ಬಿಗ್‌ಬಾಸ್ ಮನೆಯೊಳಗೆ ಬಂದು ಅಡುಗೆ ಮಾಡಿಟ್ಟು ಹೋದ ಕಿಚ್ಚ ಸುದೀಪ್! ಸೋಷಲ್ ಮೀಡಿಯಾದಲ್ಲಿ ಟ್ರೆಂಡಿಂಗ್
ಸುದೀಪ್ ಬಿಗ್‌ಬಾಸ್ ಮನೆಯವರಿಗಾಗಿ ಅಡುಗೆ ಮಾಡೋದು ಹೊಸತಲ್ಲ. ಆದರೆ ಆ ಮನೆಯೊಳಗೆ ಹೋಗಿ ಅಡುಗೆ ಮಾಡೋದು ಹೊಸತು. ಕನ್ನಡದ ಸೂಪರ್‌ಸ್ಟಾರ್‌ನ ಈ ನಡೆ ಬಿಗ್‌ಬಾಸ್ ಸ್ಪರ್ಧಿಗಳು ಮಾತ್ರವಲ್ಲ, ಕನ್ನಡಿಗರ ಮನಸ್ಸನ್ನೂ ಗೆದ್ದಿದೆ.
ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಸಿನಿಮಾ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಬಿಗ್ ಫೈಟ್ ಕೊಡೋದಕ್ಕೆ ಅದಕ್ಕೂ ಮೊದಲೇ ಉಪೇಂದ್ರ ನಟನೆಯ 'ಯುಐ' ಸಿನಿಮಾನೂ ರಿಲೀಸ್ ಆಗ್ತಿದೆ. ಇದಕ್ಕೆ ಇವರ ಫ್ಯಾನ್ಸ್ ತಲೆ ಕೆಡಿಸಿಕೊಂಡರೂ ಸುದೀಪ್ ತಲೆ ಕೆಡಿಸಿಕೊಂಡ ಹಾಗೆ ಕಾಣಲ್ಲ. ನಿನ್ನೆ ಪ್ರೆಸ್‌ಮೀಟ್‌ನಲ್ಲಿ ಸಿನಿಮಾ ರಿಲೀಸ್ ಅನಿವಾರ್ಯವಾಗಿತ್ತು. ವರ್ಷದ ಕೊನೆ ಅಂದ ಮೇಲೆ ಸಾಲು ಸಾಲು ಸಿನಿಮಾ ರಿಲೀಸ್ ಆಗ್ಬೇಕು, ಜನರಿಗೆ ಎಂಟರ್‌ಟೈನ್‌ಮೆಂಟ್ ಸಿಗಬೇಕು ಅನ್ನೋ ಅರ್ಥದಲ್ಲಿ ಮಾತನಾಡಿದರು. ಜೊತೆಗೆ ಉಪೇಂದ್ರ ಬಗ್ಗೆಯೂ ಒಳ್ಳೆಯದನ್ನೇ ಮಾತನಾಡಿ, ಅವರು ನಮ್ಮ ಗುರು ಇದ್ದ ಹಾಗೆ. ಅವರಿಗೆ ಎದುರು ನಿಲ್ಲೋ ಪ್ರಶ್ನೆನೇ ಇಲ್ಲ ಅನ್ನೋ ಮಾತು ಹೇಳಿದ್ರು.
