11 ವರ್ಷಗಳಿಂದ ಕನ್ನಡ ಬಿಗ್ ಬಾಸ್ ನಿರೂಪಿಸುತ್ತಿರುವ ಕಿಚ್ಚ ಸುದೀಪ್, 11ನೇ ಆವೃತ್ತಿಯೊಂದಿಗೆ ವಿದಾಯ ಹೇಳುತ್ತಿದ್ದಾರೆ. ಚಿತ್ರರಂಗದತ್ತ ಗಮನ ಹರಿಸಲು ಮತ್ತು ಹೊಸ ಅವಕಾಶಗಳಿಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರೂ, ಸುದೀಪ್‌ರ ನಿರ್ಧಾರವನ್ನು ಗೌರವಿಸುತ್ತೇವೆ ಎಂದಿದ್ದಾರೆ. ಕಲರ್ಸ್ ಕನ್ನಡಕ್ಕೆ ಕೃತಜ್ಞತೆ ಸಲ್ಲಿಸಿರುವ ಸುದೀಪ್, ಹೊಸ ಅವಕಾಶಗಳ ಬಗ್ಗೆ ಉತ್ಸುಕರಾಗಿದ್ದಾರೆ.

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸುಮಾರು 11 ವರ್ಷಗಳಿಂದ ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. 2013ರಲ್ಲಿ ಆರಂಭವಾದ ಕನ್ನಡದ ಖ್ಯಾತ ರಿಯಾಲಿಟಿ ಶೋಗೆ ಕಿಚ್ಚ ಹೋಸ್ಟ್‌ ಆಗಿದ್ದರು, ಪ್ರತಿ ವೀಕೆಂಡ್‌ ಸ್ಪರ್ಧಿಗಳ ಜೊತೆ ಗಂಟೆಗಟ್ಟಲೆ ಮಾತನಾಡಿ ಸರಿ ತಪ್ಪುಗಳನ್ನು ತಿದ್ದುತ್ತಿದ್ದರು. ಈಗ ನಾನಾ ಕಾರಣಗಳಿಂದ ಸುದೀಪ್ ರಿಯಾಲಿಟಿ ಶೋನಿಂದ ಹೊರ ಬರಲು ನಿರ್ಧರಿಸಿದ್ದರು. ಈ ವಿಚಾರವನ್ನು ಈ ಹಿಂದೆಯೇ ರಿವೀಲ್ ಮಾಡಿದ್ದರು ಆದರೆ ಈಗ ಮತ್ತೊಮ್ಮೆ ವಿದಾಯದ ಪೋಸ್ಟ್ ಹಾಕಿದ್ದಾರೆ.

ಕಿಚ್ಚ ಸುದೀಪ್ ಪೋಸ್ಟ್‌: 

'ಬಿಗ್ ಬಾಸ್ ಕಾರ್ಯಕ್ರಮವನ್ನು ಸುಮಾರು 11 ವರ್ಷಗಳಿಂದ ಎಂಜಾಯ್ ಮಾಡಿದ್ದೀನಿ. ನೀವು ತೋರಿಸಿರುವ ಪ್ರೀತಿಗೆ ಧನ್ಯವಾದಗಳು. ಸೀಸನ್ 11ರ ಫಿನಾಲೆ ನನ್ನ ಕೊನೆ ಹೋಸ್ಟ್‌ ಆಗಿರಲಿದೆ. ನಿಮ್ಮನ್ನು ಆದಷ್ಟು ಮನೋರಂಜಿಸುವ ಪ್ರಯತ್ನ ಮಾಡುತ್ತೀನಿ. ಖಂಡಿತಾ ಮರೆಯಲಾಗದ ಜರ್ನಿ ಇದು. ಅದ್ಭುತವಾಗಿ ಹ್ಯಾಂಡಲ್‌ ಮಾಡಿದ್ದೀನಿ. ಧನ್ಯವಾದಗಳು ಕಲರ್ಸ್ ಕನ್ನಡ ಈ ಅವಕಾಶವನ್ನು ಕೊಟ್ಟಿದ್ದಕ್ಕೆ' ಎಂದು ಸುದೀಪ್ ಬರೆದುಕೊಂಡಿದ್ದಾರೆ. ಸುದೀಪ್ ಪೋಸ್ಟ್ ನೋಡಿ ಅಭಿಮಾನಿಗಳು ಬೇಸರಗೊಂಡರೂ ನಿರ್ಧಾರವನ್ನು ಒಪ್ಪಿಕೊಂಡಿದ್ದೀವಿ ಎಂದು ಕಾಮೆಂಟ್ ಮಾಡಿದ್ದಾರೆ. 

