ಬಿಗ್‌ಬಾಸ್‌ನಿಂದ ಹೊರಬಂದ ಗೌತಮಿ ಜಾದವ್, ಯಮುನಾ ಶ್ರೀನಿಧಿ ಅವರ ಕನ್ನಡ ಭಾಷಾ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹತ್ತನೇ ತರಗತಿವರೆಗೂ ಕನ್ನಡ ಓದಿದ್ದು, ಸೀರಿಯಲ್‌ಗಳಲ್ಲಿ ಸ್ಕ್ರಿಪ್ಟ್ ಓದಿ ಡೈಲಾಗ್ ಹೇಳಿದ್ದನ್ನು ಉದಾಹರಿಸಿದ್ದಾರೆ. ಟಾಸ್ಕ್ ಪುಸ್ತಕ ಓದುವ ಜವಾಬ್ದಾರಿಯನ್ನು ಇತರರಿಗೆ ವಹಿಸಿದ್ದು ತಪ್ಪುಗಳನ್ನು ತಪ್ಪಿಸುವ ಉದ್ದೇಶದಿಂದ ಎಂದಿದ್ದಾರೆ.

ಬಿಗ್ ಬಾಸ್ ಸೀಸನ್ 11ರಿಂದ ಗೌತಮಿ ಜಾದವ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಹೊರ ಬರುತ್ತಿದ್ದಂತೆ ಫ್ಯಾಮಿಲಿ ಜೊತೆ ಸಮಯ ಕಳೆದು ತಮ್ಮ ಇಷ್ಟ ದೈವ ವನದುರ್ಗೆ ದರ್ಶನ ಪಡೆದಿದ್ದಾರೆ. ಅದಾದ ಮೇಲೆ ಸಂದರ್ಶನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಕ್ಲಾರಿಟಿ ನೀಡುತ್ತಿದ್ದಾರೆ. ಗೌತಮಿ ಮನೆಯಲ್ಲಿ ಸ್ಪರ್ಧಿಸುತ್ತಿದ್ದಾಗ ಎಲಿಮಿನೇಟ್ ಆಗಿ ಹೊರ ಬಂದಿದ್ದ ಯಮುನಾ ಶ್ರೀನಿಧಿ ಒಂದು ಆರೋಪ ಮಾಡಿದ್ದರು. ಯಾಕೆ ಗೌತಮಿ ಕನ್ನಡ ಓದುವುದಿಲ್ಲ ಅಲ್ಲದೆ ಯಾಕೆ ನಾಡಗೀತೆ ಹಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಆಗ ಸಖತ್ ಸುದ್ದಿಯಾಗಿತ್ತು. ಈ ವಿಚಾರಕ್ಕೆ ಈಗ ಗೌತಮಿ ಕ್ಲಾರಿಟಿ ನೀಡಿದ್ದಾರೆ. 

'ನನ್ನ ಕನ್ನಡ ಭಾಷೆ ಬಗ್ಗೆ ಯಮುನಾ ಅವರು ಮಾತನಾಡಿದ್ದಾರೆ ಎಂದು ಗೊತ್ತಾಗಿದೆ. ನನಗೆ ಕನ್ನಡ ಓದಲು ಬರುವುದಿಲ್ಲ ಅಂತ ಏನೂ ಇಲ್ಲ ಏಕೆಂದರೆ 10ನೇ ಕ್ಲಾಸ್‌ವರೆಗೂ ನಾನು ಕನ್ನಡ ಓಡಿದ್ದೀನಿ. ಈ ಹಿಂದೆ ಮಾಡಿದ್ದು ಕನ್ನಡ ಸೀರಿಯಲ್‌ ಅಲ್ಲಿ ಸ್ಕ್ರಿಪ್ಟ್‌ ಓದಿನೇ ಡೈಲಾಗ್ ಹೇಳುವುದಕ್ಕೆ ಸಾಧ್ಯವಾಗುವುದು. ಇದುವರೆಗೂ ಪ್ರತಿಯೊಬ್ಬರು ನನ್ನನ್ನು ಹೊಗಳಿರುವುದು ನಾನು ಮಾತನಾಡುವ ಶೈಲಿಗೆ ತುಂಬಾ ಚೆನ್ನಾಗಿ ಸ್ಪಷ್ಟವಾಗಿ ಮಾತನಾಡುತ್ತೀರಿ ಎಂದು. ಕನ್ನಡ ಚೆನ್ನಾಗಿ ಮಾತನಾಡುವ ಪ್ರಯತ್ನ ಮಾಡುತ್ತೀನಿ. ನಾನು ಮರಾಠಿ ಹುಡುಗಿ ಅನ್ನೋದು ನಿಜ. ನನ್ನ ತಂದೆ ಮರಾಠಿ ಆಗಿರುವ ಕಾರಣ ಮನೆಯಲ್ಲಿ ಮರಾಠಿ ಮಾತನಾಡುತ್ತೀವಿ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ ಬುಕ್ ಓದುವ ವಿಚಾರವಾಗಿ ಸ್ಪಷ್ಟನೆ ಕೊಡಬೇಕು...ನಾನು ಮತ್ತೊಬ್ಬರಿಗೆ ಓದಲು ಕೊಡುತ್ತೀನಿ ಅಂದ್ರೆ ನನಗೆ ಓದಲು ಬರುವುದಿಲ್ಲ ಅಂತಲ್ಲ ನಾನು ಓದಿ ತಪ್ಪು ಮಾಡಿದರೆ ಅಥವಾ ಎದುರು ಕುಳಿತಿರುವ 15-17 ಸ್ಪರ್ಧಿಗಳ ದಾರಿ ತಪ್ಪಿಸಬಾರದು ಎಂದು. ಚೆನ್ನಾಗಿ ಓದುವವರಿಗೆ ಕೊಟ್ಟರೆ ನೀಟ್ ಆಗಿ ಓದಿ ಮುಗಿಸುತ್ತಾರೆ ಸುಲಭವಾಗಿ ಮತ್ತೊಬ್ಬರಿಗೆ ಅರ್ಥವಾಗುತ್ತದೆ. ಯಾಕೆ ಯಮುನಾ ಅವರು ಈ ಮಾತುಗಳನ್ನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ನನಗಿಂತ ಚೆನ್ನಾಗಿ ಓದಲು ಅಲ್ಲಿದ್ದ ಮತ್ತೊಬ್ಬರಿಗೆ ಬರುತ್ತಿತ್ತು ಅಂತ ಕೊಟ್ಟಿದ್ದು ಅಷ್ಟೇ' ಎಂದು ಗೌತಮಿ ಖಡಕ್ ಕ್ಲಾರಿಟಿ ನೀಡಿದ್ದಾರೆ.

