದೇ ರೀತಿ, ತಂದೆಯ ಪ್ರೀತಿಗಾಗಿ ಹಂಬಲಿಸುವ ಶ್ರಾವಣಿಯ ಕಥೆ ಕೂಡ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಅಪ್ಪ ಯಾವಾಗ ತನ್ನನ್ನು ಒಪ್ಪಿಕೊಳ್ಳುತ್ತಾರೆ, ರಾಜಕಾರಣಿಯಾಗಿರೋ ಅಪ್ಪನ ಪ್ರೀತಿ ಸಿಗಬಹುದು ಎಂಬ ಆಸೆಯ ಕಣ್ಣುಗಳಿಂದಲೇ ಕಾಯುತ್ತಿದ್ದಾಳೆ ಶ್ರಾವಣಿ. ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿದ್ದಾಳೆ ಶ್ರಾವಣಿ. ತೆಲುಗಿನಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಧಾರಾವಾಹಿ ಕನ್ನಡದಲ್ಲಿ ಈಗಾಗಲೇ ಪ್ರಸಾರವಾಗಿ ಕೆಲ ದಿನಗಳು ಕಳೆದಿದ್ದು, ವೀಕ್ಷಕರಿಗೆ ಕಥೆ ಹಾಗೂ ಶ್ರಾವಣಿ ತುಂಬಾ ಹಿಡಿಸಿದ್ದಾಳೆ.
ಇದೀಗ ಸೀತಾ ಮತ್ತು ಶ್ರಾವಣಿ ಸೇಮ್ ಟು ಸೇಮ್ ಡ್ರೆಸ್ಗಳಲ್ಲಿ ಮಿಂಚಿದ್ದಾರೆ. ಮದುಮಗಳಂತೆಯೂ ಇಬ್ಬರೂ ಕಂಗೊಳಿಸಿದ್ದಾರೆ. ಮಾಡರ್ನ್ ಡ್ರೆಸ್ನಿಂದ ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಈ ನಟಿಯರಿಬ್ಬರೂ ನಟಿಸಿದ್ದಾರೆ. ಇವರು ಈ ರೀತಿ ಒಂದೇ ಬಗೆಯ ಡ್ರೆಸ್ ಹಾಕಿಕೊಂಡು ರೀಲ್ಸ್ ಮಾಡಿರುವುದು ಏಕೆ ಎನ್ನುವ ಬಗ್ಗೆ ನಟಿಯರು ಯಾವುದೇ ಸ್ಪಷ್ಟನೆ ಕೊಟ್ಟಿಲ್ಲವಾದರೂ, ಎರಡು ಸೀರಿಯಲ್ ನಾಯಕಿಯರು ಹೀಗೆ ಒಂದೇ ಕಡೆ, ಒಂದೇ ರೀತಿ ಮಿಂಚುತ್ತಿರುವುದಕ್ಕೆ ಅಭಿಮಾನಿಗಳಿಂದ ಹಾರ್ಟ್ ಇಮೋಜಿಗಳ ಸುರಿಮಳೆಯಾಗುತ್ತಿದೆ. ಇವರಿಬ್ಬರಲ್ಲಿ ನಿಮಗೆ ಯಾರು ಇಷ್ಟ ಎನ್ನುವ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಕೆಲವರು ಸೀತಾ ಎಂದಿದ್ದರೆ, ಮತ್ತೆ ಕೆಲವರು ಶ್ರಾವಣಿ ಎಂದಿದ್ದಾರೆ. ಇನ್ನು ಹಲವರು ಇಬ್ಬರೂ ಎನ್ನುವ ಉತ್ತರ ಕೊಟ್ಟಿದ್ದಾರೆ.
ಒಳಗಡೆ ಷರ್ಟ್ ಇದ್ಯಾ ನಮ್ಗೆ ಕಾಣಿಸ್ಲೇ ಇಲ್ಲ! ಸೀತಾರಾಮ ಸೀತಾಳ ಹೀಗೆ ಕಾಲೆಳೆಯೋದಾ ಟ್ರೋಲಿಗರು?
