ಭಾರತದ ಮಾಡೆಲ್, ನಟ ಹಾಗೂ ಮಾರ್ಷಲ್ ಆರ್ಟ್ಸ್‌ ಪಟು ವಿದ್ಯುತ್ ಜಮ್ವಾಲ್ ಪ್ರಕೃತಿಯ ಮಧ್ಯೆ ಸಂಪೂರ್ಣ ಬೆತ್ತಲಾಗಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಆಗಿದೆ. ಫೋಟೋ ತೆಗೆದಿದ್ದು ಸ್ಥಳಿಯ ಕುರಿಗಾಹಿ ಎಂದು ಹೇಳಿರುವ ವಿದ್ಯುತ್, ಅದನ್ನು ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶೇರ್ ಮಾಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿವೆ. 

ವಿದ್ಯುತ್ ಜಮ್ಮವಾಲ್ ಮಾಡಿರುವ ಪೋಸ್ಟ್ ನಲ್ಲಿ ನಟ ಹಿಮಾಲಯದ ತಪ್ಪಲಿನಲ್ಲಿ ಮೈ ಮೇಲೆ ತುಂಡು ಬಟ್ಟೆಯೂ ಇಲ್ಲದೇ ಯೋಗ ಹಾಗೂ ಅಡುಗೆ ಮಾಡುವುದನ್ನು ಕಾಣಬಹುದಾಗಿದೆ. ಇದೊಂದು ಆಧ್ಮಾತ್ಮದ ಪ್ರಯಾಣವಾಗಿದ್ದು ಕಳೆದ 14 ವರ್ಷಗಳಿಂದಲೂ ಈ ರೀತಿ ಮಾಡುತ್ತಿರುವುದಾಗಿ ನಟ ಹೇಳಿಕೊಂಡಿದ್ದಾರೆ. ಪ್ರತಿ ವರ್ಷವೂ 7 ರಿಂದ 10 ದಿನಗಳ ಕಾಲ ಹೀಗೆ ಪ್ರಕೃತಿಯ ಮಧ್ಯೆ ಒಬ್ಬಂಟಿಯಾಗಿ ಬೆತ್ತಲಾಗಿ ತಾನು ಕಾಲ ಕಳೆಯುವುದಾಗಿ ವಿದ್ಯುತ್ ಜಮಾವಲ್ ಹೇಳಿಕೊಂಡಿದ್ದಾರೆ.

ಐಷಾರಾಮಿ ಜೀವನದಿಂದ ಅರಣ್ಯಕ್ಕೆ ಬರುತ್ತಿರುವಾಗ ನಾನು ಒಂಟಿತನದಲ್ಲೂ ಖುಷಿ ಕಂಡೆ ಹಾಗೂ ನಾನು ಯಾರು ಹಾಗೂ ನಾನು ಯಾರಲ್ಲ ಎಂಬುದನ್ನು ತಿಳಿದುಕೊಳ್ಳುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದನ್ನು ಆನಂದಿಸುತ್ತಿದ್ದೇನೆ. ಇದು ಆಧ್ಯಾತ್ಮದೆಡೆಗಿನ ಪ್ರಯಾಣದ ಮೊದಲ ಹಂತವಾಗಿದ್ದು, ಇದು ಪ್ರಕೃತಿ ಒದಗಿಸಿದ ಐಷಾರಾಮಿ ಜೀವನ ಎಂದು ವಿದ್ಯುತ್ ಬರೆದುಕೊಂಡಿದ್ದಾರೆ. ಆದರೆ, ಇದೀಗ ಈ ಬಗ್ಗೆ ಭಾರತದ ನಿರ್ಮಾಪಕ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕಾಮೆಂಟ್ ಮಾಡಿದ್ದಾರೆ. 

