Asianet Suvarna News Asianet Suvarna News

ಹದಿನೈದು ವರ್ಷಕ್ಕೇ ತಂದೆ ಕಳೆದುಕೊಂಡಿದ್ದೆ; ಚೆಸ್ ಬಗ್ಗೆ ಅವರಪ್ಪ ಹೇಳಿದ್ದ ಪಾಠ ನೆನೆದ ಶಾರುಖ್ ಖಾನ್!

ಜೀವನ ಕೂಡ ಚೆಸ್ ಬೋರ್ಡಿನಂತೆ ಸಾಗುತ್ತದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ಸ್ಟೆಪ್ ಕೂಡ ಮುಂದೆ ನಮ್ಮನ್ನು ಯಾವುದೋ ಜಾಗಕ್ಕೆ ಅಥವಾ ಪರಿಸ್ಥಿತಿಗೆ ಕೊಂಡೊಯ್ಯುತ್ತದೆ. 

Bollywood actor Shah Rukh Khan says his father tells life is like chess board srb
Author
First Published Dec 11, 2023, 7:38 PM IST

ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ಜೀವನದ ಮಹತ್ವದ ಘಟನೆಯೊಂದನ್ನು ಹೇಳಿದ್ದಾರೆ. ಶಾರುಖ್ 'ನನ್ನ ತಂದೆ ನಾನು ಹತ್ತು ವರ್ಷದ ಹುಡುಗನಾಗಿದ್ದಾಗ ಒಂದು ಹಳೆಯ ಚೆಸ್ ಬೋರ್ಡ್‌ ಒಂದನ್ನು ತಂದು ಕೊಟ್ಟಿದ್ದರು. ಅದು ಜೀವನಕ್ಕೆ, ಜೀವನದ ಘಟನೆಗಳಿಗೆ ತುಂಬಾ ಹತ್ತಿರ ಎಂಬುದನ್ನು ಅವರು ನಿರೂಪಣೆಯೊಂದಿಗೆ ಹೇಳಿದ್ದರು. ಚೆಸ್ ಬೋರ್ಡಿನಲ್ಲಿ ಕಪ್ಪು ಮತ್ತು ಬಿಳಿ ಹೀಗೆ ಎರಡು ರೀತಿಯ ಕಾಯಿಗಳು ಇರುತ್ತವೆ. ಅವು ಜೀವನದಲ್ಲಿ ಕಷ್ಟ-ಸುಖ, ನೋವು-ನಲಿವು ಅವುಗಳನ್ನು ರಿಪ್ರೆಸೆಂಟ್ ಮಾಡುತ್ತವೆ. ಹಾಗೇ ಚೆಸ್ ಬೋರ್ಡ್ ಕೂಡ ಕಪ್ಪು-ಬಿಳುಪು ಬಣ್ಣ ಹೊಂದಿದೆ. 

ಅಷ್ಟೇ ಅಲ್ಲ, ಪ್ರತಿ ಕಾಯಿ ನಡೆಸುವಾಗ ಅದರ ಹಿಂದೆ ಒಂದು ಉದ್ದೇಶ ಇದ್ದೇ ಇರುತ್ತದೆ. ಉದ್ದೇಶವಿಲ್ಲದೇ ಯಾವುದೇ ಕಾಯಿಯನ್ನು ನಾವು ಅದರ ಜಾಗದಿಂದ ತೆಗೆಯುವುದೂ ಇಲ್ಲ, ಮುಂದೆ ನಡೆಸುವುದೂ ಇಲ್ಲ. ಅದಿರಲಿ, ಎಷ್ಟೋ ವೇಳೆ ನಾವು ಕಾಯಿಯನ್ನು ಸ್ವಲ್ಪ ಹಿಂದಕ್ಕೆ ಕೂಡ ನಡೆಸುತ್ತೇವೆ. ಜೀವನ ಕೂಡ ಹಾಗೆಯೇ ಇರುತ್ತದೆ. ಕೆಲವೊಮ್ಮೆ ನಾವು ಸ್ವಲ್ಪ ಹಿಂದೆ ಕೂಡ ಹೆಜ್ಜೆ ಇಡಬೇಕಾಗುತ್ತದೆ. ಅದರರ್ಥ ನಾವು ಸೋತಿದ್ದೇವೆ ಅಥವಾ ಹಿಂದಕ್ಕೆ ಹೋಗಿದ್ದೇವೆ ಎಂದು ಅರ್ಥವಲ್ಲ. ಬದಲಿಗೆ, ನಾವು ಹಿಂದಕ್ಕೆ ಹೋಗುವ ಮೂಲಕ ಮುಂದಿನ ಸ್ಟೆಪ್‌ಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರ್ಥ. 