12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ಕೊಂಡು ಗೌತಮಿಗೆ ಕನ್ನಡ ಓದಲು ಬರೆಯಲು ಬರಲ್ಲ; ಯಮುನಾ ಶ್ರೀನಿಧಿ ಗರಂ

ಯಮುನಾ ಹೇಳಿಕೆ:

'ಸೋಷಿಯಲ್ ಮೀಡಿಯಾದಲ್ಲಿ ನಾನು ಒಂದು ವಿಚಾರ ಗಮನಿಸಿದ್ದೀನಿ ಆದರೆ ಯಾಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡದಾಗಿಲ್ಲ ನನಗೆ ಗೊತ್ತಿಲ್ಲ. ನವೆಂಬರ್ 1ರಂದು ಕನ್ನಡಿಗರು ಹೆಮ್ಮೆ ಪಡುವ ದಿನ, ಕನ್ನಡ ರಾಜ್ಯೋತ್ಸವ ದಿನವನ್ನು ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬರು ಹೆಮ್ಮೆಯಿಂದ ಆಚರಿಸುತ್ತಾರೆ. ಎಲ್ಲರೂ ನಾಡ ಗೀತೆ ಹಾಡುವಾಗ ಗೊತ್ತಿರುವವರು ಜೋರಾಗಿ ಶಿಶಿರ್ ತರ ಹಾಡುತ್ತಾರೆ. ನಾಡಗೀತೆ ಗೊತ್ತಿಲ್ಲದೆ ಇರುವವರು ಆದಷ್ಟು ಹಾಡುತ್ತಾರೆ ಇಲ್ಲವಾದರೆ ಲಿಪ್ ಸಿಂಕ್ ಮಾಡುತ್ತಾರೆ. ಎಲ್ಲರಿಗೂ ಎಲ್ಲ ಸಾಲುಗಳು ಬರುತ್ತೆ ಅಂತ ಹೇಳಲು ಆಗಲ್ಲ. ಆದರೆ ಅಲ್ಲಿರುವ ಗೌತಮಿ ಬಾಯಿ ಮುಚ್ಚಿಕೊಂಡು ನಿಂತಿರುತ್ತಾರೆ. ನಾವು ಹೊರ ದೇಶಕ್ಕೆ ಹೋದಾಗ ಅಲ್ಲಿನ ಭಕ್ತಿ ಗೀತ ಬರಲ್ಲ ಅಂತ ಸುಮ್ಮನೆ ನಿಂತಿರುತ್ತೀವಿ ತಾನೇ ಹಾಗೆ ಬಿಗ್ ಬಾಸ್ ಮನೆಯಲ್ಲಿ ನಿಂತಿದ್ದರು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಯಮುನಾ ಶ್ರೀನಿಧಿ ಮಾತನಾಡಿದ್ದಾರೆ.

ಬಿಗ್ ಬಾಸ್‌ ಕೊಟ್ಟ ಪೇಮೆಂಟ್‌, ಗಂಡ ಮಾಡಿದ ಶಾಪಿಂಗ್; ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ಗೌತಮಿ ಜಾದವ್