ಗಿಲ್ಲಿ ಅಣ್ಣ ಅಲ್ಲ ಫ್ರೆಂಡ್ ಎಂದ ರಕ್ಷಿತಾ ಮಾತಿಗೆ ಗಿಲ್ಲಿ ನಟ ಹೇಳಿದ್ದೇನು?
Gilli nata Rakshita : ಗೆಲುವಿನ ಸಂತೋಷ, ಮುಂದಿನ ಗುರಿ, ಕೆಲ್ಸದ ಮಧ್ಯೆ ಗಿಲ್ಲಿ, ರಕ್ಷಿತಾ ಬಗ್ಗೆಯೂ ಮಾತನಾಡಿದ್ದಾರೆ. ವಂಶದ ಕುಡಿ ರಕ್ಷಿತಾ ಹೇಳಿಕೆಯೊಂದಕ್ಕೆ ಗಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬ್ಯುಸಿಯಾದ ಗಿಲ್ಲಿ
ಬಿಗ್ ಬಾಸ್ ವಿನ್ನರ್ ಗಿಲ್ಲಿ ಈಗ ಬ್ಯುಸಿ. ಊರಿನಲ್ಲಿ ಮೆರವಣಿಗೆ ಮುಗಿಸಿ, ಸಿಎಂ ಭೇಟಿಯಾಗಿ ನಂತ್ರ ಅಪ್ಪು ಸಮಾಧಿಗೆ ಹೋಗಿ ಆಶೀರ್ವಾದ ಪಡೆದ ಗಿಲ್ಲಿ ಮುಂದೆ, ಮೈಕ್ ಬರ್ತಾನೇ ಇದೆ. ಒಂದಾದ್ಮೇಲೆ ಒಂದು ಮೀಡಿಯಾಕ್ಕೆ ಇಂಟರ್ವ್ಯೂ ನೀಡ್ತಿರುವ ಗಿಲ್ಲಿ, ಇನ್ನೂ ರಕ್ಷಿತಾ ಶೆಟ್ಟಿಯನ್ನು ಭೇಟಿಯಾಗಿಲ್ಲ.
ಎಲ್ಲಿದ್ದಾರೆ ರಕ್ಷಿತಾ ಶೆಟ್ಟಿ ?
ಇನ್ನು ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಕೂಡ ಒಂದ್ಕಡೆಯಿಂದ ಎಲ್ಲ ಚಾನೆಲ್ ಗೆ ಇಂಟರ್ವ್ಯೂ ನೀಡಿ ತಮ್ಮೂರಿಗೆ ತೆರಳಿದ್ದಾರೆ. ಅಲ್ಲಿ ದೊಡ್ಡ ಮೆರವಣಿಗೆಯಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೂಡ ಸಿಕ್ಕಿದೆ. ಬಿಗ್ ಬಾಸ್ ನಂತ್ರ ರಕ್ಷಿತಾಗೆ ಒಂದಿಷ್ಟು ಹೊಸ ಅವಕಾಶಗಳು ತೆರೆದುಕೊಳ್ಳೋ ಸಾಧ್ಯತೆ ದಟ್ಟವಾಗಿದೆ.
ಗಿಲ್ಲಿ ವಂಶದ ಕುಡಿ ರಕ್ಷಿತಾ
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಹಾಗೂ ಗಿಲ್ಲಿ ಬಾಂಡಿಂಗ್ ಚೆನ್ನಾಗಿತ್ತು. ಆರಂಭದಿಂದಲೂ ಗಿಲ್ಲಿ, ರಕ್ಷಿತಾ ಅವರನ್ನು ತಮ್ಮ ವಂಶದ ಕುಡಿ ಅಂತಾನೇ ಹೇಳಿಕೊಂಡು ಬಂದಿದ್ದಾರೆ. ಬಿಗ್ ಬಾಸ್ ಫಿನಾಲೆಯಲ್ಲಿ ರಕ್ಷಿತಾ ತಮ್ಮ ತಂಗಿ ಅಂತ ಗಿಲ್ಲಿ ಹೇಳಿದ್ದರು. ಗಿಲ್ಲಿ, ರಕ್ಷಿತಾ ಅವರನ್ನು ಸಾಕಷ್ಟು ಬಾರಿ ಗೋಳಾಡಿಸಿದ್ರೂ ರಕ್ಷಿತಾ ಮಾತ್ರ ಗಿಲ್ಲಿಯನ್ನು ದೂರಿಲ್ಲ.
