ಮಂಜು ನೀಡಿದ ಚಾಲೆಂಜ್ ಗೆ ತಲೆ ಬೋಳಿಸಿಕೊಳ್ತಾರಾ ರಜತ್? ಚೈತ್ರಾ ಮಾತಿಗೆ ವೀಕ್ಷಕರು ಗರಂ
ಬಿಗ್ ಬಾಸ್ ಕನ್ನಡ ಸೀಸನ್ 11ರ ಟಿಆರ್ ಪಿ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೆ ಇಂದಿನ ಪ್ರೋಮೋ ಕಾರಣ. ಎರಡು ತಂಡಗಳಾಗಿರುವ ಬಿಗ್ ಬಾಸ್ ಸ್ಪರ್ಧಿಗಳ ಮಧ್ಯೆ ಗೆಲುವಿಗಾಗಿ ತೀವ್ರ ಹಣಾಹಣಿ ಶುರುವಾಗಿದೆ. ಕಠಿಣ ಟಾಸ್ಕ್ ಗಮನ ಸೆಳೆದಿದೆ.
ಬಿಗ್ ಬಾಸ್ (Bigg Boss) ಮನೆಯಲ್ಲಿ ಬೆಂಕಿ ಕಿಡಿ, ಹೊತ್ತಿ ಉರಿಯಲು ಶುರುವಾಗಿದೆ. ಎರಡು ತಂಡಗಳಾಗಿ ಸ್ಪರ್ಧೆಗಳು ಬೇರ್ಪಟ್ಟಿದ್ದು, ಗೆಲುವಿಗಾಗಿ ಸ್ಪರ್ಧಿಗಳ ಮಧ್ಯೆ ತೀವ್ರ ಹಣಾಹಣಿ ನಡೆಯುತ್ತಿದೆ. ಇಂದಿನ ಶೋ ಮತ್ತಷ್ಟು ರೋಚಕ ಹಂತ ತಲುಪಲಿದೆ. (Manju) ಅವರ ಆದೇಶದ ಮೇರೆಗೆ ತಲೆ ಬೋಳಿಸಿಕೊಳ್ಳಲು ರಜತ್ (Rajat) ಸಿದ್ಧವಾಗಿದ್ದಾರೆ. ಐಶ್ವರ್ಯ ಕಹಿ ತಿಂದ್ರೆ, ಚೈತ್ರಾ ಏಕವಚನದಲ್ಲಿ ಮಾತನಾಡಿದ್ದು ಸುದ್ದಿಗೆ ಬಂದಿದೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ವಿಶಿಷ್ಟ ಟಾಸ್ಕ್ ನಡೆಯುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿ, ಯಾವ ಗುಂಪು ಟಾಸ್ಕ್ ವಿನ್ ಆಗಿದೆ ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಜನರ ವೋಟ್ ಮೇಲೆ ಯಾವ ಟೀಂ ವಿಜೇತವಾಗಲಿದೆ ಎಂಬುದು ಘೋಷಣೆಯಾಗಲಿದೆ. ನಿನ್ನೆ ಎರಡು ಗುಂಪುಗಳ ಮಧ್ಯೆ ನ್ಯೂಸ್ ಓದುವ ಹಾಗೂ ಅಡುಗೆ ಮಾಡುವ ಸ್ಪರ್ಧೆ ನಡೆದಿತ್ತು. ಎರಡರಲ್ಲೂ ಧೂಳ್ ಧಮಾಕಾ ತಂಡ ಗೆಲುವು ಸಾಧಿಸಿತ್ತು. ಆದ್ರೆ ಇದು ಅಲ್ಲಿನ ಗೆಲುವು ಮಾತ್ರ, ಅಂತಿಮ ನಿರ್ಧಾರ ವೀಕ್ಷಕರ ಮೇಲಿದೆ. ಹಾಗಾಗಿ ಮನೆಯಲ್ಲಿ ಸ್ಪರ್ಧೆ ಮತ್ತಷ್ಟು ಕಠಿಣವಾಗಿದೆ. ಪ್ರತಿಸ್ಪರ್ಧಿಗಳಿಗೆ ಸವಾಲು ನೀಡಬೇಕಾಗಿದೆ. ಶಶಿರ್, ಐಶ್ವರ್ಯಗೆ ಹಾಗಲಕಾಯಿ ತಿನ್ನುವ ಸವಾಲು ಹಾಕಲಿದ್ದಾರೆ. ಗೌತಮಿಗೆ ರಜತ್, ಎರಡು ಹಸಿಮೆಣಸಿನ ಕಾಯಿ ತಿನ್ನುವ ಟಾಸ್ಕ್ ನೀಡಲಿದ್ದಾರೆ. ಕಹಿ ತಿಂದು ವಾಂತಿ ಬಂದಂತೆ ಐಶ್ವರ್ಯ ಕಷ್ಟಪಟ್ರೆ, ಖಾರಾ ತಿಂದ ಗೌತಮಿ, ಉರಿ ಅಂತ ಕೂಗಿಕೊಳ್ತಾರೆ.