Scroll to load tweet…

ಕಳೆದ ಅಕ್ಟೋಬರ್ 13ರಂದು ತಮ್ಮ 'X' ನಲ್ಲಿ ಟ್ವೀಟ್ ಮಾಡಿ, ಬಿಗ್ ಬಾಸ್ ಈ ಸೀಸನ್, ಅಂದರೆ 11 ನನ್ನ ಕೊನೆಯ ಸೀನಸ್ ಎಂದಿದ್ದಾರೆ ನಟ ಸುದೀಪ್. ಜೊತೆಗೆ, ನೀವೆಲ್ಲಾ ಬಿಗ್ ಬಾಸ್‌ಗೆ ತೋರಿಸುತ್ತಿರುವ ರೆಸ್ಪಾನ್ಸ್‌ಗೆ ತುಂಬಾ ಥ್ಯಾಂಕ್ಸ್. ಟಿಆರ್‌ಪಿ ಕೂಡ ನಿಮ್ ಪ್ರೀತಿ-ವಿಶ್ವಾಸವನ್ನು ಸಾರಿ ಹೇಳುತ್ತಿವೆ. ಆದರೆ, ಈ ಬಿಗ್ ಬಾಸ್ ಬಿಟ್ಟು ನಾನು ಮುಂದೇನು ಮಾಡಬೇಕೆಂದು ಯೋಚಿಸಿ ನಿರ್ಧರಿಸಲು ಇದು ಸೂಕ್ತ ಸಮಯ. ಬಿಗ್ ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್. ನನ್ನ ಈ ನಿರ್ಧಾರವನ್ನು ಕಲರ್ಸ್ ಕನ್ನಡ ವಾಹಿನಿ, ವೀಕ್ಷಕರು ಹಾಗು ಸಂಬಂಧಪಟ್ಟ ಎಲ್ಲರೂ ಗೌರವಿಸುತ್ತಾರೆ ಎಂದೇ ನಾನು ಭಾವಿಸುತ್ತೇನೆ. ನನ್ನ ಸಿನಿಮಾ ತೆರೆಗೆ ಬರದೇ ವರ್ಷಗಳೇ ಕಳೆದಿವೆ. ನನ್ನ ಸಿನಿಮಾ ಪ್ರೇಕ್ಷಕರಿಗೆ ಕೂಡ ನಾನು ನಿರಾಸೆ ಮಾಡಲಾರೆ. ಬಿಗ್ ಬಾಸ್ ವೀಕ್ಷಕರು, ಬಿಗ್ ಬಾಸ್ ಪ್ರಿಯರಷ್ಟೇ ನನಗೆ ಸಿನಿಮಾ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಕೂಡ ಮುಖ್ಯ. ಹೀಗಾಗಿ ಹತ್ತು ಹಾಗೂ ಮತ್ತೊಂದು ಸೀಸನ್ ಮುಗಿದ ಬಳಿಕ ನಾನು ಬಿಗ್ ಬಾಸ್‌ ಶೋದಿಂದ ಹೊರಬರುತ್ತಿದ್ದೇನೆ' ಎಂದಿದ್ದರು ನಟ ಕಿಚ್ಚ ಸುದೀಪ್. 

ಗೆದ್ದು ಬಂದು ಕೇಳಿದ್ರೆ ಓಕೆ ಅಂತಿದ್ದೆ, ಈಗ ಹೊರ ಬಂದ್ಮೇಲೆ ಹೇಳ್ತೀನಿ: ತ್ರಿವಿಕ್ರಮ್ ಪ್ರಪೋಸಲ್‌ಗೆ ಭವ್ಯಾ ಉತ್ತರ

'ಬಿಗ್ ಬಾಸ್‌ ಶೋವನ್ನು ಚೆನ್ನಾಗಿಯೇ ನಡೆಸಿಕೊಂಡು ಬಂದಿದ್ದೇವೆ. ಬುರ್ಜ್‌ ಖಲೀಪಾ ತರ ಎತ್ತರಕ್ಕೆ ತೆಗೆದುಕೊಂಡು ಹೋಗಲಾಗಿದೆ. ಹಾಗಂತ ನಾನೇ ಮುಂದುವರಿಯಬೇಕು, ನಾನೇ ಮಾಡ್ಬೇಕು ಅಂತ ಆಸೆ ಏನೂ ಇಲ್ವಲ್ಲ. ಬೇರೆಯವರು ಮುಂದೆ ನಡೆಸಿಕೊಂಡು ಹೋದರೆ ಬೇಸರವೇನೂ ಇಲ್ಲ. ಕಳೆದ ಎರಡೂವರೆ ವರ್ಷದಿಂದ ನನ್ನ ಒಂದೇ ಒಂದು ಸಿನಿಮಾ ಸಿನಿಮಾ ತೆರೆಗೆ ಬಂದಿಲ್ಲ. ಹಾಗಂತ ಅದಕ್ಕೇ ಬಿಗ್ ಬಾಸ್‌ನಿಂದ ಹೊರಗೆ ಉಳಿಯೋ ಯೋಚನೆ ಮಾಡಿಲ್ಲ. ಆದರೆ ಈಗ ಸಾಕು ಎನ್ನಿಸಿದೆ. ಅದಕ್ಕೆ ಸರಿಯಾದ ಟೈಮ್ ಕೂಡ ಕೂಡಿ ಬಂದಿದೆ. ಅಷ್ಟು ಬಿಟ್ರೆ ಮತ್ತೇನೂ ಹೇಳಲಾಗದ, ಹೇಳಬಾರದ ಕಾರಣಗಳೇನೂ ಇಲ್ಲ. ನಾನು ಇಷ್ಟು ಸಮಯ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ' ಎಂದು ಹೇಳಿದ್ದರು ನಟ ಕಿಚ್ಚ ಸುದೀಪ್. 

ಜಗದೀಶ್ ಕೊಟ್ಟ ಕಿರುಕುಳ ಮರೆಯಲ್ಲ; ರೋಲ್ ಕಾಲ್ ಲಾಯರ್‌ ಎಂದಿದ್ದಕ್ಕೆ ಕ್ಲಾರಿಟಿ ಕೊಟ್ಟ ಚೈತ್ರಾ ಕುಂದಾಪುರ