ಗಿಲ್ಲಿ ಸ್ನೇಹಿತ ಎಂದ ರಕ್ಷಿತಾ
ಗಿಲ್ಲಿ, ರಕ್ಷಿತಾ ಅವರನ್ನು ತಂಗಿ ಅಂದ್ರೂ ರಕ್ಷಿತಾ ಮಾತ್ರ ಗಿಲ್ಲಿ ತಮ್ಮ ಫ್ರೆಂಡ್ ಅಂತಾನೇ ಹೇಳಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ ರಕ್ಷಿತಾ, ಗಿಲ್ಲಿಯವರನ್ನು ಬೆಸ್ಟ್ ಫ್ರೆಂಡ್ ರೀತಿ ನೋಡಿದ್ದಾರೆ. ಗಿಲ್ಲಿಯಲ್ಲಿ ಅಪ್ಪ, ಸ್ನೇಹಿತನ ಸ್ವಭಾವ ನೋಡ್ತೇನೆ ಎಂದಿದ್ದಾರೆ. ರಕ್ಷಿತಾಗೆ ಗಿಲ್ಲಿ ಅಂದ್ರೆ ವಿಶೇಷ ಪ್ರೀತಿ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯನ್ನು ಎಲ್ಲೂ ರಕ್ಷಿತಾ ಬಿಟ್ಟುಕೊಟ್ಟಿಲ್ಲ. ಹೊರಗೆ ಬಂದ್ಮೇಲೂ ಗಿಲ್ಲಿ ಬಗ್ಗೆ ಒಂದೇ ಒಂದು ನೆಗೆಟಿವ್ ಮಾತನ್ನು ರಕ್ಷಿತಾ ಆಡಿಲ್ಲ.
ರಕ್ಷಿತಾ ಹೊಗಳಿದ ಗಿಲ್ಲಿ
ಬೇರೆ ಬೇರೆ ಕೆಲ್ಸದಲ್ಲಿ ಬ್ಯುಸಿಯಿದ್ದ ಗಿಲ್ಲಿ ಈಗ ರಕ್ಷಿತಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್ಲಿಯಲ್ಲಿ ಅಪ್ಪ, ಅಣ್ಣ, ಸ್ನೇಹಿತ, ಮಾವನ ಮಗ ಎಲ್ಲರನ್ನೂ ನೋಡ್ತೇನೆ ಎಂದ ರಕ್ಷಿತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗಿಲ್ಲಿ, ರಕ್ಷಿತಾ ನನ್ನ ಹಾಗೆ. ತುಂಬಾ ಒಳ್ಳೆಯ ಹುಡುಗಿ. ಒಂದು ಬಾರಿ ಇಷ್ಟಪಟ್ಟರೆ ಅವರನ್ನು ಕೊನೆಯವರೆಗೂ ಬಿಟ್ಟುಕೊಡೋದಿಲ್ಲ. ರಕ್ಷಿತಾ ನೋಡಿದ್ರೆ ಅಮ್ಮನ ನೆನಪಾಗುತ್ತೆ. ರಕ್ಷಿತಾ ತುಂಬಾ ಕೇರ್ ಮಾಡ್ತಾರೆ. ಅವರ ಹತ್ತಿರ ಅನೇಕ ಕೆಲ್ಸ ಮಾಡಿಸಿದ್ದೇನೆ. ಆದ್ರೆ ಒಂದು ಸ್ವಲ್ಪವೂ ಅವರು ಬೇಸರ ಮಾಡಿಕೊಳ್ತಿರಲಿಲ್ಲ ಅಂತ ಗಿಲ್ಲಿ ಹೇಳಿದ್ದಾರೆ.
ರಕ್ಷಿತಾ ಗಿಲ್ಲಿ ಭೇಟಿ ಯಾವಾಗ?
ರಕ್ಷಿತಾ ಹಾಗೂ ಗಿಲ್ಲಿ, ಬಿಗ್ ಬಾಸ್ ಮುಗಿದ ಮೇಲೆ ಪರಸ್ಪರ ಭೇಟಿಯಾಗಿಲ್ಲ. ಇಬ್ಬರೂ ಸದ್ಯ ಬ್ಯುಸಿ. ರಕ್ಷಿತಾಗೆ ಗಿಲ್ಲಿ ಮನೆಗೆ ಹೋಗುವ ಮನಸ್ಸಿದೆ. ಇಂಟರ್ವ್ಯೂ ಮುಗಿಸಿ ಕಾರ್ ಹತ್ತುವಾಗ ಅದು ಗಿಲ್ಲಿ ಊರಿನವರದ್ದು ಎಂಬ ವಿಷ್ಯ ಗೊತ್ತಾಗ್ತಿದ್ದಂತೆ ಗಿಲ್ಲಿ ಮನೆಗೆ ಕರೆದುಕೊಂಡು ಹೋಗ್ತೀರಾ ಅಂತ ರಕ್ಷಿತಾ ಕೇಳಿದ್ದರು. ನಂತ್ರ ಬೇಡ, ಅವರು ಬ್ಯುಸಿ ಅಂತ ಮಾತು ಬದಲಿಸಿದ್ದರು. ರಕ್ಷಿತಾಗೆ ಗಿಲ್ಲಿ ಭೇಟಿಯಾಗುವ ಹಾಗೂ ಮನೆಗೆ ಹೋಗುವ ಮನಸ್ಸಿದೆ. ಗಿಲ್ಲಿ ಯಾವಾಗ ರಕ್ಷಿತಾ ಅವರನ್ನು ಕರೆಯುತ್ತಾರೆ, ಮನೆಗೆ ಕರೆದುಕೊಂಡು ಹೋಗ್ತಾರೆ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