'ಹೇಯ್ ವಿದ್ಯುತ್ ಜಮ್ವಾಲಾ, ನೀನು ಸರಿಯಾದ ಸಮಯದಲ್ಲಿ ನಿನ್ನೊಳಗಿರುವ ಪ್ರಾಣಿ (Animal)ಯನ್ನು ಹೊರಗೆ ತಂದಿದ್ದೀಯಾ. ನೀನು ನಿಜವಾಗಿಯೂ ಗ್ರೀಕ್ ಗಾಡ್‌ ತರಹವೇ ಕಾಣುತ್ತಿದ್ದೀಯೆ.. ನಿನಗೆ ಮಿಲಿಯನ್ ಸೆಲ್ಯೂಟ್ಸ್‌' ಎಂದು ರಾಮ್ ಗೋಪಾಲ್ ವರ್ಮಾ ಬರೆದುಕೊಂಡಿದ್ದಾರೆ. ಈಗ ವರ್ಮಾ ಟ್ವೀಟ್ ಸಖತ್ ವೈರಲ್ ಆಗತೊಡಗಿದೆ. 

ನನ್ನ ತಂದೆ ಸಾಯುತ್ತಿದ್ದಂತೆ ನಾನು ಥಿಯೇಟರ್‌ನಿಂದ ಹೊರಗೆ ಓಡಿ ಬಂದೆ; ನಟ ಬಾಬ್ಬಿ ಡಿಯೋಲ್

ವಿದ್ಯುತ್ ಜಮ್ವಾಲಾ 'ನಾನು ನನ್ನ ವಿಶ್ರಾಂತಿ ವಲಯದ ಹೊರಗೆ  ಕೂಡ ತುಂಬಾ ಆರಾಮದಾಯಕವಾಗಿ ಇದ್ದೇನೆ. ನಿಸರ್ಗದ ಸ್ವಾಭಾವಿಕ ಸಂಗೀತಕ್ಕೆ ನಾನು ಸತ್ಯವಾಗಿ ಟ್ಯೂನ್ ಆಗುತ್ತಿದ್ದೇನೆ. ಸ್ಯಾಟಲೈಟ್ ಆಂಟೆನಾ ಕೂಡ ಸಂತೋಷ ಮತ್ತು ಪ್ರೀತಿಯ ಕಂಪನಗಳನ್ನು ಹೊರಸೂಸುತ್ತಿದೆ ಎಂದೇ ನಾನು ಕಲ್ಪಿಸಿಕೊಳ್ಳುತ್ತೇನೆ. ಕರುಣೆಯ ಆವರ್ತನದಲ್ಲಿ ನಾಬು ಕಂಪಿಸುತ್ತೇನೆ, ನಿರ್ಧಾರದ ಆವರ್ತನದಲ್ಲಿಯೂ ಕಂಪಿಸುತ್ತಿದ್ದೇನೆ. ಸಾಧನೆಯ ಆವರ್ತನದಲ್ಲಿ, ಕ್ರಿಯೆಯ ಆವರ್ತನದಲ್ಲಿ ಕಂಪಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ ವಿದ್ಯುತ್ ಜಮಾವಾಲ್.

ಕ್ಯಾಮೆರಾ ಎದುರು ಹೀಗೆ ಹೇಳಿದ್ರೆ ಮುಂಬರುವ ಸಿನಿಮಾ ನಿರ್ದೇಶಕರಿಗೆ ಸಮಸ್ಯೆ ಆಗುತ್ತೆ; ಪ್ರಿಯಾಂಕಾ ಚೋಪ್ರಾ

ಅಂದಹಾಗೆ, ವಿದ್ಯುತ್ ಜಮ್ವಾಲಾ ನಟನೆಯ 'ಕ್ರ್ಯಾಕ್' ಸಿನಿಮಾ ಮುಂದಿನ ವರ್ಷ ಫೆಬ್ರವರಿ 23 (23 ಫೆಬ್ರವರಿ 2023) ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ವಿದ್ಯುತ್ ಸಿನಿಮಾ ಕೆರಿಯರ್ ಬಗ್ಗೆ ಹೇಳುವುದಾದರೆ, ಅವರು ಕೆಲವು ಸಿನಿಮಾಗಳಲ್ಲಿ ವಿಲನ್ ಪಾತ್ರ ನಿರ್ವಹಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಜತೆಗೆ, ಕಮಾಂಡೋ, ಪೋರ್ಸ್, ತೆಲುಗು ಸಿನಿಮಾಗಳಾದ ಶಕ್ತಿ ಊಸರವಳ್ಳಿ, ತಮಿಳಿನ ಬಿಲ್ಲಾ2 , ತುಪಾಕಿ, ಮುಂತಾದ ಸಿನಿಮಾಗಳಲ್ಲಿ ವಿಲನ್ ರೋಲ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.