ಯಾರ ಬಾಲವನ್ನು ಹಿಡಿಯೋಕೆ ಹೋಗ್ಬೇಡ,ಅವಳ ಜೊತೆಯಲ್ಲಿರೋದು ಬೇಡ; ಉಗ್ರಂ ಮಂಜುಗೆ ಸಹೋದರಿ ವಾರ್ನಿಂಗ್
ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ನೇರ ಬಾಣ ಬಿಟ್ಟ ಸಹೋದರಿ. ಇಲ್ಲಿಂದ ಆದರೂ ಮಂಜು ಎಚ್ಚತ್ತಿಕೊಳ್ಳಬೇಕು ಅಂತಿದ್ದಾರೆ ಫ್ಯಾನ್ಸ್.....
ಬಿಗ್ ಬಾಸ್ ಸೀಸನ್ 11ರಲ್ಲಿ ಈಗ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಈಗಾಗಲೆ ಭವ್ಯಾ ಗೌಡ, ತ್ರಿವಿಕ್ರಮ್, ರಜತ್ ಕಿಶನ್, ಮೋಕ್ಷಿತಾ, ಗೌತಮಿ, ಚೈತ್ರಾ ಕುಂದಾಪುರ ಫ್ಯಾಮಿಲಿ ಆಗಮಿಸಿದ್ದಾರೆ. ನಿನ್ನೆ ಉಗ್ರಂ ಮಂಜು ಫ್ಯಾಮಿಲಿ ಮತ್ತು ಗೌತಮಿ ಫ್ಯಾಮಿಲಿ ಒಟ್ಟಿಗೆ ಆಗಮಿಸಿದ್ದರು. ಉಗ್ರಂ ಮಂಜು ತಂದೆ ರಾಗಿ ರಾಮಣ್ಣ, ತಾಯಿ ಲಲಿತಮ್ಮ, ಸಹೋದರಿ ದೀಪಿಕಾ ಮತ್ತು ಅವರ ಮಗಳು ನಕ್ಷಿತಾ ಆಗಮಿಸಿದ್ದರು. ಗೌತಮಿ ಪತಿ ಕೇಕ್ ಜೊತೆ ಆನಿವರ್ಸರಿ ಆಚರಿಸಲು ಎಂಟ್ರಿ ಕೊಟ್ಟರು.
ಈ ವೇಳೆ ಮಂಜುನ ಸೈಡಿಗೆ ಕರೆದುಕೊಂಡು ಹೋದ ಸಹೋದರಿ 'ಇಂತಹ ಚಿನ್ನದ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡ ಪ್ಲೀಸ್. ನೀನು ಚೆನ್ನಾಗಿ ಆಡುತ್ತಿದ್ದೀಯಾ ಆದರೆ ನಿನ್ನ ಪ್ರತಿಭೆಯನ್ನು ನೀನು ಹೊರ ಹಾಕಿಲ್ಲ. ಅದೊಂದು ಇದೆ. ಯಾರ ಬಾಲವನ್ನು ಹಿಡಿಯೋಕೆ ಹೋಹಬೇಡ. ಯಾಕೆ ಮಂಕಾಗಿದ್ದೀಯಾ ಅಂತ ಗೊತ್ತಿಲ್ಲ. ಇದೆ ರೈಟ್ ಪೀಕ್ ಟೈಮ್. ನಿನ್ನ ಬಳಿ ಈಗ ಟೈಮ್ ಇಲ್ಲ. ಇಲ್ಲಿಂದ ಪ್ರತಿ ಕ್ಷಣವೂ ಮುಖ್ಯ. ನಿನ್ನನ್ನು ದಾಟಿ ಬೇರೆಯವರು ಮುಂದಕ್ಕೆ ಹೋಗ್ತಿದ್ದಾರೆ ಅದನ್ನು ನೀನು ತಡೆಯಬೇಕು. ನಿನ್ನನ್ನು ನೋಡಬೇಕು' ಎಂದು ದೀಪಿಕಾ ನೇರವಾಗಿ ಹೇಳುತ್ತಾರೆ.
ಈ ವರ್ಷ ನನ್ನ ಎರಡೂ ನಾಯಿಗಳಿಗೆ ಕ್ರಾಸಿಂಗ್ ಮಾಡಿಸುವುದೇ ನನ್ನ ದೊಡ್ಡ ಕನಸು: ಸೋನು ಶ್ರೀನಿವಾಸ್ ಗೌಡ
ಕಳೆದ ಒಂದೆರಡು ವಾರಗಳಿಂದ ಗೌತಮಿ ಮತ್ತು ಮಂಜು ನಡುವೆ ಮನಸ್ಥಾಪಗಳು ಉಂಟಾಗುತ್ತಿದೆ. ಸರಿಯಾಗಿ ಗೇಮ್ ಆಟವಾಡುತ್ತಿಲ್ಲ ಹಾಗೂ ವೀಕ್ಷಕರನ್ನು ಮನೋರಂಜಿಸುತ್ತಿಲ್ಲ ಎಂದು ಇತರ ಸ್ಪರ್ಧಿಗಳು, ಕಿಚ್ಚ ಸುದೀಪ್ ಮತ್ತು ವೀಕ್ಷಕರು ಹೇಳಿದ ಮೇಲೂ ಮಂಜು ಬದಲಾಗಲಿಲ್ಲ. ಹೀಗಾಗಿ ಸಹೋದರಿ ಫ್ಯಾಮಿಲಿ ರೌಂಡ್ ಮೂಲಕ ಎಂಟ್ರಿ ಕೊಟ್ಟು ವಾರ್ನಿಂಗ್ ಕೊಟ್ಟಿದ್ದಾರೆ. ಮಂಜು ಮತ್ತು ಸಹೋದರಿ ಮಾತನಾಡುತ್ತಿರುವ ಸಣ್ಣ ಪುಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಯ್ಯೋ ಯಾರ ಮಾತು ಕೇಳದ ಮಂಜು ನಿಮ್ಮ ಮಾತುಗಳನ್ನ ಕೇಳುತ್ತಾನಾ? ಸುದೀಪ್ ಸರ್ ಅಷ್ಟು ಸಲ ವಾರ್ನಿಂಗ್ ಕೊಟ್ಟಿದ್ದಾರೆ ಯಾಕೆ ಅದನ್ನು ಅಲ್ಲಿಯೇ ಮರೆತು ಮತ್ತೆ ಅವಳ ಹಿಂದೆ ಹೋಗುತ್ತಾನೆ? ಅವಳಿ ಮದುವೆ ಆಗಿದೆ ಜೀವನ ಇದೆ ಶೋಯಿಂದ ಏನೂ ಆಗಬೇಕಿಲ್ಲ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಒಂಟಿಯಾಗಿ ಬಾಲಿಗೆ ಹೊರಟ ಅನುಪಮಾ; ಫೋಟೋ ತೆಗೆದಿದ್ದು ಯಾರು ಅಂತಿದ್ದಾರೆ ಫ್ಯಾನ್ಸ್