ಅಂದಹಾಗೆ, ಸೀತಾ ಪಾತ್ರದಲ್ಲಿ ನಟಿಸಿರುವ ನಟಿಯ ಹೆಸರು ವೈಷ್ಣವಿ ಗೌಡ ಹಾಗೂ ಶ್ರಾವಣಿ ಪಾತ್ರದಲ್ಲಿ ನಟಿಸಿರುವಾಕೆ ಆಸಿಯಾ ಫಿರ್ದೀಸ್. ಸೀತಾ ಪಾತ್ರದಲ್ಲಿ ನಟಿಸಿರುವ ನಟಿಯ ಹೆಸರು ವೈಷ್ಣವಿ ಗೌಡ ಹಾಗೂ ಶ್ರಾವಣಿ ಪಾತ್ರದಲ್ಲಿ ನಟಿಸಿರುವಾಕೆ ಆಸಿಯಾ ಫಿರ್ದೀಸ್. ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ಸನ್ನಿಧಿ ಎಂದೇ ಫೇಮಸ್ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ. ಬೆಲ್ಲಿ ಡ್ಯಾನ್ಸ್ನಲ್ಲಿಯೂ ಎಕ್ಸ್ಪರ್ಟ್ ಆಗಿರುವ ವೈಷ್ಣವಿ ಅದರದ್ದೇ ರೀಲ್ಸ್ ಮಾಡುತ್ತಾರೆ.
ಇನ್ನು ಆಸಿಯಾ ಕುರಿತು ಹೇಳುವುದಾದರೆ, ಇವರು ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ (Kanyakumari) ಧಾರಾವಾಹಿಯಲ್ಲಿ ಕನ್ನಿಕಾ ಆಗಿದ್ದರು. ಅಲ್ಲಿ ಭಕ್ತಿ, ಮುಗ್ಧತೆ, ದೈವೀಕತೆಯ ಪ್ರತೀಕವಾಗಿದ್ದ ಪಾತ್ರದಲ್ಲಿ ಈಕೆ ಮಿಂಚಿದ್ದರು. ಕನ್ಯಾಕುಮಾರಿ ಧಾರಾವಾಹಿಯಲ್ಲಿ ಆಸಿಯಾಗೆ ಜೋಡಿಯಾಗಿ ನಟಿಸಿದ್ದ ಯಶ್ವಂತ್ ಗೌಡ (Yashwanth Gowda) ಅವರು ತೆಲುಗು ಕಿರುತೆರೆಯಲ್ಲಿ ಗಟ್ಟಿಮೇಳ ಧಾರಾವಾಹಿ ನಾಯಕಿ ಅಮೂಲ್ಯ ಜೊತೆಗೆ ನಟಿಸಿದ್ದ ಅಮ್ಮಾಯಿಗಾರು ಧಾರಾವಾಹಿಯ ರಿಮೇಕ್ ಆಗಿರುವ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ದಲ್ಲಿ ಇದೀಗ ಶ್ರಾವಣಿಯಾಗಿ ಆಸಿಯಾ ನಟಿಸುತ್ತಿದ್ದಾರೆ. ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿ ಆಸಿಯಾ ಅದ್ಭುತವಾಗಿ ನಟಿಸಿದ್ದಾರೆ. ಶ್ರಾವಣಿ ಪಾತ್ರದಲ್ಲಿ ಆಸಿಯಾ ಫಿರ್ದೋಸ್ ಮನೋಜ್ಞವಾಗಿ ನಟಿಸುತ್ತಿದ್ದು, ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಕನ್ಯಾಕುಮಾರಿ ಬಳಿಕ ದ್ವಂದ್ವ ಎನ್ನುವ ಸಿನಿಮಾದಲ್ಲಿ, ಮಿಲನ ಎನ್ನುವ ವೆಬ್ ಸೀರಿಸ್ನಲ್ಲಿಯೂ ಇವರು ನಟಿಸಿದ್ದಾರೆ. ಇನ್ನು ಕೋಮಲ್ ಜೊತೆಗೆ ಕಾಲಾಯ ನಮಃ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ. ಇದರ ಮಧ್ಯೆ ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ ಇವರು. All in one Adda ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಇವರ ಈ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ.
20 ವಯಸ್ಸಿಗೆ ನಟನೆ ಸಾಕು ಅಂದ್ರು ಅಮ್ಮ... ಮದುವೆ ಮಾಡಿದ್ರು... ಆದ್ರೆ... ನೋವಿನ ದಿನಗಳ ನೆನೆದ ಸುಧಾರಾಣಿ