ಸರಿಯಾದ ಸಮಯಕ್ಕೆ ನಿನ್ನೊಳಗಿರುವ ಪ್ರಾಣಿಯನ್ನು ಹೊರಗೆ ತಂದಿದ್ದೀಯಾ; ವರ್ಮಾ ಟ್ವೀಟ್ ವೈರಲ್!

ಜೀವನ ಕೂಡ ಚೆಸ್ ಬೋರ್ಡಿನಂತೆ ಸಾಗುತ್ತದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ಸ್ಟೆಪ್ ಕೂಡ ಮುಂದೆ ನಮ್ಮನ್ನು ಯಾವುದೋ ಜಾಗಕ್ಕೆ ಅಥವಾ ಪರಿಸ್ಥಿತಿಗೆ ಕೊಂಡೊಯ್ಯುತ್ತದೆ. ನಮ್ಮ ಯಾವುದೇ ನಡೆ ವೇಸ್ಟ್ ಆಗುವುದಿಲ್ಲ ಮತ್ತು ಯಾವುದೇ ನಡೆ ಕೂಡ ಎಲ್ಲಿಗೋ ಒಂದು ಕಡೆ ಕರೆದುಕೊಂಡೇ ಹೋಗುತ್ತದೆ. ಸುಮ್ಮನೇ ನಾವು ಕಾಯಿಯನ್ನು ಯೋಚಿಸದೇ ಹಾಗೇ ಬ್ಲೆಂಡ್ ಆಗಿ ಎತ್ತಿಟ್ಟರೆ ಕೂಡ ಅದರ ಪರಿಣಾಮವನ್ನು ಎದುರಿಸಲು ರೆಡಿ ಇರಬೇಕಾಗುತ್ತದೆ. ಚೆಸ್ ಬೋರ್ಡ್‌ ಎನ್ನುವುದು ನಿಜವಾಗಿಯೂ ಜೀವನದ ರಿಫ್ಲೆಕ್ಷನ್' ಎಂದಿದ್ದರಂತೆ ಶಾರುಖ್ ಖಾನ್ ತಂದೆ. 

ನನ್ನ ತಂದೆ ಸಾಯುತ್ತಿದ್ದಂತೆ ನಾನು ಥಿಯೇಟರ್‌ನಿಂದ ಹೊರಗೆ ಓಡಿ ಬಂದೆ; ನಟ ಬಾಬ್ಬಿ ಡಿಯೋಲ್

ಒಟ್ಟಿನಲ್ಲಿ, ನಟ ಶಾರುಖ್ ಖಾನ್ ಈ ವರ್ಷ ಅಂದರೆ, 2023ರಲ್ಲಿ ಬಾಲಿವುಡ್‌ನ ಸಕ್ಸಸ್‌ಫುಲ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಪಠಾಣ್ ಹಾಗೂ ಜವಾನ್ ಚಿತ್ರಗಳು ಸೂಪರ್ ಸಕ್ಸಸ್ ಆಗುವ ಮೂಲಕ ಶಾರುಖ್ ಖಾನ್ ಚಿತ್ರಗಳು ಈ ವರ್ಷದಲ್ಲಿ ಭಾರೀ ಕಮಾಯಿ ಮತ್ತು ಕಮಾಲ್ ಮಾಡಿರುವ ಚಿತ್ರಗಳು. ಆದ್ದರಿಂದ ಈ ವರ್ಷದ ಸಕ್ಸಸ್‌ಫುಲ್ ನಟ ಶಾರುಖ್ ಖಾನ್ ಎಂಬುದನ್ನು ಹೇಳಬಹುದು. ಅಂದಹಾಗೆ, ನಟ ಶಾರುಖ್ ಖಾನ್ ನಟನೆಯ 'ಡಂಕಿ' ಚಿತ್ರವು ಇದೇ ತಿಂಗಳು 21ರಂದು (21 ಡಿಸೆಂಬರ್ 2023) ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. 

Follow Us:
Download App:
  • android
  • ios