ಇರಲಿ, ಸದ್ಯ ಮ್ಯಾಟರಿಗೆ ಬರಾಣ. ಸುದೀಪ್ ಹೋಸ್ಟ್ ಮಾಡ್ತಿರೋ ಬಿಗ್‌ಬಾಸ್ ಶೋ ಈ ಬಾರಿ ತಾರಾಮಾರ ಟಿಆರ್‌ಪಿ ಗಿಟ್ಟಿಸಿಕೊಂಡಿದೆ. ಅದಕ್ಕೆ ತಕ್ಕಂತೆ ಏನೇನೋ ಡ್ರಾಮಾಗಳು ನಡೀತಿವೆ. ಈ ಬಾರಿ ಸುದೀಪ್ ಕೊನೇ ಶೋ ಅನ್ನೋ ಕಾರಣಕ್ಕೋ ಏನೋ ಜನ ಹುಚ್ಚುಗಟ್ಟಿ ಈ ಶೋನ ನೋಡ್ತಿದ್ದಾರೆ. ಅದರಲ್ಲೂ ವೀಕೆಂಡಲ್ಲಿ ಬರೋ ಕಿಚ್ಚ ಸುದೀಪ್ ಶೋ ಮಿಸ್ ಮಾಡ್ತಿಲ್ಲ. ಆದರೆ ಇದೀಗ ಬಹಳ ದಿನದಿಂದ ಜನ ಒಂದು ವಿಚಾರ ಮಿಸ್ ಮಾಡ್ತಿದ್ರು. ಅದು ಮತ್ತೇನಲ್ಲ, ಸುದೀಪ್ ತನ್ನ ಕೈಯಾರೆ ಮಾಡ್ತಿದ್ದ ಅಡುಗೆ. ಬಿಗ್‌ಬಾಸ್ ಸೀಸನ್ ಶುರುವಾದಾಗಿಂದ ಸಾಕಷ್ಟು ಸಲ ಬಿಗ್‌ಬಾಸ್ ಮನೆಯವರಿಗೆ ಕಿಚ್ಚ ಸುದೀಪ್ ಮಾಡಿರೋ ಅಡುಗೆ ಉಣ್ಣೋ ಸೌಭಾಗ್ಯ ಲಭಿಸಿತ್ತು.
ಮಂಜು ನೀಡಿದ ಚಾಲೆಂಜ್ ಗೆ ತಲೆ ಬೋಳಿಸಿಕೊಳ್ತಾರಾ ರಜತ್? ಚೈತ್ರಾ ಮಾತಿಗೆ ವೀಕ್ಷಕರು ಗರಂ
ಹಾಗೆ ನೋಡಿದರೆ ಜಗತ್ತಿನಲ್ಲಿ ಅತೀ ಹೆಚ್ಚು ಮನಃತೃಪ್ತಿ ಕೊಡೋ ಕೆಲಸ ಅಂದರೆ ರುಚಿಯಾದ ಅಡುಗೆ ಮಾಡಿ ಬಡಿಸೋದು, ಅದನ್ನು ಅತಿಥಿಗಳು ಅಷ್ಟೇ ಖುಷಿಯಿಂದ ತಿಂದು ಸಂತೃಪ್ತರಾದರೆ ಅದರಷ್ಟು ನೆಮ್ಮದಿ, ತೃಪ್ತಿ ನೀಡುವ ವಿಚಾರ ಇನ್ನೊಂದಿಲ್ಲ ಅನ್ನೋ ಮಾತಿದೆ. ಸೋ ಕಿಚ್ಚ ಸುದೀಪ್ ಈ ಮಾತಿನಲ್ಲಿ ನಂಬಿಕೆ ಇಟ್ಟ ಹಾಗೆ ಕಾಣುತ್ತಿದೆ. ಸುದೀಪ್ ತನ್ನ ಆಪ್ತರಿಗೆ ಆಗಾಗ ಕೈಯ್ಯಾರೆ ಅಡುಗೆ ಮಾಡಿ ಬಡಿಸ್ತಾರೆ. ಅದು ಅವರ ಇಷ್ಟದ ಹವ್ಯಾಸ. ಅವರಿಗೆ ಅಡುಗೆ ಮಾಡಿ ಬಡಿಸೋದರಲ್ಲಿ ಇರುವ ಖುಷಿ ಅಡುಗೆ ಮಾಡಿ ಉಣ್ಣೋದರಲ್ಲಿ ಇಲ್ಲ. ಬಹಳ ಕಡಿಮೆ ತಿಂದು ಬಾಡಿಯನ್ನು ಚೆನ್ನಾಗಿ ಮೈಂಟೇನ್ ಮಾಡಿರೋ ಸುದೀಪ್ ಐವತ್ತರ ಹರೆಯದಲ್ಲೂ ಒಳ್ಳೆ ದೇಹಧಾರ್ಢ್ಯ ಉಳಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಸುದೀಪ್ ಮಾಡೋ ಅಡುಗೆಗೆ ಭಲೇ ಡಿಮ್ಯಾಂಡ್ ಇದೆ. ಸದ್ಯ ಸುದೀಪ್ ಬಿಗ್‌ಬಾಸ್ ಮನೆಯ ಅಡುಗೆ ಮನೆಗೆ ಹೋಗಿ ಕೈಯ್ಯಾರೆ ಅಡುಗೆ ಮಾಡಿ ಬಡಿಸೋ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಸುದೀಪ್ ವೇಷ ಮರೆಸಿ ಅಡುಗೆ ಮನೆಗೆ ತೆರಳಿದ್ದಾರೆ. ಅವರ ಜೊತೆಗೆ ಇನ್ನೂ ಕೆಲ ಮಂದಿ ಇದ್ದಾರೆ. ಎಲ್ಲರೂ ಸೇರಿ ಬಿಗ್‌ಬಾಸ್ ಮನೆಯವರಿಗೆ ಬಿಸಿಬಿಸಿ ಅಡುಗೆ ಮಾಡಿ ಬಡಿಸಿದ್ದಾರೆ. ಶುರುವಿಗೆ ಇದ್ಯಾರು ಅಡುಗೆ ಮಾಡ್ತಿದ್ದಾರೆ ಅಂತ ಮನೆಮಂದಿಗೆ ಗೊತ್ತಾಗಿಲ್ಲ. ಆದರೆ ಅಡುಗೆ ಮಾಡಿದ ಬಳಿಕ ಕೊನೆಯಲ್ಲಿ ಒಬ್ಬೊಬ್ಬರ ಮುಖ ರಿವೀಲ್ ಆಗ್ತಾ ಹೋಗುತ್ತೆ.
bigg boss kannada 11 ಇತಿಹಾಸದಲ್ಲೇ ಮೊದಲು, ವೀಕ್ಷಕರೇ ತೀರ್ಮಾನಿಸಲಿರುವ ವಿಶಿಷ್ಟ ಟಾಸ್ಕ್!
ಹಾಗಂತ ಇದೆಲ್ಲ ನಡೆದದ್ದು ಈ ಶೋ ನಲ್ಲಿ ಅಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 6 ನಲ್ಲಿ. ಅನುಪಮಾ ಗೌಡ, ನಿವೇದಿತಾ ಗೌಡ, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್ ಮೊದಲಾದವರು ಈ ಸೀಸನ್‌ನಲ್ಲಿ ಇದ್ದರು. ಈ ಸೀಸನ್‌ನಲ್ಲಿ ಬಿಗ್‌ಬಾಸ್‌ಮನೆಗೇ ಹೋಗಿ ಅಡುಗೆ ಮಾಡಿ ಸರ್ಪ್ರೈಸ್ ಕೊಟ್ಟಿದ್ದರು ಸುದೀಪ್.
ಇದು ಸುದೀಪ್ ಅವರು ನಡೆಸಿಕೊಡ್ತಿರೋ ಕೊನೇ ಬಿಗ್‌ಬಾಸ್. ಮುಂದಿನ ಸಲದಿಂದ ಕಿಚ್ಚ ಸುದೀಪ್ ಬಿಗ್‌ಬಾಸ್‌ನಲ್ಲಿ ಇರೋದಿಲ್ಲ. ಕಿಚ್ಚ ತಾನು ಸ್ವತಃ ಕೈಯ್ಯಾರೆ ಮಾಡಿ ಬಡಿಸೋ ಅಡುಗೆಯೂ ಇರೋದಿಲ್ಲ. ಈ ಸೀಸನ್‌ನಲ್ಲಿ ಇನ್ನೂ ಸುದೀಪ್ ಅಡುಗೆ ಸ್ಪೆಷಲ್ ಎಪಿಸೋಡ್ ನಡೆದಿಲ್ಲ. ಸೋ, ಯಾರ್ಯಾರಿಗೆಲ್ಲ ಕಿಚ್ಚನ ಕೈ ರುಚಿ ನೋಡೋ ಭಾಗ್ಯ ಇದೆಯೋ ಕಾದುನೋಡಬೇಕು.