ರಾಕಿ ಸ್ಟೈಲ್ ನಲ್ಲಿ ಮಹಾಲಕ್ಷ್ಮಿ ಎಂಟ್ರಿ, ಲುಕ್ ಚೆನ್ನಾಗಿಲ್ಲ ಅಂದ್ರು ಫ್ಯಾನ್ಸ್
ಈ ಮಧ್ಯೆ ಮಂಜು, ರಜತ್ ಗೆ ನೀಡುವ ಟಾಸ್ಕ್ ಅಚ್ಚರಿ ಹುಟ್ಟಿಸಿದೆ. ಮಂಜು, ತಲೆ ಬೋಳಿಸಿಕೊಳ್ಳುವಂತೆ ರಜತ್ ಗೆ ಹೇಳಿದ್ದಾರೆ. ಇದನ್ನು ಒಪ್ಪಿಕೊಂಡ ರಜತ್ ಮುಂದೆ ಬಂದಿದ್ದಾರೆ. ರಜತ್ ತಲೆಕೂದಲನ್ನು ಮಂಜು ಟ್ರಿಪ್ ಮಾಡ್ತಿರೋದನ್ನು ನೀವು ಪ್ರೋಮೋದಲ್ಲಿ ಕಾಣ್ಬಹುದು. ಇದನ್ನು ನೋಡಿದ ರಜತ್ ಅಭಿಮಾನಿಗಳು ಶಾಕ್ ಆದ್ರೆ ಮಂಜು ಕ್ರಮವನ್ನು ಕೆಲವರು ವಿರೋಧಿಸಿದ್ದಾರೆ. ತಲೆ ಬೋಳಿಸಿಕೊಂಡವರೇ ಬಿಗ್ ಬಾಸ್ ಸೀಸನ್ ವಿನ್ನಾಗಿದ್ದ ಉದಾಹರಣೆ ಇದೆ. ಹಾಗಾಗಿ ರಜತ್ ನೀವು ಗೆಲ್ತೀರಾ ಎಂದು ಅವರ ಬೆನ್ನು ತಟ್ಟಿದ ಅಭಿಮಾನಿಗಳ ಸಂಖೆಯೂ ಸಾಕಷ್ಟಿದೆ.
ಈ ಮಧ್ಯೆ ಶಿಶಿರ್ ಗೆ ನೀಡುವ ಟಾಸ್ಕ್ ವಿಷ್ಯದಲ್ಲಿ ತ್ರಿವಿಕ್ರಮ್ ಹಾಗೂ ಚೈತ್ರಾ ಕುಂದಾಪುರ ಮಧ್ಯೆ ದೊಡ್ಡ ಗಲಾಟೆಯಾಗೋದನ್ನು ನಾವು ಕಾಣ್ಬಹುದು. ತ್ರಿವಿಕ್ರಮ್ ಜೊತೆ ಏಕವಚನದಲ್ಲಿ ಮಾತನಾಡ್ತಾರೆ ಚೈತ್ರಾ. ಇದು ವೀಕ್ಷಕರಿಗೆ ಇಷ್ಟವಾಗಿಲ್ಲ. ಚೈತ್ರಾ ಮನೆಯಲ್ಲಿ ಕಿರುಚಾಟ ನಡೆಸ್ತಾರೆ. ಎಲ್ಲರ ಜೊತೆ ಜಗಳವಾಡ್ತಾರೆ. ವಾರಾಂತ್ಯದಲ್ಲಿ ಮಾತ್ರ ಕಿಚ್ಚನ ಮುಂದೆ ನಾನೇನು ಹೇಳೇ ಇಲ್ಲ ಎನ್ನುವ ನಾಟಕವಾಡ್ತಾರೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.
bigg boss kannada 11 ಇತಿಹಾಸದಲ್ಲೇ ಮೊದಲು, ವೀಕ್ಷಕರೇ ತೀರ್ಮಾನಿಸಲಿರುವ ವಿಶಿಷ್ಟ ಟಾಸ್ಕ್!
ಈ ಬಾರಿ ಜಿಯೋ ಸಿನಿಮಾ ಆಪ್ (Jio Cinema app)ನಲ್ಲಿ ವೋಟಿಂಗ್ ಶುರುವಾಗಿದೆ. ಧೂಳ್ ಧಮಾಕಾ ತಂಡದಲ್ಲಿ ಸುರೇಶ್, ಭವ್ಯ, ತ್ರಿವಿಕ್ರಮ್, ಗೌತಮಿ, ಐಶ್ವರ್ಯ ಮತ್ತು ಮಂಜು ಇದ್ದಾರೆ. ಮಸ್ತ್ ಮಜಾ ಮಾಡಿ ತಂಡದಲ್ಲಿ ಧನರಾಜ್, ಶಿಶಿರ್, ರಜತ್, ಹನುಮಂತು, ಮೋಕ್ಷಿತಾ, ಚೈತ್ರಾ ಇದ್ದಾರೆ. ನಿನ್ನೆ ಐಶ್ವರ್ಯ ಹಾಗೂ ಚೈತ್ರಾ ನ್ಯೂಸ್ ಓದಿ ಗಮನ ಸೆಳೆದಿದ್ದರು. ನಂತ್ರ ನಡೆದ ಹನುಮಂತು ಹಾಗೂ ತ್ರಿವಿಕ್ರಮ್ ಕುಕ್ಕಿಂಗ್ ವೀಕ್ಷಕರಿಗೆ ಮನರಂಜನೆ ನೀಡಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 11ರಿಂದ ಶೋಭಾ ಶೆಟ್ಟಿ ಸ್ವಯಂ ಇಚ್ಛೆಯಿಂದ ಹೊರಗೆ ಬಿದ್ದಿದ್ದು, ಉಳಿದ ಸ್ಪರ್ಧಿಗಳಿಗೆ ಇನ್ನೊಂದು ವಾರ ಅವಕಾಶ ಸಿಕ್ಕಂತಾಗಿದೆ. ಇದನ್ನು ಸ್ಪರ್ಧಿಗಳು ಹೇಗೆ ಬಳಸಿಕೊಳ್ತಾರೆ ಎಂಬುದನ್ನು ಕಾದು ನೋಡ್ಬೇಕಿದೆ.